ಯಾದಗಿರಿ, ಆಗಸ್ಟ್ 22: ನಗರಸಭೆ (Yadgir Municipal Corporation) ಅಕ್ರಮ ಬಯಲಿಗೆಳೆದ ಪೌರಾಯುಕ್ತ ಸಂಗಪ್ಪ ಉಪಾಸೆ ಅವರಿಗೆ ಜೀವ ಬೆದರಿಕೆ ಕರೆಗಳು ಬರುಲಾರಂಭಿಸಿದ್ದು, ರಕ್ಷಣೆ ಕೋರಿ ಉಪಾಸೆ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಹಿಂದಿನ ಅಧಿಕಾರಿಗಳ ಅಕ್ರಮ ಬಯಲಿಗೆಳೆದಿದ ನಂತರ ಸಂಗಪ್ಪ ಅವರಿಗೆ ಜೀವ ಬೆದರಿಕೆ ಕರೆಗಳು ಬರಲಾರಂಭಿಸಿದ್ದು, ಕಚೇರಿ ಬಳಿ ಪ್ರತಿನಿತ್ಯ ಅನಾಮಿಕ ವ್ಯಕ್ತಿಗಳು ಓಡಾಡಲು ಆರಂಭಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನಕಲಿ ದಾಖಲಗಳನ್ನು ಸೃಷ್ಟಿಸಿ ಕೃಷಿ ಭೂಮಿಯಲ್ಲಿ 1,310 ಖಾತಾ ನೀಡಿ ಸರ್ಕಾರದ ಬೊಕ್ಕಸಕ್ಕೆ 18 ಕೋಟಿ ರೂ. ನಷ್ಟ ಆಗಿರುವುದನ್ನು ಪೌರಾಯುಕ್ತ ಸಂಗಪ್ಪ ಅವರು ಪತ್ತೆ ಹಚ್ಚಿದ್ದರು. ಅಲ್ಲದೇ ನಾಲ್ಕು ಕೋಟಿ ಮೌಲ್ಯದ ಸರ್ಕಾರಿ ಜಾಗವನ್ನ ಖಾಸಗಿ ವ್ಯಕ್ತಿಗಳ ಹೆಸರಿಗೆ ಪರಭಾರೆ ಮಾಡಿದ್ದನ್ನ ಬಯಲಿಗೆ ಎಳೆದಿದ್ದರು.
ಇದನ್ನೂ ಓದಿ: ಯಾದಗಿರಿ: ನಕಲಿ ದಾಖಲೆ ಸೃಷ್ಟಿಸಿ 18ಕೋಟಿ ರೂ. ಮೌಲ್ಯದ ಸರ್ಕಾರಿ ಆಸ್ತಿ ಪರಭಾರೆ, ನೋಟಿಸ್ ಜಾರಿ
ಇದೇ ಪ್ರಕರಣ ಸಂಬಂಧ ನಗರಸಭೆ ಸದಸ್ಯೆಯ ಪತಿ, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಅವರ ಹೆಸರು ಪ್ರಸ್ತಾಪಿಸಿದ್ದರು. ಇದೇ ಕಾರಣಕ್ಕೆ ನಿತ್ಯವೂ ಅನಾಮಿಕ ವ್ಯಕ್ತಿಗಳು ಕಚೇರಿ ಸುತ್ತವೂ ಓಡುತ್ತಿದ್ದಾರೆ. ರಾತ್ರಿ ವೇಳೆ ಬೇದರಿಕೆ ಕರೆಗಳು ಬರುತ್ತಿವೆ. ನನ್ನ ತೇಜೋವಧೆ ಮಾಡುವುದಲ್ಲದೇ, ನನ್ನ ವಿರುದ್ಧ ಸಂಚು ರೂಪಿಸುತ್ತಿದ್ದಾರೆ. ಹೀಗಾಗಿ ರಕ್ಷಣೆ ನೀಡುವಂತೆ ಪೌರಾಯಕ್ತ ಸಂಗಪ್ಪ ಉಪಾಸೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ