ಸುದ್ದಿ ನಿರೂಪಕಿ ಸಲ್ಮಾ ಸುಲ್ತಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಶೋಧ ನಡೆಸುತ್ತಿದ್ದ ವೇಳೆ ಛತ್ತೀಸ್ಗಢದ ಕೊರ್ಬಾ-ದರ್ರಿ ರಸ್ತೆಯಲ್ಲಿ ಪಾಲಿಥಿನ್ನಲ್ಲಿ ಸುತ್ತಿದ ಶವ ಪತ್ತೆಯಾಗಿದೆ. ಛತ್ತೀಸ್ಗಢದ ಸುದ್ದಿ ನಿರೂಪಕಿ ಸುಲ್ತಾನಾ ಐದು ವರ್ಷಗಳ ಹಿಂದೆ ನಾಪತ್ತೆಯಾಗಿದ್ದರು. ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ, ಸಲ್ಮಾ ಅವರ ಕುಟುಂಬವು ಶವವನ್ನು ಗುರುತಿಸಲು ಸಾಧ್ಯವಾಗಿಲ್ಲ. ಮೃತದೇಹದೊಂದಿಗೆ ಒಂದು ಜೊತೆ ಚಪ್ಪಲಿಯೂ ಪತ್ತೆಯಾಗಿದೆ.
ಸಲ್ಮಾ ಸುಲ್ತಾನಾ ಅವರ ನಾಪತ್ತೆ ಪ್ರಕರಣದಲ್ಲಿ ಕೆಲವು ಮಾಹಿತಿಗಳು ಲಭ್ಯವಾಗಿದ್ದು, ಈ ಪ್ರಕಾರ ಮೃತದೇಹವನ್ನು ಹುಡುಕಲು ನಾಲ್ಕು ಪಥದ ರಸ್ತೆಯನ್ನು ಅಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಲ್ಮಾ ಸುಲ್ತಾನಾ ಕೊರ್ಬಾದ ಉಪನಗರ ಕುಸ್ಮುಂಡಾ ನಿವಾಸಿ. ಅವರು ಸುದ್ದಿ ವರದಿ, ಸ್ಟೇಜ್ ಶೋಗಳು ಮತ್ತು ಇತರ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದ್ದರು. ಅಕ್ಟೋಬರ್ 21, 2018 ರಂದು, ಅವರು ಕುಸ್ಮುಂಡಾದಿಂದ ಕೊರ್ಬಾಗೆ ಕೆಲಸದ ನಿಮಿತ್ತ ಬಂದಿದ್ದರು. ಆದರೆ, ಆಕೆ ಮನೆಗೆ ಹಿಂತಿರುಗಿರಲಿಲ್ಲ.
ಮತ್ತಷ್ಟು ಓದಿ: ಬೆಂಗಳೂರು: ಕಾಣೆಯಾಗಿದ್ದ ಯುವತಿ ಶವ ಪತ್ತೆ ಪಕ್ರರಣ; ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಆರೋಪಿಯ ಬಂಧನ
ಆಕೆಯ ಕುಟುಂಬಸ್ಥರು ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ. ಕಾಣೆಯಾದ ದೂರಿನ ನಂತರ ಅವರ ಹುಡುಕಾಟವು ದಿನಗಟ್ಟಲೆ ನಡೆಯಿತು, ಆದರೆ ಅವರು ಪತ್ತೆಯಾಗಲಿಲ್ಲ. ನಂತರ ತನಿಖೆ ವೇಳೆ ಸಲ್ಮಾ ಕೊರ್ಬಾದ ಬ್ಯಾಂಕ್ನಿಂದ ಸಾಲ ಪಡೆದಿದ್ದು, ಅದನ್ನು ಯುವಕನೊಬ್ಬ 2018ರವರೆಗೆ ಮರುಪಾವತಿ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಆದರೆ, 2019ರ ನಂತರ ಸಾಲ ಮರುಪಾವತಿ ನಿಂತಿತ್ತು.
ತನಿಖೆಯ ವೇಳೆ ಐದು ವರ್ಷಗಳ ಹಿಂದೆ ಸಲ್ಮಾಳನ್ನು ಕೊಲೆ ಮಾಡಿ ಶವವನ್ನು ಕೊರ್ಬಾ-ದರ್ರಿ ರಸ್ತೆಯಲ್ಲಿ ಹೂಳಲಾಗಿತ್ತು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈಗ ಶವ ಸಿಕ್ಕಿದ್ದು ಹೆಚ್ಚಿನ ಮಾಹಿತಿ ಇನ್ನೇನು ಲಭ್ಯವಾಬೇಕಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ