ಬಸ್ಕಿ ಹೊಡೆಯೋದು ಕೇವಲ ಶಿಕ್ಷೆಯಲ್ಲ, ಇದು ಮೆದುಳನ್ನು ಚುರುಕಗೊಳಿಸುವ ವ್ಯಾಯಾಮ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 24, 2023 | 6:43 PM

ಹೆಚ್ಚಾಗಿ ಹಿಂದಿನ ಕಾಲದಲ್ಲಿ ಶಾಲೆಗೆ ತಡವಾಗಿ ಹೋದರೆ, ಹೋಮ್ ವರ್ಕ್ ಮಾಡದಿದ್ದರೆ, ತರ್ಲೆ ತುಂಟಾಟ ಮಾಡಿದರೆ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಕಿವಿ ಹಿಡಿದು ಬಸ್ಕಿ ಹೊಡೆಯುವ ಶಿಕ್ಷೆಯನ್ನು ನೀಡುತ್ತಿದ್ದರು. ನಿಮಗೆ ಗೊತ್ತಾ ಇದು ಕೇವಲ ಶಿಕ್ಷೆಯಲ್ಲ, ಬದಲಿಗೆ ಮೆದುಳನ್ನು ಚುರುಕುಗೊಳಿಸುವ ವ್ಯಾಯಾಮವಾಗಿದೆ. ಬಸ್ಕಿ ಹೊಡೆಯುವುದರಿಂದ ನಮ್ಮ ಮೆದುಳಿಗೆ ದೊರಕುವ ಪ್ರಯೋಜನಗಳೇನು ಎಂಬುದನ್ನು ನೋಡೋಣ.

ಬಸ್ಕಿ ಹೊಡೆಯೋದು ಕೇವಲ ಶಿಕ್ಷೆಯಲ್ಲ, ಇದು ಮೆದುಳನ್ನು ಚುರುಕಗೊಳಿಸುವ ವ್ಯಾಯಾಮ
ಸಾಂದರ್ಭಿಕ ಚಿತ್ರ
Follow us on

ನಾವು ನೋಡಿರುವಂತೆ ಹಿಂದಿನ ಕಾಲದಲ್ಲಿ ಶಾಲಾ ಮಕ್ಕಳಿಗೆ ಹೆಚ್ಚಾಗಿ ಶಿಕ್ಷಕರು ಬಸ್ಕಿ ಹೊಡೆಯುವ ಶಿಕ್ಷೆಯನ್ನು ನೀಡುತ್ತಿದ್ದರು. ಶಾಲೆಗೆ ತಡವಾಗಿ ಹೋದರೆ, ಹೋಮ್ ವರ್ಕ್ ಮಾಡದಿದ್ದರೆ, ಕ್ಲಾಸ್ ರೂಮ್ ನಲ್ಲಿ ತರ್ಲೆ ತುಂಟಾಟ ಮಾಡಿದರೆ ಶಾಲೆಯಲ್ಲಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಕಿವಿ ಹಿಡಿದು ಬಸ್ಕಿ ಹೊಡೆಯೋ ಶಿಕ್ಷೆಯನ್ನು ನೀಡುತ್ತಿದ್ದರು. ನಿಮಗೆ ಗೊತ್ತಾ ಈ ಶಿಕ್ಷೆಯ ಹಿಂದೆಯೂ ಒಂದು ವೈಜ್ಞಾನಿಕ ಕಾರಣವಿದೆ. ನಮ್ಮ ಹಿರಿಯರು ಏನೇ ಮಾಡಿದರು ಅದಕ್ಕೊಂದು ವೈಜ್ಞಾನಿಕ ಕಾರಣ ಇದ್ದೇ ಇದೆ. ಹೌದು ಹಿಂದಿನಿಂದಲೂ ಭಾರತದ ಶಾಲೆಗಳಲ್ಲಿ ಮಕ್ಕಳ ತಪ್ಪಿಗೆ ಶಿಕ್ಷೆಯೆಂದರೆ ಅದು ಬಸ್ಕಿ ಹೊಡೆಯುವುದು. ಇದು ಕೇವಲ ಶಿಕ್ಷೆಯಲ್ಲ, ಬದಲಿಗೆ ಇದು ‘ಸೂಪರ್ ಬ್ರೈನ್ ಯೋಗ’ ಕೂಡಾ ಹೌದು. ಬಸ್ಕಿ ಹೊಡೆಯುವುದರಿಂದ ಮೆದುಳಿನ ಬೂದು ದ್ರವ್ಯವು ಹೆಚ್ಚಾಗುತ್ತದೆ. ಹಾಗೂ ಮೆದುಳು ಚುರುಕಾಗುತ್ತದೆ.

ವರದಿಗಳ ಪ್ರಕಾರ, ಮೆದುಳು ನಮ್ಮ ಆಲೋಚನಾ ಶಕ್ತಿಯ ಕೇಂದ್ರವಾಗಿದೆ. ಬಸ್ಕಿ ಹೊಡೆಯುವಾಗ ಉಸಿರಾಟ ಮತ್ತು ಆಕ್ಯುಪ್ರೆಶರ್​​ನಿಂದಾಗಿ ಮೆದುಳಿನ ಬಲಭಾಗವು ಉತ್ತೇಜಿಸಲ್ಪಡುತ್ತದೆ. ಪರಿಣಾಮವಾಗಿ ಪಿಟ್ಯುಟರಿ ಗ್ರಂಥಿಯು ಶಕ್ತಿಯುತವಾಗುತ್ತದೆ. ಇದು ಮೆದುಳಿನಲ್ಲಿ ಆಲ್ಫಾ ತರಂಗಗಳ ಸಕ್ರಿಯಗೊಳಿಸುವಿಕೆಯನ್ನು ಹೆಚ್ಚಿಸುತ್ತದೆ, ಇದು ವಾಸ್ತವವಾಗಿ ಏಕಾಗ್ರತೆಯನ್ನು ಹೆಚ್ಚಿಸಲು ಮತ್ತು ಮೆದುಳನ್ನು ಸಕ್ರಿಯಗೊಳಿಸಲು ಸಹಕಾರಿಯಾಗಿದೆ. ಹಾಗೂ ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ.

ಸೂಪರ್ ಬ್ರೈನ್ ಯೋಗ ಮಾಡುವುದು ಹೇಗೆ?

ನಿಮ್ಮ ಮಗುವಿಗೆ ಏಕಾಗ್ರತೆಯ ಕೊರತೆಯಿದ್ದರೆ, ನೀವು ಮಕ್ಕಳಿಗೆ ಈ ಸೂಪರ್ ಬ್ರೈನ್ ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡಿಸಬಹುದು. ಅದರೊಂದಿಗೆ ನೀವು ಕೂಡಾ ಈ ಒಂದು ಯೋಗವನ್ನು ಅಭ್ಯಾಸ ಮಾಡಬಹುದು.

• ಈ ಯೋಗವನ್ನು ಮಾಡಲು ಮೊದಲನೆಯದಾಗಿ ನೇರವಾಗಿ ಎದ್ದು ನಿಂತುಕೊಳ್ಳಿ.

• ನಂತರ ಎಡಗೈಯ ಹೆಬ್ಬೆರಳು ಮತ್ತು ಅದರ ನಂತರದ ಬೆರಳಿನಿಂದ ನಿಮ್ಮ ಬಲ ಕಿವಿಯ ಕೆಲಭಾಗವನ್ನು ಅಂದರೆ ಕಿವಿ ಹಾಳೆಯನ್ನು ಹಿಡಿದುಕೊಳ್ಳಿ. ಆ ಸಂದರ್ಭದಲ್ಲಿ ಹೆಬ್ಬೆರಳು ಮುಂದಕ್ಕೆ ಮುಖ ಮಾಡಿರಬೇಕು. ಅದೇ ರೀತಿ ಎಡ ಕಿವಿಯನ್ನು ಬಲಗೈಯಿಂದ ಹಿಡಿದುಕೊಳ್ಳಿ.

• ಈಗ ದೀರ್ಘವಾದ ಉಸಿರನ್ನು ತೆಗೆದುಕೊಂಡು ನಿಧಾನಕ್ಕೆ ಕುಳಿತುಕೊಳ್ಳಿ. 2 ರಿಂದ 3 ಸೆಕೆಂಡುಗಳ ಕಾಲ ಈ ಸ್ಥಾನದಲ್ಲಿರಿ. ಬಳಿಕ ನೀವು ಮೇಲೆ ಏಳುವಾಗ ನಿಧಾನವಾಗಿ ಉಸಿರನ್ನು ಬಿಡಿ. ಹೀಗೆ ಪ್ರತಿನಿತ್ಯ 15 ರಿಂದ 20 ಬಾರಿ ಬಸ್ಕಿ ಹೊಡೆಯಿರಿ. ಈ ಒಂದು ಅಭ್ಯಾಸದಿಂದ ಮೆದುಳು ಚುರುಕಾಗುತ್ತದೆ.

ಇದನ್ನೂ ಓದಿ:ಫ್ಲೋರಿಡಾದ ಜಿಮ್​ಗೆ ಭೇಟಿ ನೀಡಿದ ಮರಿಯಾಮೆ; ಮ್ಯಾನೇಜರ್​ಗೆ ವ್ಯಾಯಾಮ ಮಾಡಿಸಿ ಮರಳಿತು

ಸೂಪರ್ ಬ್ರೈನ್ ಯೋಗದ ಪ್ರಯೋಜನಗಳು:

• ಸೂಪರ್ ಬ್ರೈನ್ ಯೋಗವು ನಿಮ್ಮ ಮೆದುಳಿನ ಬೂದು ದ್ರವ್ಯವನ್ನು ಉತ್ತೇಜಿಸಲು ಸಹಕಾರಿಯಾಗಿದೆ.

• ಚಿಂತನಾ ಸಾಮಾರ್ಥ್ಯವನ್ನು ಉತ್ತೇಜಿಸುತ್ತದೆ.

• ನಿಮ್ಮನ್ನು ಹೆಚ್ಚು ಸೃಜನಶೀಲರನ್ನಾಗಿಸುತ್ತದೆ.

• ಗಮನ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ

• ಒತ್ತಡವನ್ನು ನಿವಾರಿಸಲು ಸಹಕಾರಿಯಾಗಿದೆ.

• ಸ್ಮರಣಾ ಶಕ್ತಿಯನನು ಹೆಚ್ಚಿಸುತ್ತದೆ.

• ಸೂಪರ್ ಬ್ರೈನ್ ಯೋಗದಿಂದ ನಿಮ್ಮ ಎಡ ಮತ್ತು ಬಲ ಮೆದುಳಿನ ಸಮನ್ವಯವು ಉತ್ತಮವಾಗಿರುತ್ತದೆ.

• ಮನಸ್ಸನ್ನು ಶಾಂತವಾಗಿರಿಸುತ್ತದೆ.

• ಆಲೋಚನಾ ಸಾಮರ್ಥ್ಯವನ್ನು ಉತ್ತೇಚಿಸುತ್ತದೆ.

• ಉದ್ವೇಗವನ್ನು ಕಡಿಮೆ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: