ಲಡಾಖ್: ಕಂದಕಕ್ಕೆ ಪಲ್ಟಿಯಾದ ಸೇನಾ ವಾಹನ: 9 ಯೋಧರ ದುರಂತ ಸಾವು
ಸೇನಾ ವಾಹನ ಕಂದಕಕ್ಕೆ ಪಲ್ಟಿಯಾದ ಪರಿಣಾಮ 9 ಯೋಧರು ದುರಂತ ಸಾವನ್ನಪ್ಪಿರುವಂತಹ ಘಟನೆ ಲಡಾಖ್‌ನ ಲೇಹ್ ನಗರದಲ್ಲಿ ಶನಿವಾರ ನಡೆದಿದೆ. ಲಡಾಖ್‌ನ ನ್ಯೋಮಾದ ಕೆರೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಲಡಾಖ್, ಆಗಸ್ಟ್ 19: ಸೇನಾ ವಾಹನ ಕಂದಕಕ್ಕೆ ಪಲ್ಟಿಯಾದ ಪರಿಣಾಮ 9 ಯೋಧರು (soldiers) ದುರಂತ ಸಾವನ್ನಪ್ಪಿರುವಂತಹ ಘಟನೆ ಲಡಾಖ್‌ನ ಲೇಹ್ ನಗರದಲ್ಲಿ ಶನಿವಾರ ನಡೆದಿದೆ. ಮತ್ತೊಬ್ಬ ಯೋಧನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಸಂಜೆ 6:30 ರ ಸುಮಾರಿಗೆ ಲಡಾಖ್‌ನ ನ್ಯೋಮಾದ ಕೆರೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಯೋಧರ ಪಡೆ ಕರು ಗ್ಯಾರಿಸನ್‌ನಿಂದ ಲೇಹ್ ಬಳಿ ಇರುವ ಕಯಾರಿ ಪ್ರದೇಶಕ್ಕೆ ಹೋಗುತ್ತಿರುವಾಗ ಸುಮಾರು 7 ಕಿ.ಮೀ ದೂರದಲ್ಲಿ ಸೇನಾ ವಾಹನ ಕಮರಿಗೆ ಬಿದ್ದಿದೆ. ಮೃತಪಟ್ಟ 9 ಯೋಧರ ಪೈಕಿ ಒಬ್ಬ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಕೂಡ ಇದ್ದಾರೆ.
ಇದನ್ನೂ ಓದಿ: ಬೈಕ್ ಏರಿ ಪಾಂಗಾಂಗ್ ಸರೋವರಕ್ಕೆ ಹೊರಟ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏನಂದರು ಗೊತ್ತಾ!?
ಒಂದು SUV ಮತ್ತು ಒಟ್ಟು 34 ಸಿಬ್ಬಂದಿಯನ್ನು ಒಳಗೊಂಡ ಆಂಬ್ಯುಲೆನ್ಸ್ ಸೇರಿದಂತೆ ಒಂದು ಯೋಧರ ಪಡೆಯಾಗಿತ್ತು. ಮತ್ತು ಮೂರು ವಾಹನಗಳು ರೆಸೀ ಪಾರ್ಟಿಯ ಭಾಗವಾಗಿದ್ದವು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್
Saddened by the loss of Indian Army personnel due to an accident near Leh in Ladakh. We will never forget their exemplary service to our nation. My thoughts are with the bereaved families. The injured personnel have been rushed to the Field Hospital. Praying for their speedy…
— Rajnath Singh (@rajnathsingh) August 19, 2023
ಘಟನೆ ಕುರಿತಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದು, ಲಡಾಖ್‌ನ ಲೇಹ್ ಬಳಿ ಅಪಘಾತದಲ್ಲಿ ಭಾರತೀಯ ಸೇನೆಯ ಸಿಬ್ಬಂದಿಯನ್ನು ಕಳೆದುಕೊಂಡಿರುವುದು ದುಃಖವಾಗಿದೆ. ನಮ್ಮ ದೇಶಕ್ಕೆ ಅವರ ಆದರ್ಶ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ದುಃಖಿತ ಕುಟುಂಬಗಳೊಂದಿಗೆ ನಾನು ಸಹ ಭಾಗಿಯಾಗಿದ್ದೇನೆ. ಗಾಯಗೊಂಡ ಸಿಬ್ಬಂದಿಯನ್ನು ಫೀಲ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:30 pm, Sat, 19 August 23