ಸೋರೆಕಾಯಿ ವಿಶೇಷ ಮಹಾತ್ಮೆ! ಭಕ್ತರಿಗೆ ವಂಚನೆ: ಗ್ಯಾಂಗ್​ ಅರೆಸ್ಟ್

| Updated By: ಸಾಧು ಶ್ರೀನಾಥ್​

Updated on: Oct 12, 2020 | 5:26 PM

ಹೈದರಾಬಾದ್​: ಈ ಹುಚ್ಚು ಸೋರೆಕಾಯಿಯಲ್ಲಿ ವಿಶೇಷ ಶಕ್ತಿಯಿದೆ ಎಂದು ಭಕ್ತರನ್ನು ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ದುರುಳರ ತಂಡವನ್ನು ಪೊಲೀಸರು ಬಂಧಿಸಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಆಂಧ್ರದ ಪ್ರಸಿದ್ಧ ಶ್ರೀಶೈಲ ದೇವಸ್ಥಾನಕ್ಕೆ ಬರುತ್ತಿದ್ದ ಭಕ್ತರೇ ಈ ಗ್ಯಾಂಗ್​ನ ಟಾರ್ಗೆಟ್​. ತಾವು ಮಾರುತ್ತಿದ್ದ ಹುಚ್ಚು ಸೋರೆಕಾಯಿಯಲ್ಲಿ ವಿಶೇಷ ಶಕ್ತಿಯಿದೆ ಎಂದು ಜನರನ್ನು ನಂಬಿಸುತ್ತಿದ್ದ ಖದೀಮರು ಅವುಗಳನ್ನು ಲಕ್ಷಾಂತರ ರೂಪಾಯಿಗೆ ಭಕ್ತರಿಗೆ ಮಾರುತ್ತಿದ್ದರು ಎಂದು ಹೇಳಲಾಗಿದೆ. ಅಂದ ಹಾಗೆ, ಈ ಗ್ಯಾಂಗ್​ ದೇಗುಲದ ಬಳಿಯಿದ್ದ ಆಶ್ರಮದಲ್ಲಿ ಕೆಲಸ […]

ಸೋರೆಕಾಯಿ ವಿಶೇಷ ಮಹಾತ್ಮೆ! ಭಕ್ತರಿಗೆ ವಂಚನೆ: ಗ್ಯಾಂಗ್​ ಅರೆಸ್ಟ್
Follow us on

ಹೈದರಾಬಾದ್​: ಈ ಹುಚ್ಚು ಸೋರೆಕಾಯಿಯಲ್ಲಿ ವಿಶೇಷ ಶಕ್ತಿಯಿದೆ ಎಂದು ಭಕ್ತರನ್ನು ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ದುರುಳರ ತಂಡವನ್ನು ಪೊಲೀಸರು ಬಂಧಿಸಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಆಂಧ್ರದ ಪ್ರಸಿದ್ಧ ಶ್ರೀಶೈಲ ದೇವಸ್ಥಾನಕ್ಕೆ ಬರುತ್ತಿದ್ದ ಭಕ್ತರೇ ಈ ಗ್ಯಾಂಗ್​ನ ಟಾರ್ಗೆಟ್​. ತಾವು ಮಾರುತ್ತಿದ್ದ ಹುಚ್ಚು ಸೋರೆಕಾಯಿಯಲ್ಲಿ ವಿಶೇಷ ಶಕ್ತಿಯಿದೆ ಎಂದು ಜನರನ್ನು ನಂಬಿಸುತ್ತಿದ್ದ ಖದೀಮರು ಅವುಗಳನ್ನು ಲಕ್ಷಾಂತರ ರೂಪಾಯಿಗೆ ಭಕ್ತರಿಗೆ ಮಾರುತ್ತಿದ್ದರು ಎಂದು ಹೇಳಲಾಗಿದೆ. ಅಂದ ಹಾಗೆ, ಈ ಗ್ಯಾಂಗ್​ ದೇಗುಲದ ಬಳಿಯಿದ್ದ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಇನ್ನು ಇವರಿಂದ ವಂಚನೆಗೆ ಒಳಗಾದವರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಭಕ್ತರು ನೀಡಿದ್ದ ದೂರಿನನ್ವಯ ಪೊಲೀಸರು ಈ ಖತರ್​ನಾಕ್​ ಗ್ಯಾಂಗ್​ನ ಸೆರೆಹಿಡಿದಿದ್ದಾರೆ.