Cosmetic Surgery: ಫ್ಯಾಟ್​ ಸರ್ಜರಿಯಿಂದ ಅಪಾಯವಿದೆಯಾ?; ಯಾವೆಲ್ಲ ದೇಶಗಳಲ್ಲಿ ಕಾಸ್ಮೆಟಿಕ್ ಸರ್ಜರಿಗೆ ನಿಷೇಧ?

| Updated By: Sushma Chakre

Updated on: May 18, 2022 | 1:54 PM

Fat Surgery: ಯಾವ್ಯಾವ ದೇಶಗಳಲ್ಲಿ ಕಾಸ್ಮೆಟಿಕ್ಸ್ ಸರ್ಜರಿಯನ್ನು ನಿಷೇಧ ಮಾಡಲಾಗಿದೆ? ಯಾವ ದೇಶದಲ್ಲಿ ಹೆಚ್ಚಾಗಿ ಕಾಸ್ಮೆಟಿಕ್ಸ್ ಸರ್ಜರಿ ಈಗಲೂ ನಡೆಯುತ್ತಿದೆ? ಎನ್ನುವುದರ ಪೂರ್ತಿ ಮಾಹಿತಿ ಇಲ್ಲಿದೆ.

Cosmetic Surgery: ಫ್ಯಾಟ್​ ಸರ್ಜರಿಯಿಂದ ಅಪಾಯವಿದೆಯಾ?; ಯಾವೆಲ್ಲ ದೇಶಗಳಲ್ಲಿ ಕಾಸ್ಮೆಟಿಕ್ ಸರ್ಜರಿಗೆ ನಿಷೇಧ?
ಕಾಸ್ಮೆಟಿಕ್ ಸರ್ಜರಿ
Follow us on

ಬೆಂಗಳೂರು: ಬೆಂಗಳೂರಿನಲ್ಲಿ ಕಾಸ್ಮೆಟಿಕ್ಸ್ ಸರ್ಜರಿಗೊಳಗಾದ ಉದಯೋನ್ಮುಖ ನಟಿ ಚೇತನಾ ರಾಜ್ ಸಾವನ್ನಪ್ಪಿದ್ದಾರೆ. ಆದರೆ, ಕಾಸ್ಮೆಟಿಕ್ಸ್ ಸರ್ಜರಿ ವಿಶ್ವದ ಕೆಲವು ದೇಶಗಳಲ್ಲಿ ಈಗಾಗಲೇ ಬ್ಯಾನ್ ಆಗಿದೆ. ಇನ್ನೂ ಕೆಲವು ದೇಶಗಳಲ್ಲಿ ಕಾಸ್ಮೆಟಿಕ್ ಸರ್ಜರಿ ಎಗ್ಗಿಲ್ಲದೆ ನಡೆಯುತ್ತಿದೆ. ಹಾಗಾದರೆ, ಕಾಸ್ಮೆಟಿಕ್ಸ್ ಸರ್ಜರಿ (Cosmetic Surgery) ಅಂದರೇನು? ಯಾವ್ಯಾವ ದೇಶಗಳಲ್ಲಿ ಕಾಸ್ಮೆಟಿಕ್ಸ್ ಸರ್ಜರಿಯನ್ನು ನಿಷೇಧ ಮಾಡಲಾಗಿದೆ? ಯಾವ ದೇಶದಲ್ಲಿ ಹೆಚ್ಚಾಗಿ ಕಾಸ್ಮೆಟಿಕ್ಸ್ ಸರ್ಜರಿ (Plastic Surgery) ಈಗಲೂ ನಡೆಯುತ್ತಿದೆ? ಎನ್ನುವುದರ ಪೂರ್ತಿ ಮಾಹಿತಿ ಇಲ್ಲಿದೆ ನೋಡಿ.

ಜನರಿಗೆ ಎಲ್ಲರೆದುರು ಸುಂದರವಾಗಿ ಕಾಣಬೇಕೆಂಬ ಆಸೆ. ಇದಕ್ಕಾಗಿ ತಮ್ಮ ಮುಖ, ದೇಹಕ್ಕೆ ಕಾಸ್ಮೆಟಿಕ್ಸ್ ಸರ್ಜರಿಗಳನ್ನು ಮಾಡಿಸಿಕೊಳ್ಳುತ್ತಾರೆ. ಆದರೆ, ನಿಯಮ ಮೀರಿ ಅತಿಯಾಗಿ ಕಾಸ್ಮೆಟಿಕ್ಸ್ ಸರ್ಜರಿ ಮಾಡಿಸಿಕೊಳ್ಳುವುದು ಅನೇಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ನಮ್ಮ ದೇಹದಲ್ಲಿ ಎಲ್ಲ ಕಡೆ ಕೊಬ್ಬಿನಾಂಶ ಇರುತ್ತದೆ. ಹೊಟ್ಟೆ, ಸೊಂಟದ ಸುತ್ತ ಕೊಬ್ಬಿನಾಂಶ ಇರುತ್ತದೆ. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ಲೈಪೊಸೆಕ್ಷನ್ ಎಂದು ಹೇಳುತ್ತೇವೆ. ಲಿಪಿಟ್ ಪಾರ್ಟಿಕಲ್ಸ್ ತೆಗೆಯೋಕೆ ಲೈಪೋಸೆಕ್ಷನ್ ಅಂತ ಹೇಳುತ್ತಾರೆ. ಕಾಮನ್ ಭಾಷೆಯಲ್ಲಿ ಫ್ಯಾಟ್ ಸರ್ಜರಿ ಎಂದು ಹೇಳುತ್ತಾರೆ.

ಕಾಸ್ಮೆಟಿಕ್ ಸರ್ಜರಿ ಎಂದರೆ ನಮ್ಮ ಅಪಿಯೆರೆನ್ಸ್ ಚೆನ್ನಾಗಿ ಕಾಣಿಸಲಿ ಅಂತ ಕೊಬ್ಬು ಇರುವ ಭಾಗದಲ್ಲಿ ಕೊಬ್ಬು ತೆಗೆಯುವ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಮುಖದ ಸೌಂದರ್ಯವನ್ನು ಬದಲಾವಣೆ ಮಾಡಿಕೊಳ್ಳುವ ಆಪರೇಷನ್ ಮಾಡಿಸಿಕೊಳ್ಳುತ್ತಾರೆ. ಇದನ್ನೇ ಕಾಸ್ಮೆಟಿಕ್ಸ್ ಸರ್ಜರಿ ಎಂದು ಕರೆಯುತ್ತಾರೆ. ಸ್ವಲ್ಪ ಜನ ಓವರ್ ಫ್ಯಾಟ್ ಇರುತ್ತಾರೆ. ಸ್ವಲ್ವ ಜನಕ್ಕೆ ಮುಖದಲ್ಲಿ ಫ್ಯಾಟ್ ಇರುತ್ತದೆ. ಅದನ್ನು ಸರಿ ಮಾಡೋಕೆ, ಬಾಡಿ ಶೇಪ್ ಮಾಡೋಕೆ, ಬಾಡಿ ರಿ-ಶೇಪ್ ಮಾಡೋಕೆ ಈ ಸರ್ಜರಿ ಮಾಡಿಸ್ತಾರೆ.

ಇದನ್ನೂ ಓದಿ
ಫ್ಯಾಟ್​ ಸರ್ಜರಿ ವೈಫಲ್ಯದಿಂದ ನಟಿ ಚೇತನಾ ರಾಜ್​ ನಿಧನ: ಪುತ್ರಿಯ ನೆನೆದು ಬಿಕ್ಕಿ ಬಿಕ್ಕಿ ಅತ್ತ ಅಪ್ಪ-ಅಮ್ಮ
ಕನಸುಗಳನ್ನು ಈಡೇರಿಸಿಕೊಳ್ಳಲು ಚೇತನಾ ಈ ರೀತಿ ಶಾರ್ಟ್​ಕಟ್​ ಬಳಸಬಾರದಿತ್ತು; ಸಹ ನಟನ ಬೇಸರ
Chetana Raj Death: ಫ್ಯಾಟ್ ಸರ್ಜರಿ ವೇಳೆ ಕಿರುತೆರೆ ನಟಿ ಚೇತನಾ ರಾಜ್ ಅನುಮಾನಾಸ್ಪದ ಸಾವು

ಇದನ್ನೂ ಓದಿ: Chetana Raj Death: ಫ್ಯಾಟ್​ ಸರ್ಜರಿಗೆ ಚೇತನಾ ರಾಜ್​ ಕಟ್ಟಿದ್ದ ಹಣ ಎಷ್ಟು? ಸತ್ತ ಮೇಲೂ ಹೆಚ್ಚಿತು ಆಸ್ಪತ್ರೆ ಬಿಲ್​

ಈ ಸರ್ಜರಿ ಮಾಡುವಾಗ ಪ್ರಾಥಮಿಕವಾಗಿ ದೇಹದಿಂದ ಎಷ್ಟು ಮೌಂಟ್ ಆಫ್ ಫ್ಯಾಟ್ ತೆಗಿಯಬೇಕು ಎಂಬುದು ಬಹಳ ಮುಖ್ಯ. ಅದು ರೋಗಿಯ ದೇಹದ ತೂಕದ ಮೇಲೆ ನಿರ್ಧಾರವಾಗುತ್ತದೆ. ಪೇಷೇಂಟ್‌ಗೆ ಯಾವ ಶೇಪ್ ಬೇಕಾಗಿದೆ, ಎಷ್ಟು ರಿ-ಶೇಪ್ ಮಾಡಬೇಕಾಗಿದೆ ಎಂಬುದು ಅದರ ಮೇಲೆ ಅವಲಂಬಿಸಿರುತ್ತದೆ. ಪೇಷೆಂಟ್ ಬಾಡಿ ವೇಟ್ ಮೇಲೆ ಎಷ್ಟು ಫ್ಯಾಟ್ ತೆಗಿಬೇಕು ಎಂಬುದನ್ನು ಸರ್ಜನ್ ಡಿಸೈಡ್ ಮಾಡ್ತಾರೆ. ಇದನ್ನು ಜನರಲ್ ಅನಸ್ತೇಷಿಯಾದಲ್ಲಿ ಮಾಡುತ್ತಾರೆ. ಲೋಕಲ್ ಅನಸ್ತೇಷಿಯಾದಲ್ಲೂ ಮಿನಿಮಲ್ ಫ್ಯಾಟ್ ತೆಗೆಯುವುದಿದ್ದರೆ ಅದನ್ನೂ ಮಾಡ್ತಾರೆ. ಇದನ್ನು ನಾವು ಸರ್ಜರಿ ಅಂತಾನೇ ಹೇಳೋದು. ಸರ್ಜರಿ ಮಾಡುವಾಗ ರೋಗಿಯನ್ನು ಕರೆಕ್ಟಾಗಿ ಮಾನಿಟರ್ ಮಾಡ್ಕೋಬೇಕು. ಅವರದು ಹಾರ್ಟ್​ರೇಟ್, ಬಿಪಿ ಆಕ್ಸಿಜನ್ ಲೆವೆಲ್ ಎಲ್ಲವನ್ನೂ ಮಾನಿಟರ್ ಮಾಡಬೇಕು. ಕರೆಕ್ಟಾಗಿ ಮಾನಿಟರ್ ಮಾಡಬೇಕು. ಯಾವ ಸೆಟಪ್​ನಲ್ಲಿ ಮಾಡಿಸ್ತೀವಿ ಅದು ತುಂಬ ಮುಖ್ಯ. ಬೇಸಿಕ್ ವೆಂಟಿಲೇಟರ್, ಐಸಿಯು ಬ್ಯಾಕಪ್ ಮುಖ್ಯ. ಮಾನಿಟರ್​ಗಳು ಎಲ್ಲ ಕರೆಕ್ಟ್ ಆಗಿರಬೇಕು.

ಸರ್ಜರಿ ಅಂದ್ರೆ ವೈದ್ಯರು ಜನರಲ್ ಅನೇಸ್ತಿಶಿಯಾ ಕೊಡ್ತಾರೆ. ಆ ಸಮಯದಲ್ಲಿ ರೋಗಿಗಳ ಹಾರ್ಟ್​ರೇಟ್, ಬ್ಲಡ್ ಪ್ರೆಷರ್, ಆಕ್ಸಿಜನ್ ಲೆವಲ್ ಎಲ್ಲ ಏರುಪೇರಾಗಬಹುದು. ಆ ತರಹ ಆದಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಸೇಫಾಗಿ ಸರ್ಜರಿ ಮಾಡ್ಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದರೂ, ರೋಗಿಯ ಪ್ರಾಣಕ್ಕೆ ಕುತ್ತು ಬರುತ್ತದೆ. ರೋಗಿಯ ಸಾವು ಸಂಭವಿಸುತ್ತದೆ.

ವಿಶ್ವದ ಕೆಲವು ದೇಶಗಳು ಕಾಸ್ಮೆಟಿಕ್ಸ್ ಸರ್ಜರಿಯಿಂದ ಜನರ ಪ್ರಾಣಕ್ಕೆ ಕುತ್ತು ಬರುತ್ತಿರುವುದನ್ನು ಮನಗಂಡು ತಮ್ಮ ದೇಶಗಳಲ್ಲಿ ಕಾಸ್ಮೆಟಿಕ್ಸ್ ಸರ್ಜರಿಯನ್ನು ಬ್ಯಾನ್ ಮಾಡಿವೆ. ಥೈವಾನ್ ದೇಶವು 18 ವರ್ಷದೊಳಗಿನವರಿಗೆ ಕಾಸ್ಮೆಟಿಕ್ಸ್ ಸರ್ಜರಿಯನ್ನು ಬ್ಯಾನ್ ಮಾಡಿದೆ. ಇಟಲಿ ದೇಶವು ಕೂಡ 18 ವರ್ಷದೊಳಗಿನವರಿಗೆ ಕಾಸ್ಮೆಟಿಕ್ಸ್ ಸರ್ಜರಿಯನ್ನು ಬ್ಯಾನ್ ಮಾಡಿದೆ. ಇಂಗ್ಲೆಂಡ್​ನಲ್ಲಿ 18 ವರ್ಷದೊಳಗಿನವರನ್ನು ಗುರಿಯಾಗಿಸಿಕೊಂಡು ಕಾಸ್ಮೆಟಿಕ್ಸ್ ಮಾಧ್ಯಮಗಳಲ್ಲಿ ಜಾಹೀರಾತು ನೀಡುವುದನ್ನು ನಿಷೇಧಿಸಲಾಗಿದೆ. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ರಾಜ್ಯ ಮಾತ್ರ 2008ರಲ್ಲಿ ಅಪ್ರಾಪ್ತರಿಗೆ ಕಾಸ್ಮೆಟಿಕ್ಸ್ ಸರ್ಜರಿ ಮಾಡುವುದನ್ನು ನಿಷೇಧಿಸಿದೆ. ಜರ್ಮನ್ ದೇಶವು 2013ರಲ್ಲಿ ಅಪ್ರಾಪ್ತರಿಗೆ ಕಾಸ್ಮೆಟಿಕ್ಸ್ ಸರ್ಜರಿ ಮಾಡುವುದನ್ನು ನಿಷೇಧಿಸಿದೆ. ಇನ್ನೂ ಚೀನಾದ ಶಾಂಘೈನಲ್ಲಿ ಪೋಷಕರ ಒಪ್ಪಿಗೆ ಇಲ್ಲದೆ 18 ವರ್ಷದೊಳಗಿನವರು ಕಾಸ್ಮೆಟಿಕ್ಸ್ ಸರ್ಜರಿ ಮಾಡಿಸಿಕೊಳ್ಳುವಂತಿಲ್ಲ ಎಂದು ಈ ವರ್ಷದ ಮಾರ್ಚ್ ನಲ್ಲಿ ನಿರ್ಬಂಧ ವಿಧಿಸಲಾಗಿದೆ. ಜೊತೆಗೆ ಶಾಂಘೈ ನಗರದಲ್ಲಿ ಅಪ್ರಾಪ್ತರು ಪೋಷಕರ ಒಪ್ಪಿಗೆ ಇಲ್ಲದೆ ಟ್ಯಾಟೂ ಕೂಡ ಹಾಕಿಸಿಕೊಳ್ಳುವಂತಿಲ್ಲ.

ಇದನ್ನೂ ಓದಿ: ಫ್ಯಾಟ್​ ಸರ್ಜರಿ ವೈಫಲ್ಯದಿಂದ ನಟಿ ಚೇತನಾ ರಾಜ್​ ನಿಧನ: ಪುತ್ರಿಯ ನೆನೆದು ಬಿಕ್ಕಿ ಬಿಕ್ಕಿ ಅತ್ತ ಅಪ್ಪ-ಅಮ್ಮ

ಆದರೆ, ವಿಶ್ವದ ಕೆಲ ದೇಶಗಳಲ್ಲಿ ಇಂದಿಗೂ ಕಾಸ್ಮೆಟಿಕ್ಸ್ ಸರ್ಜರಿ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಿದೆ. ಕಾಸ್ಮೆಟಿಕ್ಸ್ ಸರ್ಜರಿಯು ಯಾವುದೇ ದೇಶಕ್ಕೆ ಸೀಮಿತವಾಗಿಲ್ಲ. ವಿಶ್ವದ ಅನೇಕ ಪ್ರಮುಖ ದೇಶಗಳಲ್ಲೇ ಕಾಸ್ಮೆಟಿಕ್ಸ್ ಸರ್ಜರಿ ನಿರಾಂತಕವಾಗಿ ನಡೆಯುತ್ತಿದೆ. ಜನರಿಗೆ ಸಮಾಜದಲ್ಲಿ ಎಲ್ಲರೆದುರು ಸುಂದರವಾಗಿ ಕಾಣುವ ಬಯಕೆಯಿಂದ ಪ್ರಪಂಚದಾದ್ಯಂತ ಕಾಸ್ಮೆಟಿಕ್ಸ್ ಸರ್ಜರಿಗಳು ನಡೆಯುತ್ತಿವೆ.

2018ರ ಇಂಟರ್ನ್ಯಾಷನಲ್ ಸೊಸೈಟಿ ಆಫ್ ಎಸ್ತೆಟಿಕ್ ಪ್ಲ್ಯಾಸ್ಟಿಕ್ ಸರ್ಜರಿ (ISAPS) ಸಮೀಕ್ಷೆಯ ಪ್ರಕಾರ, ಹೆಚ್ಚು ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳು ಮತ್ತು ಕಾರ್ಯವಿಧಾನಗಳನ್ನು ನಿರ್ವಹಿಸುವ ಅಗ್ರ ಐದು ದೇಶಗಳು ಹೀಗಿವೆ.

ಪ್ರಮುಖ ದೇಶಗಳ ಕಾಸ್ಮೆಟಿಕ್ಸ್ ಸರ್ಜರಿ ಸಂಖ್ಯೆ:
1. ಅಮೆರಿಕಾ- 43,61,867
2. ಬ್ರೆಜಿಲ್ – 22,67,405
3. ಮೆಕ್ಸಿಕೋ – 10,43,247
4. ಜರ್ಮನಿ – 9,22,056
5. ಭಾರತ – 8,95,896

ಒಟ್ಟಾರೆಯಾಗಿ, ಅಮೇರಿಕಾ ಮತ್ತು ಬ್ರೆಜಿಲ್ 2018ರಲ್ಲಿ ಪ್ರಪಂಚದ ಎಲ್ಲಾ ಸೌಂದರ್ಯವರ್ಧಕ ವಿಧಾನಗಳಲ್ಲಿ – ಶಸ್ತ್ರಚಿಕಿತ್ಸಾ ಮತ್ತು ಶಸ್ತ್ರಚಿಕಿತ್ಸೆಯಲ್ಲದ ಶೇ. 28.4ರಷ್ಟನ್ನು ಹೊಂದಿದೆ. ಆದರೆ, ಬ್ರೆಜಿಲ್ ಮತ್ತು ಅಮೆರಿಕಾ ಒಟ್ಟು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗಳ ಸಂಖ್ಯೆಯಲ್ಲಿ ತಕ್ಕಮಟ್ಟಿಗೆ ಸಮಾನವಾಗಿವೆ. ಅಮೆರಿಕಾದಲ್ಲಿ ಬ್ರೆಜಿಲ್‌ಗಿಂತ ಎರಡು ಪಟ್ಟು ಹೆಚ್ಚು ಜನರು ಶಸ್ತ್ರಚಿಕಿತ್ಸಾ ಅಲ್ಲದ ವಿಧಾನಗಳಿಗೆ ಒಳಗಾಗಿದ್ದಾರೆ.

ದಕ್ಷಿಣ ಕೊರಿಯಾ, ಗ್ರೀಸ್, ಇಟಲಿ, ಬ್ರೆಜಿಲ್, ಕೊಲಂಬಿಯಾ, ಅಮೆರಿಕಾ, ಥೈವಾನ್ ದೇಶಗಳಲ್ಲಿ ಹೆಚ್ಚಿನ ಕಾಸ್ಮೆಟಿಕ್ಸ್ ಸರ್ಜರಿಗಳು ನಡೆಯುತ್ತಿವೆ. ದಕ್ಷಿಣ ಕೋರಿಯಾವನ್ನು ವಿಶ್ವದಲ್ಲಿ ಕಾಸ್ಮೆಟಿಕ್ಸ್ ಸರ್ಜರಿಯ ರಾಜಧಾನಿ ಎಂದು ಕರೆಯಲಾಗುತ್ತದೆ. ದಕ್ಷಿಣ ಕೊರಿಯಾದಲ್ಲಿ ಐವರು ಮಹಿಳೆಯರ ಪೈಕಿ ಓರ್ವ ಮಹಿಳೆ ಕಾಸ್ಮೆಟಿಕ್ಸ್ ಸರ್ಜರಿಗೆ ಒಳಗಾಗಿದ್ದಾರೆ. ವಿಶ್ವದ ಪ್ರಮುಖ ದೇಶಗಳಲ್ಲಿ ಕಾಸ್ಮೆಟಿಕ್ಸ್ ಸರ್ಜರಿ ಸಾಮಾನ್ಯವಾಗಿದೆ. ಅನೇಕ ದೇಶಗಳು ಸಂಪೂರ್ಣವಾಗಿ ಕಾಸ್ಮೆಟಿಕ್ಸ್ ಸರ್ಜರಿಯನ್ನು ನಿಷೇಧಿಸಿಲ್ಲ. ಕೆಲ ದೇಶಗಳು ಮಾತ್ರ ಅಪ್ರಾಪ್ತರಿಗೆ ಕಾಸ್ಮೆಟಿಕ್ಸ್ ಸರ್ಜರಿಯನ್ನು ನಿಷೇಧಿಸಿವೆ. ವಯಸ್ಕರ ಕಾಸ್ಮೆಟಿಕ್ಸ್ ಸರ್ಜರಿಗೆ ಮಾತ್ರ ಯಾವುದೇ ನಿಷೇಧ ಇಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:51 pm, Wed, 18 May 22