ಯಾದಗಿರಿ: ಕೊಡೆಕಲ್ ನೀಲಕಂಠ ಸ್ವಾಮೀಜಿ ನೇತೃತ್ವದ ಪ್ರವಚನಕ್ಕೆ ಷರತ್ತು ಬದ್ಧ ಅನುಮತಿ ನೀಡಿದ ಸಹಾಯಕ ಆಯುಕ್ತ
ಕೊಡಕಲ್ ರಾಚೇಶ್ವರ ಮಹಾ ಶಿವಯೋಗಿಗಳ 555ನೇ ಪುಣ್ಯ ಸ್ಮರಣೆ ಹಾಗೂ ಶ್ರಾವಣ ಮಾಸ ಹಿನ್ನೆಲೆ ವಿರಕ್ತಮಠದ ನೀಲಕಂಠ ಸ್ವಾಮೀಜಿಯುವರ ಪ್ರವಚನಕ್ಕೆ ನಿನ್ನೆ(ಆ.17) ಬ್ರೇಕ್ ಹಾಕಲಾಗಿತ್ತು. ಇಂದು(ಆ.18) ಸಹಾಯಕ ಆಯುಕ್ತರು ಷರತ್ತು ಬದ್ದ ಪ್ರವಚನಕ್ಕೆ ಅನುಮತಿ ನೀಡಿದ್ದಾರೆ.
ಯಾದಗಿರಿ, ಆ.18: ನಿನ್ನೆ(ಆ.17) ಕೊಡಕಲ್ ರಾಚೇಶ್ವರ ಮಹಾ ಶಿವಯೋಗಿಗಳ 555ನೇ ಪುಣ್ಯ ಸ್ಮರಣೆ ಹಾಗೂ ಶ್ರಾವಣ ಮಾಸ ಹಿನ್ನೆಲೆ ವಿರಕ್ತಮಠದ ನೀಲಕಂಠ ಸ್ವಾಮೀಜಿಯುವರು ಪ್ರವಚನ ನಡೆಸಲು ಮುಂದಾಗಿದ್ದಾರೆ. ಆದರೆ, ಇದಕ್ಕೆ ವೀರಶೈವ ಲಿಂಗಾಯತ (Veerashaiva Lingayat) ಸಂಘಟನಾ ವೇದಿಕೆಯಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಹುಣಸಗಿ ತಹಶೀಲ್ದಾರ್ ಅವರು ಶ್ರೀಗಳ ಪ್ರವಚನಕ್ಕೆ ತಡೆ ನೀಡಿದ್ದರು. ಅಷ್ಟೇ ಅಲ್ಲದೆ, ಆಗಸ್ಟ್ 17 ರಿಂದ ಸೆಪ್ಟೆಂಬರ್ 17 ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಆದೇಶ ಹೊರಡಿಸಿದ್ದರು. ಬಳಿಕ ಅಧಿಕಾರಿಗಳ ವಿರುದ್ಧ ಹುಣಸಗಿ ತಹಶೀಲ್ದಾರ ಕಚೇರಿ ಮುಂದೆ ನಿನ್ನೆ ತಡರಾತ್ರಿವರೆಗೆ ಪ್ರತಿಭಟನೆ ನಡೆಸಲಾಗಿತ್ತು. ಇಂದು ಸಹಾಯಕ ಆಯುಕ್ತರು ಷರತ್ತು ಬದ್ದ ಪ್ರವಚನಕ್ಕೆ ಅನುಮತಿ ನೀಡಿದ್ದಾರೆ.
ದುರುದುಂಡೇಶ್ವರ ಮಠ ಹೊರತುಪಡಿಸಿ ಉಳಿದ ಗ್ರಾಮದಲ್ಲಿ ಜಾರಿ ಆಗಿದ್ದ ನಿಷೇಧಾಜ್ಙೆ ವಾಪಸ್
ಹುಣಸಗಿ ತಾಲೂಕಿನ ಆರು ಗ್ರಾಮಗಳಲ್ಲಿ ಪ್ರವಚನ ಹಾಗೂ ದುಶ್ಚಟ ಬಿಡಿಸುವ ಕೆಲಸ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ, ಸ್ವಾಮೀಜಿ ವಿರುದ್ಧ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ತಹಶೀಲ್ದಾರ್ಗೆ ದೂರು ನೀಡಲಾಗಿತ್ತು. ಈ ಹಿನ್ನಲೆ ಯಾದಗಿರಿ ಸಹಾಯಕ ಆಯುಕ್ತರಿಂದ ಪ್ರವಚನ ನಡೆಯುವ 6 ಗ್ರಾಮಗಳಾದ ಮಾರನಾಳ್, ಬೂದಿಹಾಳ್, ಹಗರಟಗಿ, ಜನಕೊಳೂರ, ಯಣ್ಣಿ ವಡಗೇರ ಮತ್ತು ಕೊಡೆಕಲ್ಗಳಲ್ಲಿ ನಿಷೇಧಾಜ್ಙೆ ಜಾರಿ ಮಾಡಿ ಆದೇಶ ನೀಡಲಾಗಿತ್ತು.
ಷರತ್ತುಬದ್ಧ ಪ್ರವಚನಕ್ಕೆ ಅನುಮತಿ
ಅನುಮತಿ ನೀಡದ್ದಕ್ಕೆ ಸ್ವಾಮೀಜಿಗಳು ಹಾಗೂ ಭಕ್ತರು ತಡರಾತ್ರಿಯವರೆಗೆ ಪ್ರತಿಭಟನೆ ನಡೆಸಿದರು. ಈ ಹಿನ್ನಲೆ ಇವತ್ತು ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಅವರು ನಿಷೇಧಾಜ್ಞೆಯ ಆದೇಶಕ್ಕೆ ಸ್ವಲ್ಪ ಮಾರ್ಪಾಡು ಮಾಡಿ, ಕೇವಲ ಕೊಡೆಕಲ್ನ ದುರುದುಂಡೇಶ್ವರ ಮಠದಲ್ಲಿ ಮಾತ್ರ ನಿಷೇಧಾಜ್ಙೆ ಜಾರಿಗೊಳಿಸಿ, ಜೊತೆಗೆ ಹಳ್ಳಿಗಳಲ್ಲಿ ಪ್ರವಚನದ ವೇಳೆ ಸುಳ್ಳು ಹಾಗೂ ವದಂತಿ ಹರಡಿಸುವ ಕೆಲಸ ಮಾಡಬಾರದು ಎಂದು ಷರತ್ತು ಬದ್ದವಾಗಿ ಪ್ರವಚನಕ್ಕೆ ಅನುಮತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ