ಯಾದಗಿರಿ, ಆಗಸ್ಟ್ 04: ಜಿಲ್ಲೆಯ ಸುರಪುರ ತಾಲೂಕಿನ ನಗನೂರ (Naganur) ಗ್ರಾಮದಲ್ಲಿ ಎರಡನೇ ಅವಧಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಶುಕ್ರವಾರ ನಡೆದಿದ್ದು, ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಚೀಟಿ ಎತ್ತುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದು, ಆ ಮೂಲಕ ವಿಚಿತ್ರ ಫಲಿತಾಂಶಕ್ಕೆ ನಗನೂರ ಗ್ರಾಮ ಪಂಚಾಯತ್ ಚುನಾವಣೆ ಸಾಕ್ಷಿಯಾಗಿದೆ.
ಒಟ್ಟು 19 ಜನ ಸದಸ್ಯರಿಂದ ಮತ ಚಲಾವಣೆ ಮಾಡಲಾಗಿದ್ದು, ಅದರಲ್ಲಿ ಒಂದು ಮತ ಅಸಿಂಧುಗೊಂಡಿದೆ. ಹಾಗಾಗಗಿ ಚುನಾವಣಾ ಫಲಿತಾಂಶ ಭಾರೀ ಗೊಂದಲ ಸೃಷ್ಠಿ ಮಾಡಿತ್ತು. ಇದರಿಂದಾಗಿ ನಗನೂರು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮದಲ್ಲಿ ಪೊಲೀಸರು ಬೀಡು ಬಿಟ್ಟಿದ್ದರು. ಬಳಿಕ ಅಸಿಂಧು ಮತದಿಂದಾಗಿ ಚೀಟಿ ಎತ್ತುವ ಮೂಲಕ ಅಧ್ಯಕ್ಷ/ಉಪಾಧ್ಯಕ್ಷ ಆಯ್ಕೆ ಮಾಡಲಾಗಿದೆ.
ಕಳೆದ ತಿಂಗಳು ಮೀಸಲಾತಿ ಘೋಷಣೆಯ ದಿನ ಇದೇ ಪಂಚಾಯತಿಯ ಇಬ್ಬರು ಸದಸ್ಯರು ನಾಪತ್ತೆಯಾಗಿದ್ದರು. ಮೂರು ದಿನಗಳ ಬಳಿಕ ಸದಸ್ಯರು ಪತ್ತಯಾಗಿದ್ದರು. ಬಳಿಕ ಘಟನೆ ಸುಖಾಂತ್ಯಗೊಂಡಿತ್ತು.
ಚುನಾವಣೆ ಹಿನ್ನಲೆ ಯಾದಗಿರಿಯಲ್ಲಿ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಿ ಯಾದಗಿರಿ ಡಿಸಿ ಸುಶೀಲಾ ಬಿ ಆದೇಶ ಹೊರಡಿಸಿದ್ದರು. ಇಂದು ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಇದನ್ನೂ ಓದಿ: ಸಿಬ್ಬಂದಿಗೆ ವೇತನ ಕೊಡಲು ಸಾಧ್ಯವಾಗದ ಸ್ಥಿತಿ ತಲುಪಿತಾ ಸರ್ಕಾರ? ಸಂಚಲನ ಮೂಡಿಸಿದ ಯಾದಗಿರಿ ಎಸ್ಪಿ ಇ-ಮೇಲ್
ಚುನಾವಣೆ ವೇಳೆ ಗಲಾಟೆ ನಡೆಯುವ ಸಾಧ್ಯತೆ ಹಿನ್ನಲೆ ಹುಣಸಗಿ ಹಾಗೂ ಸುರಪುರ ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಹಿಂದೆ ಎರಡು ತಾಲೂಕಿನ ಕೆಲ ಕಡೆ ಗಲಾಟೆಗಳು ನಡೆದಿದ್ದವು. ಇವತ್ತು ಮತ್ತೆ ಗಲಾಟೆ ನಡೆಯಬಹುದು ಅಂತ ಜಾರಿ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:35 pm, Fri, 4 August 23