ಅಮಾವಾಸ್ಯೆ ಸಮಯದಲ್ಲಿ ಅಪರಾಧ ಹೆಚ್ಚಳ, ಹಿಂದೂ ಪಂಚಾಂಗ ಪ್ರಕಾರ ಭದ್ರತಾ ಸಿದ್ಧತೆಗಾಗಿ ಯುಪಿ ಡಿಜಿಪಿ ಸೂಚನೆ
ಅಮಾವಾಸ್ಯೆಯ ಅವಧಿಯಲ್ಲಿ ಅಪರಾಧದ ಘಟನೆಗಳು ಹೆಚ್ಚಾಗುತ್ತವೆ ಎಂದು ಉತ್ತರ ಪ್ರದೇಶದ ಡಿಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ. ಅಮವಾಸ್ಯೆಯ ಒಂದು ವಾರದ ಹಿಂದಿನ ರಾತ್ರಿ ಮತ್ತು ನಂತರದ ವಾರದಲ್ಲಿ ಅಪರಾಧಗಳು ಹೆಚ್ಚಾಗಿರುವುದರನ್ನು ತಿಳಿದ ಅವರು ಹಿಂದೂ ಕ್ಯಾಲೆಂಡರ್ ಪ್ರಕಾರ ಭದ್ರತಾ ಸಿದ್ಧತೆಗಳನ್ನು ನಡೆಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ಲಕ್ನೋ, ಆಗಸ್ಟ್ 22: ಅಮಾವಾಸ್ಯೆಯ ಸಂದರ್ಭದಲ್ಲಿ ಅಪರಾಧದ ಕೃತ್ಯಗಳು ಹೆಚ್ಚಾಗುತ್ತವೆ ಎಂದು ಹೇಳಿದ ಉತ್ತರ ಪ್ರದೇಶದ (Uttar Pradesh) ಡಿಜಿಪಿ ವಿಜಯ್ ಕುಮಾರ್ ಅವರು ಪಂಚಾಂಗ ಅಥವಾ ಹಿಂದೂ ಕ್ಯಾಲೆಂಡರ್ ಪ್ರಕಾರ ಭದ್ರತಾ ಸಿದ್ಧತೆಗಳನ್ನು ಮಾಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿದರು.
ಪೊಲೀಸ್ ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳ ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ವಿಜಯ್ ಕುಮಾರ್ ಅವರು ಅಮಾವಾಸ್ಯೆಯ ಒಂದು ವಾರದ ಹಿಂದಿನ ರಾತ್ರಿ ಮತ್ತು ನಂತರದ ವಾರದಲ್ಲಿ ಅಪರಾಧಗಳು ಹೆಚ್ಚಾಗಿರುವುದನ್ನು ತಿಳಿಸಿದ್ದಾರೆ.
ಚಂದ್ರ ಕ್ಷೀಣಿಸುವ ಮತ್ತು ಬೆಳೆಯುತ್ತಿರುವ ಹಂತಕ್ಕೆ ಅನುಗುಣವಾಗಿ ಪೋಲೀಸಿಂಗ್ ಮಾಡಿದರೆ, ಹಿಂದೂ ಪಂಚಾಂಗವನ್ನು ಅನುಸರಿಸುವುದು ತುಂಬಾ ಸುಲಭ ಮತ್ತು ಇದು ಅವಶ್ಯಕವಾಗಿದೆ. ಕ್ರಿಮಿನಲ್‌ಗಳು ಯಾವ ಸಮಯದಲ್ಲಿ ಅಪರಾಧ ಮಾಡುತ್ತಾರೆ ಎಂಬುದು ಜನರಿಗೆ ತಿಳಿಯುತ್ತದೆ ಎಂದು ಕುಮಾರ್ ಹೇಳಿದರು.
ಇದನ್ನೂ ಓದಿ: ಉತ್ತರ ಪ್ರದೇಶ: ಹಿಂದೂ ಯುವತಿಯನ್ನು ಪ್ರೇಮಿಸಿದ ಮುಸ್ಲಿಂ ಯುವಕನ ಹೆತ್ತವರನ್ನು ಹೊಡೆದುಕೊಂದ ಜನ
ಪೂರಣ್ಮಾಶಿ, ಸಪ್ತಮಿ, ಪೂರ್ಣಿಮಾ ಮತ್ತು ಅಮವಾಸ್ಯೆಯ ಸಮಯದಲ್ಲಿ ಚಂದ್ರನ ಚಲನೆಯನ್ನು ವಿವರಿಸುತ್ತಾ, ಅಪರಾಧಿಗಳು ಅಪರಾಧಗಳನ್ನು ಮಾಡಲು ದೀರ್ಘ ಕತ್ತಲೆಯ ರಾತ್ರಿಗಳನ್ನು ಬಳಸುತ್ತಾರೆ ಎಂದು ಅವರು ಹೇಳಿದ್ದಾರೆ.
“ಅಮಾವಾಸ್ಯೆಯ ಮೊದಲು ಮತ್ತು ನಂತರ ಏಳು ದಿನಗಳ ಕಾಲ ರಾತ್ರಿಗಳು ಕತ್ತಲೆಯಾಗಿರುತ್ತವೆ. ಚಂದ್ರ ಉದಯಿಸುವಾಗ, ಪೂರ್ಣಮಾಶಿ ಬಂದಾಗ, ಅಮಾವಾಸ್ಯೆ ಬಂದಾಗ, ಅರ್ಧ ಚಂದ್ರ ಇದ್ದಾಗ ನಾವು ಜಾಗರೂಕರಾಗಿರಬೇಕು. ನಮಗೆ ಅದು ತಿಳಿದಿದ್ದರೆ, ಅದಕ್ಕೆ ಅನುಗುಣವಾಗಿ ನಾವು ಪೊಲೀಸ್ ಚಟುವಟಿಕೆಯನ್ನು ಸಂಘಟಿಸಬಹುದು. ಇದು ಬಹಳ ವೈಜ್ಞಾನಿಕ ವಿಧಾನವಾಗಿದೆ” ಎಂದು ಅವರು ಹೇಳಿದರು.
ಅಪರಾಧಿಗಳು ಯಾವಾಗ ಹೆಚ್ಚು ದಾಳಿ ನಡೆಸುತ್ತಾರೆ ಮತ್ತು ಅವರು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಹಿಂದೂ ಕ್ಯಾಲೆಂಡರ್ ಜನರಿಗೆ ಉಪಯುಕ್ತವಾಗಿದೆ ಎಂದು ಹೇಳಿದರು. 1998ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಕುಮಾರ್ ಅವರನ್ನು ಜೂನ್‌ನಲ್ಲಿ ಡಿಜಿಪಿಯಾಗಿ ನೇಮಿಸಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ