ಬೆಂಗಳೂರಿನ ಜನಾಂಗೀಯ ನಿಂದನೆ ಪ್ರಕರಣಕ್ಕೆ ಟ್ವಿಸ್ಟ್: ಹೆಂಡತಿಗೆ ಹೆದರಿ ಹೊಸ ಕಥೆ ಕಟ್ಟಿದ, ಪೊಲೀಸ್ ತನಿಖೆಯಲ್ಲಿ ಬಾಯ್ಬಿಟ್ಟ
‘ಚೀನೀ’ ಎಂದು ನಿಂದಿಸಿ ಅಸ್ಸಾಂ ಮೂಲದ ದಿನೇಶ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ದಿನೇಶ್ ಕುಡಿದ ಮತ್ತಿನಲ್ಲಿ ಪೊಲೀಸರಿಗೆ ಜನಾಂಗೀಯ ನಿಂದನೆ ಕಥೆ ಕಟ್ಟಿರುವುದು ತನಿಖೆ ವೇಳೆ ಬಯಲಾಗಿದೆ.
ಬೆಂಗಳೂರು (ಆ.20): ‘ಚೀನೀ’ ಎಂದು ನಿಂದಿಸಿ ಅಸ್ಸಾಂ (Assam) ಮೂಲದ ದಿನೇಶ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ದಿನೇಶ್ ಕುಡಿದ ಮತ್ತಿನಲ್ಲಿ ಪೊಲೀಸರಿಗೆ (Police) ಜನಾಂಗೀಯ ನಿಂದನೆ ಕಥೆ ಕಟ್ಟಿರುವುದು ತನಿಖೆ ವೇಳೆ ಬಯಲಾಗಿದೆ. ಮುಖದ ಮೇಲಿನ ಗಾಯಗಳನ್ನು ನೋಡಿ ಎಲ್ಲಿ ತನ್ನ ಪತ್ನಿ ಬೈಯುತ್ತಾಳೆ ಎಂದು ಪೊಲೀಸರ ಎದುರು ಕಥೆ ಕಟ್ಟಿದ್ದಾನೆ.
ದಿನೇಶ್ ಪೊಲೀಸರ ಎದುರು ಕಥೆ ಕಟ್ಟಿದ್ದೇನು
ದಿನೇಶ್ ಸುಬ್ಬಾ (30) ಅವರು ಹೋಟೆಲ್ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 16ರಂದು ಸಹೋದರ ಹಾಗೂ ಸ್ನೇಹಿತನೊಂದಿಗೆ ಊಟ ಮಾಡಿಕೊಂಡು ವಾಪಸ್ ಬರುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಮೂವರು ವ್ಯಕ್ತಿಗಳು ಚೂಪಾದ ವಸ್ತುವಿನಿಂದ ಇರಿದು ಹಲ್ಲೆ ನಡೆಸಿದ್ದರು.
ಭಾರತೀಯನೆಂದು ತಿಳಿದಿದ ನಂತರವೂ ಆರೋಪಿಗಳು ಹಲ್ಲೆ ಮುಂದುವರೆಸಿದ್ದರು. ಎಂದು ದಿನೇಶ್ ಪೊಲೀಸರ ಮುಂದೆ ಹೇಳಿದ್ದರು. ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದರು. ಈ ವೇಳೆ ದಿನೇಶ್ನನ್ನೂ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಾಯಿ ಬಿಟ್ಟಿದ್ದಾನೆ.
ಇದನ್ನೂ ಓದಿ: ಬೆಂಗಳೂರು: ತನ್ನ ಏರಿಯಾ ಬಿಟ್ಟು ಬೇರೆ ಏರಿಯಾದಲ್ಲಿ ಪ್ಯಾಸೆಂಜರ್ ಪಿಕ್ ಮಾಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ
ಕುಡಿದ ಮತ್ತಿನಲ್ಲಿ ದಿನೇಶ್ ಮಧ್ಯರಾತ್ರಿ 12 ಗಂಟೆ ಅಂಗಡಿಯೊಂದರ ಮೇಲತ್ತಲು ಯತ್ನಿಸಿದ್ದಾನೆ. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಬಿದ್ದು ಸ್ವಲ್ಪ ಹೊತ್ತಿನ ನಂತರ ಈತನನ್ನು ನೋಡಿದ ಪಕ್ಕದ ಅಪಾರ್ಟ್ಮೆಂಟ್ನ ಸೆಕ್ಯೂರಿಟಿ ಪೊಲೀಸರಿಗೆ ಕರೆ ಮಾಡಿದ್ದಾರೆ ಅಂತ ಹೇಳಿದ್ದಾನೆ. ಸತ್ಯ ಸಂಗತಿ ಬಯಲಾದ ಬಳಿಕ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ದಿನೇಶ್ಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:39 am, Sun, 20 August 23