ನವದೆಹಲಿ, ಆಗಸ್ಟ್ 22: ಭಾರತೀಯ ಕ್ರಿಕೆಟ್ ದಂತಕಥೆ ಹಾಗೂ ಭಾರತ ರತ್ನ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಮತದಾರರ ಜಾಗೃತಿ ಮತ್ತು ಮತದಾನದ ಕುರಿತು ಜನರಲ್ಲಿ ಅರಿವು ಮೂಡಿಸಲು ಭಾರತದ ಚುನಾವಣಾ ಆಯೋಗದ (Election Commission of India) ರಾಷ್ಟ್ರೀಯ ಐಕಾನ್ (National Icon) ಆಗಿ ಬುಧವಾರ ಹೊಸ ಇನ್ನಿಂಗ್ಸ್ ಪ್ರಾರಂಭಿಸಲಿದ್ದಾರೆ. ಮೂರು ವರ್ಷಗಳ ಕಾಲ ಮತದಾರರ ಜಾಗೃತಿ ರಾಯಭಾರಿಯಾಗಿ ಇರಲು ತೆಂಡೂಲ್ಕರ್ ಅವರೊಂದಿಗೆ ಬುಧವಾರ ತಿಳುವಳಿಕೆ ಪತ್ರಕ್ಕೆ ಸಹಿ ಹಾಕುವುದಾಗಿ ಭಾರತೀಯ ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ.
ಈ ಸಹಯೋಗವು ಮುಂಬರುವ ಚುನಾವಣೆಗಳಲ್ಲಿ, ವಿಶೇಷವಾಗಿ 2024 ರ ಲೋಕಸಭೆ ಚುನಾವಣೆಯಲ್ಲಿ ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ಯುವ ಜನರಲ್ಲಿ ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತೆಂಡೂಲ್ಕರ್ ವರ್ಚಸ್ಸು ಮಹತ್ವದ ಪರಿಣಾಮ ಬೀರಲಿದೆ. ಈ ಪಾಲುದಾರಿಕೆಯ ಮೂಲಕ ಸಾಮಾನ್ಯ ನಾಗರೀಕರು, ಯುವಕರು ಮತ್ತು ನಗರ ಜನಸಂಖ್ಯೆಯ ನಡುವಿನ ಮತದಾನದ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ. ಈ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ನಗರದ ಜನತೆ ಮತ್ತು ಯುವ ಜನತೆಯ ನಿರಾಸಕ್ತಿಯ ಸವಾಲುಗಳನ್ನು ಎದುರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.
ತೆಂಡೂಲ್ಕರ್ ಹೊರತುಪಡಿಸಿ, ಆಯೋಗವು ಸದ್ಯ ಇಬ್ಬರು ರಾಷ್ಟ್ರೀಯ ಐಕಾನ್‌ಗಳನ್ನು ಹೊಂದಿದೆ. ಅವರೆಂದರೆ, ನಟ ಪಂಕಜ್ ತ್ರಿಪಾಠಿ ಮತ್ತು ಸಾಮಾಜಿಕ ಕಾರ್ಯಕರ್ತ ಡಾ. ನಿರು ಕುಮಾರ್ ಆಗಿದ್ದಾರೆ. 2019 ರ ಲೋಕಸಭಾ ಚುನಾವಣೆಗಾಗಿ, ಚುನಾವಣಾ ಆಯೋಗವು ಕ್ರಿಕೆಟಿಗ ಎಂಎಸ್ ಧೋನಿ, ನಟ ಅಮೀರ್ ಖಾನ್ ಮತ್ತು ಮೇರಿ ಕೋಮ್ ಅವರನ್ನು ತನ್ನ ರಾಷ್ಟ್ರೀಯ ಐಕಾನ್‌ಗಳಾಗಿ ಘೋಷಿಸಿತ್ತು.
Master Blaster, Cricket Legend & Bharat Ratna Awardee #SachinTendulkar
will begin a new innings tomorrow in his role as National Icon for the Election Commission.Details : https://t.co/FPT6fSpFgP pic.twitter.com/OAJmXJ8qQO
— Spokesperson ECI (@SpokespersonECI) August 22, 2023
ಇದನ್ನೂ ಓದಿ: Chess World Cup 2023 Final: ಮೊದಲ ಗೇಮ್ ಡ್ರಾನಲ್ಲಿ ಅಂತ್ಯ: ನಾಳೆ ಪಂದ್ಯ ಮುಂದುವರಿಕೆ
ಸಚಿನ್ ತೆಂಡೂಲ್ಕರ್ ಅವರು ಬುಧವಾರ ಭಾರತೀಯ ಚುನಾವಣಾ ಆಯೋಗದೊಂದಿಗೆ ರಾಷ್ಟ್ರೀಯ ಐಕಾನ್ ಆಗಿ ತಮ್ಮ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಈ ನಿಟ್ಟಿನಲ್ಲಿ ಹೊಸದಿಲ್ಲಿಯ ಆಕಾಶವಾಣಿಯ ರಂಗಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಆಯೋಗ ತಿಳಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:23 pm, Tue, 22 August 23