ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ಅವರನ್ನು ತುಂಬಾ ಸೋಮಾರಿಗಳನ್ನಾಗಿ ಮಾಡುತ್ತಿದೆ. ಇದರಿಂದ ದೇಹದ ಚಲನವಲನ ಕಡಿಮೆಯಾಗಿ ಕೊಬ್ಬು ವೇಗವಾಗಿ ಶೇಖರಣೆಗೊಳ್ಳಲು ಪ್ರಾರಂಭವಾಗುತ್ತದೆ. ನಿರಂತರವಾಗಿ ಕುಳಿತುಕೊಂಡು ಕೆಲಸ ಮಾಡುವುದು ಮತ್ತು ಕಡಿಮೆ ನಡಿಗೆಯಿಂದಾಗಿ ಸೊಂಟ ಮತ್ತು ಹೊಟ್ಟೆಯ ಭಾಗದಲ್ಲಿ ಹೆಚ್ಚು ಕೊಬ್ಬು ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಅಲ್ಲದೆ ಕಳಪೆಮಟ್ಟದ ಆಹಾರ ಸೇವನೆ, ವ್ಯಾಯಾಮದ ಕೊರತೆಯಿಂದಲೂ ದೇಹದಲ್ಲಿ ಕೊಬ್ಬು ಶೇಖರಣೆಯಾಗುತ್ತದೆ. ಈ ಕೊಬ್ಬು ಸುಲಭವಾಗಿ ಕಡಿಮೆಯಾಗುವುದಿಲ್ಲ. ಆದರೆ ಪ್ರತಿನಿತ್ಯ ಈ ಕೆಲವೊಂದು ಯೋಗಾಸನಗಳನ್ನು ಅಭ್ಯಾಸ ಮಾಡುವ ಮೂಲಕ ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು. ಸೊಂಟದ ಕೊಬ್ಬನ್ನು ಕರಗಿಸಲು ಯಾವ ಯೋಗಾಸನ ಮಾಡಿದರೆ ಸೂಕ್ತ ಎಂಬುದನ್ನು ತಿಳಿಯಿರಿ.
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದರ ಜೊತೆಗೆ ಭುಜಂಗಾಸನವು ಮಲಬದ್ಧತೆಯಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ನಿವಾರಿಸಲು ಸಹಾಯ ಮಾಡುತ್ತದೆ. ಬೆನ್ನು ನೋವು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಈ ಆಸನವು ವಿಶೇಷವಾಗಿ ಉತ್ತಮವಾಗಿದೆ. ಈ ಆಸನವನ್ನು ಮಾಡಲು ನಿಮ್ಮ ಹೊಟ್ಟೆಯ ಭಾಗ ನೆಲಕ್ಕೆ ತಾಕುವಂತೆ ಮಲಗಿ. ಹಣೆಯನ್ನು ನೆಲದ ಮೇಲೆ ಮತ್ತು ಅಂಗೈಯನ್ನು ಭುಜದ ನೇರಕ್ಕೆ ನೆಲದ ಮೇಲೆ ಇರಿಸಿ. ಈಗ ಬೆನ್ನು ಮತ್ತು ಹೊಟ್ಟೆಯ ಸ್ನಾಯುಗಳನ್ನು ಬಳಸಿ ನಿಧಾನವಾಗಿ ಉಸಿರಾಡುತ್ತ ತಲೆಯನ್ನು ಮೇಲಕ್ಕೆ ಎತ್ತಿ. ನಂತರ ನಿಮ್ಮ ಸೊಂಟವನ್ನು ಒಂದೆರಡು ಇಂಚುಗಳಷ್ಟು ನೆಲದಿಂದ ಮೇಲಕ್ಕೆತ್ತಿ. ನಿಯಮಿತವಾಗಿ ಈ ಯೋಗಭಂಗಿಯನ್ನು ಅಭ್ಯಾಸ ಮಾಡುವ ಮೂಲಕ ನೀವು ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು.
ಇದನ್ನೂ ಓದಿ:
ಬೆನ್ನು ನೋವನ್ನು ಕಡಿಮೆ ಮಾಡಲು, ಬೆನ್ನು ಮೂಳೆಯನ್ನು ಬಲಪಡಿಸಲು ಮತ್ತು ಸೊಂಟದಲ್ಲಿ ಸಂಗ್ರಹವಾಗುವ ಕೊಬ್ಬನ್ನು ತೆಗೆದುಹಾಕಲು ಸೇತುಬಂಧಾಸನ ಸಹಾಯ ಮಾಡುತ್ತದೆ. ಅಲ್ಲದೆ ಈ ಯೋಗಭಂಗಿ ಬಲವಾದ ಭುಜವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಇದನ್ನು ಮಾಡಲು ನೆಲದ ಮೇಲೆ ಮಲಗಿ ಮತ್ತು ನಿಮ್ಮ ಮೊಣಕಾಲುಗಳನ್ನು ಬಗ್ಗಿಸಿ. ಎರಡೂ ಕೈಗಳನ್ನು ಸೊಂಟದ ಬಳಿ ನೆಲದ ಮೇಲೆ ಇರಿಸಿ. ಈಗ ಕೆಳಬೆನ್ನಿನ ಭಾಗವನ್ನು ನೆಲದಿಂದ ನಿಧಾನವಾಗಿ ಮೇಲಕ್ಕೆ ಎತ್ತಿ. ಸ್ವಲ್ಪ ಸೆಕೆಂಡುಗಳವರೆಗೆ ಇದೇ ಸ್ಥಿತಿಯಲ್ಲಿರಿ. ಪ್ರತಿದಿನ ಈ ಯೋಗಾಸನವನ್ನು ಮಾಡುವುದರಿಂದ ಸೊಂಟ ಮತ್ತು ತೊಡೆಯ ಮೇಲೆ ಸಂಗ್ರಹವಾಗುವ ಕೊಬ್ಬನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿ: ನಿಮ್ಮ ಹೊಟ್ಟೆಯ ಬೊಜ್ಜು ಕರಗಿಸುವ ಸಿಂಪಲ್ ಪಾನೀಯಗಳು ಇಲ್ಲಿವೆ
ದೋಣಿ ಭಂಗಿ ಎಂದೂ ಕರೆಯಲ್ಪಡುವ ನೌಕಾಸನ ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ತೊಡೆದುಹಾಕಲು ಉತ್ತಮ ಯೋಗಾಸನವಾಗಿದೆ. ಇದು ತೊಡೆಗಳು, ಸೊಂಟದ ಕೊಬ್ಬನ್ನು ಸುಡುತ್ತದೆ. ಅಲ್ಲದೆ ಇದು ಕಿಬ್ಬೊಟ್ಟೆಯ ಭಾಗದಲ್ಲಿನ ಅಂಗಗಳಾದ ಯಕೃತ್ತು, ಮೇದೋಜೀರಕ ಗ್ರಂಥಿ ಮತ್ತು ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೆ ಇದು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸರಾಗಗೊಳಿಸುವ ಮೂಲಕ ಮಲಬದ್ಧತೆಯ ಸಮಸ್ಯೆಯನ್ನು ನಿಯಂತ್ರಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: