ಯಾದಗಿರಿ, ಆಗಷ್ಟ್ 24: ಯಾದಗಿರಿ (Yadagiri) ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಬರೋಬ್ಬರಿ 21 ವರ್ಷಗಳ ಬಳಿಕ ಮಕ್ಕಳಿಗೆ ಬಿಸಿಯೂಟದ ಭಾಗ್ಯ ಒದಗಿಸಲಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಚೆನ್ನೂರ್ (Chennur village in Hunasagi taluk) ಗ್ರಾಮದ ಶಾಲೆಯಲ್ಲಿ ಜಾತಿ ಸಂಘರ್ಷದಿಂದ ಬಿಸಿಯೂಟ (Mid Day Meal) ಬಂದ್ ಆಗಿತ್ತು. ಅಧಿಕಾರಿಗಳ ಸಂಧಾನದ ಬಳಿಕ ಬಿಸಿಯೂಟ ಕೊನೆಗೂ ಆರಂಭಗೊಂಡಿದೆ.
2002 ರಲ್ಲಿ ಬಿಸಿಯೂಟ (Bisi Uta) ಸಹಾಯಕಿಯರ ನೇಮಕದ ವಿಚಾರದಲ್ಲಿ ಗಲಾಟೆ ನಡೆದಿತ್ತು. ಮೀಸಲಾತಿ ಪ್ರಕಾರ ಓರ್ವ ದಲಿತ ಮಹಿಳೆಗೆ ಅಡುಗೆ ಸಹಾಯಕಿ ಹುದ್ದೆಗೆ ತೆಗೆದುಕೊಳ್ಳಬೇಕಾಗಿತ್ತು. ಆದ್ರೆ ದಲಿತರು ಮಾಡಿದ ಅಡುಗೆ ನಾವು ತಿನ್ನಬಾರದು ಎಂದು ಸವರ್ಣೀಯರು ತಗಾದೆ ತೆಗೆದಿದ್ದರು. ಇದೇ ಕಾರಣಕ್ಕೆ ಅಂದಿನಿಂದ ಶಾಲೆಯಲ್ಲಿ ಬಿಸಿಯೂಟನೇ ಮಾಡಿರಲಿಲ್ಲ!
ಇದನ್ನೂ ಓದಿ: ಯಾದಗಿರಿ ನಗರಸಭೆ ಅಕ್ರಮ ಬಯಲಿಗೆಳೆದ ಪೌರಾಯುಕ್ತರಿಗೆ ಜೀವ ಬೆದರಿಕೆ
ಆದ್ರೆ ನಿನ್ನೆ ಜಿಲ್ಲಾ ಅಕ್ಷರದಾಸೋಹದ ಅಧಿಕಾರಿಗಳು ಗ್ರಾಮಕ್ಕೆ ಭೇಡಿ ಎರಡೂ ಕಡೆಯವರಿಗೆ ಮನವೊಲಿಸಿದ್ದಾರೆ. ಬಳಿಕ ನಿನ್ನೆ ಸದ್ಯಕ್ಕೆ ವಿಶ್ವಗಂಗ ಸಂಸ್ಥೆಯ ಮೂಲಕ ಬಿಸಿಯೂಟ ವಿತರಣೆ ಮಾಡಲಾಗಿದೆ. ಮಕ್ಕಳು ಹಾಗೂ ಪೋಷಕರು 21 ವರ್ಷದ ಬಳಿಕ ಶಾಲೆಗೆ ಬಿಸಿಯೂಟ ಬಂದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 1 ರಿಂದ 5 ನೇ ತರಗತಿ ವರೆಗೆ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದಾಗಿದೆ. SDMC ರಚನೆ ಬಳಿಕ SDMC (School Development and Monitoring Committee) ತೀರ್ಮಾನದಂತೆ ಬಿಸಿಯೂಟ ಸಹಾಯಕಿಯರ ನೇಮಕ ಮಾಡಲಾಗುತ್ತೆ ಎಂದು ತಿಳಿದುಬಂದಿದೆ.
ಯಾದಗಿರಿ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ