ಅರಿಶಿನ, ಗಿಡಮೂಲಿಕೆಗಳಿಂದ ಸ್ಕ್ರಬ್ ತಯಾರಿಸುವುದು ಹೇಗೆ? ನಿಮ್ಮ ಚರ್ಮಕ್ಕೆ ಕಾಂತಿ ನೀಡಲು ಇಲ್ಲಿದೆ ಸರಳ ಉಪಾಯ!

ಸ್ಕ್ರಬ್ ನಿಮ್ಮ ಚರ್ಮಕ್ಕೆ ಕಾಂತಿ ನೀಡಲು ಬಳಸುವ ನೈಸರ್ಗಿಕ ವಿಧಾನವಾಗಿದ್ದು ಯಾವುದೇ ಕಠಿಣ ರಾಸಾಯನಿಕಗಳ ಬಳಕೆಯಿಲ್ಲದೆ ಕಾಂತಿಯುತ ಮೈಬಣ್ಣವನ್ನು ಒದಗಿಸುತ್ತದೆ. ಮನೆಯಲ್ಲಿ ಸ್ಕ್ರಬ್ (ಉಬ್ಟಾನ್) ತಯಾರಿಸುವುದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Important Highlight‌
ಅರಿಶಿನ, ಗಿಡಮೂಲಿಕೆಗಳಿಂದ ಸ್ಕ್ರಬ್ ತಯಾರಿಸುವುದು ಹೇಗೆ? ನಿಮ್ಮ ಚರ್ಮಕ್ಕೆ ಕಾಂತಿ ನೀಡಲು ಇಲ್ಲಿದೆ ಸರಳ ಉಪಾಯ!
ಸಾಂದರ್ಭಿಕ ಚಿತ್ರImage Credit source: Pinterest
Follow us
ಪ್ರೀತಿ ಭಟ್​, ಗುಣವಂತೆ
| Updated By: Akshatha Vorkady

Updated on: Aug 23, 2023 | 7:05 PM

ಶತಮಾನಗಳಿಂದಲೂ ಉಬ್ಟಾನ್ ಅಥವಾ ಸ್ಕ್ರಬ್ ಎಂಬುದು ಭಾರತೀಯರ ಸಾಂಪ್ರದಾಯಿಕ ಚರ್ಮದ ಆರೈಕೆಯಾಗಿದ್ದು, ಜೊತೆಗೆ ಸೌಂದರ್ಯದ ರಹಸ್ಯವೂ ಆಗಿದೆ. ಉಬ್ಟಾನ್ (Scrub) ವಿವಿಧ ಗಿಡಮೂಲಿಕೆ, ಮಸಾಲೆ (spice) ಮತ್ತು ನೈಸರ್ಗಿಕ ಪದಾರ್ಥ (Natural product) ಗಳ ಮಿಶ್ರಣದಿಂದ ತಯಾರಿಸಿದ ಮಿಶ್ರಣವಾಗಿದ್ದು, ಕಾಂತಿಯುತ ಮೈ ಬಣ್ಣ ನೀಡಲು ಹೆಸರುವಾಸಿಯಾಗಿದೆ. ಈ ಸ್ಕ್ರಬ್ ಕಠಿಣ ರಾಸಾಯನಿಕಗಳನ್ನು ಬಳಸದೆಯೇ ನಿಮ್ಮ ಚರ್ಮಕ್ಕೆ ಬಳಸಲು ಸೂಕ್ತವಾದ ಪರಿಪೂರ್ಣ ಆಯ್ಕೆಯಾಗಿದೆ. ಇದರ ಪ್ರಯೋಜನಗಳನ್ನು ತಿಳಿಯಲು, ಜೊತೆಗೆ ಅಂದದ ಚರ್ಮಕ್ಕಾಗಿ ಮನೆಯಲ್ಲಿ ಸ್ಕ್ರಬ್ ತಯಾರಿಸುವುದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಉಬ್ಟಾನ್ ನೈಸರ್ಗಿಕ ಪದಾರ್ಥಗಳ ಮಿಶ್ರಣವಾಗಿದ್ದು, ಚರ್ಮಕ್ಕೆ ಹಲವಾರು ರೀತಿಯ ಪ್ರಯೋಜನವನ್ನು ನೀಡುತ್ತದೆ. ಹಾಗಾದರೆ, ಉಬ್ಟಾನ್ ಅಥವಾ ಸ್ಕ್ರಬ್ ನ ಪ್ರಯೋಜನಗಳೇನು?

 1. ಎಕ್ಸ್ಫೋಲಿಯೇಷನ್ ಗೆ ಸಹಕಾರಿ:

ಚರ್ಮದ ಮೇಲ್ಪದರದಲ್ಲಿ ಮೃತ ಕೋಶಗಳ ಸಂಖ್ಯೆ ಹೆಚ್ಚಾದಂತೆ ಚರ್ಮವು ಕಾಂತಿಹೀನ ವೆನಿಸತೊಡಗುತ್ತದೆ. ಆಗ ಚರ್ಮದ ಈ ಮೇಲ್ಪದರವನ್ನು ಸ್ವಚ್ಛಗೊಳಿಸಿ, ಹೊಸ ಜೀವಕೋಶಗಳನ್ನು ಹೊಳೆಯುವಂತೆ ಮಾಡುವ ಪ್ರಕ್ರಿಯೆಗೆ ಸೌಂದರ್ಯ ಶಾಸ್ತ್ರದಲ್ಲಿ ಎಕ್ಸ್‌ಫೋಲಿಯೇಷನ್‌ ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಗೆ ಬಳಸಲಾಗುವ ಉತ್ಪನ್ನಗಳನ್ನು ಎಕ್ಸ್‌ಫೋಲಿಯೆಂಟ್‌ ಎಂದು ಕರೆಯಲಾಗುತ್ತದೆ. ಉಬ್ಟಾನ್ ಮೃದುವಾದ ಎಕ್ಸ್ಫೋಲಿಯೇಟರ್ ಆಗಿ ಕಾರ್ಯನಿರ್ವಹಿಸುತ್ತದೆ, ಸತ್ತ ಚರ್ಮದ ಕೋಶಗಳು ಮತ್ತು ಕಲ್ಮಶಗಳನ್ನು ಹೊರಹಾಕುತ್ತದೆ, ನಿಮ್ಮ ಚರ್ಮವನ್ನು ಮತ್ತೆ ಮೊದಲಿನಂತಾಗಿಸುತ್ತದೆ.

2. ಹೊಳಪು ನೀಡುತ್ತದೆ:

ಅರಿಶಿನ, ಕೇಸರಿ ಮತ್ತು ಕಡಲೆ ಹಿಟ್ಟಿನಂತಹ ನೈಸರ್ಗಿಕ ಪದಾರ್ಥಗಳು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ, ಇದು ಚರ್ಮಕ್ಕೆ ಹೊಳಪು ನೀಡುವಲ್ಲಿ ಸಹಾಯ ಮಾಡುತ್ತದೆ.

3. ಆಳವಾದ ಶುದ್ಧೀಕರಣಕ್ಕೆ ಸಹಕಾರಿ:

ಉಬ್ಟಾನ್ ಚರ್ಮದ ರಂಧ್ರಗಳಲ್ಲಿರುವ ಕೊಳೆ, ಹೆಚ್ಚುವರಿ ಎಣ್ಣೆ ಮತ್ತು ಇತರ ಮಾಲಿನ್ಯಕಾರಕಗಳನ್ನು ತೆಗೆದುಹಾಕುತ್ತದೆ, ಇದು ಮೊಡವೆ ಮತ್ತು ಇತರ ಚರ್ಮದ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

4. ಮಾಯಿಶ್ಚರೈಸಿಂಗ್ ಆಗಿಯೂ ಕಾರ್ಯನಿರ್ವಹಿಸುತ್ತದೆ:

ಉಬ್ಟಾನ್ ಅಥವಾ ಸ್ಕ್ರಬ್ ನಲ್ಲಿರುವ ಹಾಲು, ಮೊಸರು ಅಥವಾ ಜೇನುತುಪ್ಪದಂತಹ ಪದಾರ್ಥಗಳು ಚರ್ಮಕ್ಕೆ ಆಳವಾದ ಮಾಯಿಶ್ಚರೈಸಿಂಗ್ ಒದಗಿಸುವಲ್ಲಿ ಸಹಾಯ ಮಾಡುತ್ತದೆ, ಇದು ನಿಮ್ಮ ಚರ್ಮವನ್ನು ಮೃದುವಾಗಿಸಾಲು ಸಹಾಯ ಮಾಡುತ್ತದೆ.

5. ಆಂಟಿ ಏಜಿಂಗ್:

ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮವು ವಯಸ್ಸಾದಂತೆ ಕಾಣದಿರಲು ಸಹಾಯ ಮಾಡುತ್ತದೆ.

6. ಟೋನಿಂಗ್:

ಸ್ಕ್ರಬ್ ನಲ್ಲಿರುವ ಗಿಡಮೂಲಿಕೆಗಳು ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಈ ರಕ್ಷಾಬಂಧನದಂದು ನಿಮ್ಮ ಅಣ್ಣನಿಗೆ ಮನೆಯಲ್ಲಿಯೇ ಪಿಸ್ತಾ ಕುಲ್ಫಿ ತಯಾರಿಸಿ

ಈಗ, ನೀವು ಮನೆಯಲ್ಲಿಯೇ ತಯಾರಿಸಬಹುದಾದ ಸರಳ ಮತ್ತು ಪರಿಣಾಮಕಾರಿ ಉಬ್ಟಾನ್ ಅಥವಾ ಸ್ಕ್ರಬ್ ಮಾಡುವ ವಿಧಾನ ಇಲ್ಲಿದೆ:

ಮನೆಯಲ್ಲಿ ಉಬ್ಟಾನ್ ತಯಾರಿಸುವುದು ಹೇಗೆ?

ಬೇಕಾಗುವ ಸಾಮಗ್ರಿಗಳು:

  • 2 ದೊಡ್ಡ ಚಮಚ ಕಡಲೆ ಹಿಟ್ಟು
  • 1/2 ಟೀ ಸ್ಪೂನ್ ಅರಿಶಿನ ಪುಡಿ
  • ಒಂದು ಚಿಟಿಕೆ ಕೇಸರಿ ಎಳೆಗಳು (1 ಚಮಚ ಬೆಚ್ಚಗಿನ ಹಾಲಿನಲ್ಲಿ ನೆನೆಸಿದ ಕೇಸರಿ)
  • 1 ಚಮಚ ಹಸಿ ಹಾಲು (ಅಥವಾ ಎಣ್ಣೆಯುಕ್ತ ಚರ್ಮಕ್ಕೆ ಮೊಸರು)
  • 1 ಟೀ ಸ್ಪೂನ್ ಜೇನುತುಪ್ಪ (ಹೆಚ್ಚುವರಿ ತೇವಾಂಶಕ್ಕಾಗಿ ಬೇಕಾದಲ್ಲಿ)
  • ರೋಸ್ ವಾಟರ್ (ಅಗತ್ಯಕ್ಕೆ ತಕ್ಕಂತೆ)

ಮಾಡುವ ವಿಧಾನ:

ಹಂತ 1: ಒಂದು ಮಿಕ್ಸಿಂಗ್ ಬೌಲ್ ನಲ್ಲಿ ಕಡಲೆ ಹಿಟ್ಟು ಮತ್ತು ಅರಿಶಿನ ಪುಡಿಯನ್ನು ಸೇರಿಸಿ. ಈ ಕಡಲೆ ಹಿಟ್ಟು ನಿಮ್ಮ ಮುಖಕ್ಕೆ ತುಂಬಾ ಒಳ್ಳೆಯದು. ಇನ್ನು ಅರಿಶಿನವು ಉರಿಯೂತದ ಗುಣಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಹಂತ 2: ಹಾಲಿನಲ್ಲಿ ನೆನೆಸಿದ ಕೇಸರಿಯನ್ನು ಈ ಮಿಶ್ರಣಕ್ಕೆ ಸೇರಿಸಿ. ಕೇಸರಿಯು ನಿಮ್ಮ ಮೈ ಬಣ್ಣಕ್ಕೆ ಹೊಳಪನ್ನು ನೀಡುತ್ತದೆ.

ಹಂತ 3: ಹಸಿ ಹಾಲನ್ನು (ಅಥವಾ ಮೊಸರು) ಮಿಶ್ರಣಕ್ಕೆ ಸೇರಿಸಿ. ಹಾಲು ನೈಸರ್ಗಿಕ ಕ್ಲೆನ್ಸರ್ ಮತ್ತು ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಚರ್ಮವನ್ನು ಪೋಷಿಸುತ್ತದೆ.

ಹಂತ 4: ಮಿಶ್ರಣಕ್ಕೆ ಒಂದು ಟೀ ಸ್ಪೂನ್ ಜೇನುತುಪ್ಪವನ್ನು ಸೇರಿಸಿ. ಇದು ಒಣ ಚರ್ಮದ ಪ್ರಕಾರಗಳಿಗೆ ಒಳ್ಳೆಯದು. (ಬೇಕಾದಲ್ಲಿ ಮಾತ್ರ ಸೇರಿಸಬಹುದು)

ಹಂತ 5: ನಯವಾದ ಪೇಸ್ಟ್ ತಯಾರಾಗುವವರೆಗೆ, ಮಿಶ್ರಣವನ್ನು ಕಲಕುತ್ತೀರಿ. ಕ್ರಮೇಣ ರೋಸ್ ವಾಟರ್ ಅನ್ನು ಮಿಶ್ರಣಕ್ಕೆ ಸೇರಿಸಿದರೆ ಸ್ಕ್ರಬ್ ಸಿದ್ದವಾಗುತ್ತದೆ.

ನಿಮ್ಮ ಮುಖಕ್ಕೆ ಉಬ್ಟಾನ್ ಅಥವಾ ಸ್ಕ್ರಬ್ ಹಚ್ಚುವುದು ಹೇಗೆ?

  • ಉಬ್ಟಾನ್ ಹಚ್ಚುವ ಮೊದಲು, ನಿಮ್ಮ ಮುಖ ಮತ್ತು ಕುತ್ತಿಗೆ ಭಾಗವನ್ನು ಮೇಕಪ್ ಇಲ್ಲದಂತೆ ಸ್ವಚ್ಛಗೊಳಿಸಿಕೊಳ್ಳಿ.
  • ಬಳಿಕ ನೀವು ತಯಾರಿಸಿ ಇಟ್ಟುಕೊಂಡ ಪೇಸ್ಟ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆ ಭಾಗಕ್ಕೆ ವೃತ್ತಾಕಾರದ ಚಲನೆಯಲ್ಲಿ ನಿಧಾನವಾಗಿ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ. ಆದಷ್ಟು ಕಣ್ಣಿನ ಪ್ರದೇಶವನ್ನು ತಪ್ಪಿಸಿ.
  • ಪೇಸ್ಟ್ ಹಚ್ಚಿದ ಬಳಿಕ ಸುಮಾರು 15 -20 ನಿಮಿಷಗಳ ಕಾಲ ಇಟ್ಟುಕೊಳ್ಳಿ.
  • ಅರ್ಧ ಒಣಗಿದ ನಂತರ, ನಿಮ್ಮ ಮುಖ ಮತ್ತು ಕುತ್ತಿಗೆಯ ಭಾಗದಲ್ಲಿ ಪುನಃ ವೃತ್ತಾಕಾರದ ಚಲನೆಯಲ್ಲಿ ನಿಧಾನವಾಗಿ ಉಜ್ಜಿಕೊಳ್ಳಿ ಅಥವಾ ಮಸಾಜ್ ಮಾಡಿಕೊಳ್ಳಿ. ಈ ಹಂತವು ನಿಮ್ಮ ಚರ್ಮವನ್ನು ಮತ್ತಷ್ಟು ಎಕ್ಸ್ಫೋಲಿಯೇಟ್ ಮಾಡುತ್ತದೆ.
  • ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ, ನಿಮಗೆ ಬೇಕಾದಲ್ಲಿ ತಣ್ಣೀರನ್ನು ಬಳಸಬಹುದು.
  • ಮೃದುವಾದ ಟವೆಲ್ ನಿಂದ ಒರೆಸಿಕೊಳ್ಳಿ. ಬಳಿಕ ನೀವು ಬಳಸುವ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.

ಮೇಲೆ ತಿಳಿಸಿದ ಸರಳ ವಿಧಾನವನ್ನು ಅನುಸರಿಸುವ ಮೂಲಕ, ನೀವು ಮನೆಯಲ್ಲಿ ಸುಲಭವಾಗಿ ಉಬ್ಟಾನ್ ಅಥವಾ ಸ್ಕ್ರಬ್ ತಯಾರಿಸಬಹುದು ಮತ್ತು ಆರೋಗ್ಯಕರ, ಹೊಳೆಯುವ ಚರ್ಮವನ್ನು ಯಾವುದೇ ರೀತಿಯ ರಾಸಾಯನಿಕ ಅಂಶವಿಲ್ಲದೇ ಪಡೆಯಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು