ತಾಯಿ ಎಂದರೆ ಕರುಣಾಮಯಿ.. ಪದಗಳಿಗೆ ನಿಲುಕದ ನಕ್ಷತ್ರ ದೇವತೆ.. ತಾಯಿ ಎಂದರೆ ಮಾತೃ ಸ್ವರೂಪಿ ದೇವರು.. ಅರೇ ಯಾಕೆ ಇವಾಗ ತಾಯಿಯನ್ನ ಹೀಗೆ ವರ್ಣನೆ ಮಾಡ್ತಿದೀವಿ ಅಂತಿರಾ.. ಕಲಿಯುಗದಲ್ಲಿಯೂ ಕರುಣಾಮಯಿ ತಾಯಿಯೊಬ್ಬರು (mother) ತಮ್ಮ ಮಗನ ಜೀವ ಉಳಿಸಿಕೊಳ್ಳಲು ತನ್ನ ಕಿಡ್ನಿ ತ್ಯಾಗ ಮಾಡಲು ಮುಂದಾಗಿದ್ದಾಳೆ. ಅಷ್ಟಕ್ಕೂ ಈ ತಾಯಿ ಯಾರು? ಆ ಮಗನಿಗೆ ಏನಾಗಿದೆ? ಎಲ್ಲಿ ಅಂತೀರಾ.. ಈ ಸ್ಟೋರಿ ನೋಡಿ.. ಕಿಡ್ನಿ ವೈಫಲ್ಯದಿಂದ (Kidney failure) ಬಳಲುತ್ತಿರೋ ಮಗ (son).. ವರ್ಷದಿಂದ ಮಗನ ಜೊತೆ ಹಾಸ್ಪಿಟಲ್ಲು-ಮನೆಗೆ ಎಡತಾಕ್ಕುತ್ತಿರೋ ತಾಯಿ.. ತನ್ನದೇ ಕಿಡ್ನಿ ಕೊಟ್ಟು (kidney donation) ಮಗನ ಜೀವ ಉಳಿಸಿಕೊಳ್ತೀನಿ ಅಂತಿರೋ ಮಹಾತಾಯಿ.. ಎಸ್ ಈ ಎಲ್ಲಾ ದೃಶ್ಯಗಳು ಯಾದಗಿರಿ (Yadgir) ಜಿಲ್ಲೆಯ ಕೊಳಿಹಾಳ ಗ್ರಾಮದಲ್ಲಿ ಕಂಡು ಬಂದಿವೆ..
ಹೌದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಳಿಹಾಳ ಗ್ರಾಮದ ನಿವಾಸಿ ಪರಮವ್ವ ಹಾಗೂ ಸಾಬಣ್ಣ ದಂಪತಿಯ ದ್ವೀತಿಯ ಪುತ್ರ ನಿಂಗಣ್ಣ ಎಂಬಾತ ಕಳೆದ ಒಂದು ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ನಿಂಗಣ್ಣನ ಎರಡೂ ಕಿಡ್ನಿಗಳು ಫೇಲ್ ಆಗಿವೆ, ಕುಟುಂಬಸ್ಥರು ಆಸ್ಪತ್ರೆಗೆ ಅಲೆದು ಅಲೆದು ಸುಸ್ತಾಗಿದ್ದಾರೆ.. ಜಿಲ್ಲೆಯಲ್ಲಿ ಅಷ್ಟೇ ಅಲ್ಲದೇ ಪಕ್ಕದ ಜಿಲ್ಲೆಯ ವಿಜಯಪುರಕ್ಕೆ ವಾರದಲ್ಲಿ ಮೂರು ಬಾರಿ ಕರೆದುಕೊಂಡು ಹೋಗಿ ಡಯಾಲಿಸಿಸ್ ಮಾಡ್ತಾರೆ.
ಒಂದು ಬಾರೀ ಆಸ್ಪತ್ರೆಗೆ ಹೋಗಿ ಬಂದ್ರೆ ಸುಮಾರು ೭ ರಿಂದ ೮ ಸಾವಿರ ರೂಪಾಯಿ ಖರ್ಚಾಗುತ್ತದೆ.. ಆದರೂ ಸಹ ೨೨ ವರ್ಷ ಸಣ್ಣ ವಯಸ್ಸಿನಲ್ಲಿ ಮಗನ ಕಿಡ್ನಿ ಫೇಲಾಗಿದ್ದು, ತಾಯಿ ಹಾಗೂ ಕುಟುಂಬಸ್ಥರನ್ನು ಆತಂಕಕ್ಕೆ ದೂಡಿದೆ.. ಮಗನ ಆರೈಕೆಯಲ್ಲೇ ಕಾಲ ಕಳೆಯುತ್ತಿರೋ ತಾಯಿ ಪರಮವ್ವ ನೀರವ ಮೌನಿಯಾಗಿ ಅಳಲು ತೋಡಿಕೊಳ್ತಿದ್ದಾಳೆ. ಈಗಾಗಲೇ ನಾವು ಎಲ್ಲ ದವಾಖಾನೆ ತಿರುಗಿದ್ದೇವೆ.. ಆದ್ರೇ ಮಗನಿಗೆ ಹೊಸ ಕಿಡ್ನಿ ಹಾಕಿದ್ರೇ ಮಾತ್ರ ಬದುಕುತ್ತಾನೆ ಅಂತ ವೈದ್ಯರು ಹೇಳಿದ್ದಾರೆ.
ಇತ್ತಿಚೇಗೆ ವಿಜಯಪುರದ ಯಶೋದಾ ದವಾಖಾನೆ ಡಾ. ರವಿಂದ್ರ ಮುದರಕಿ ನಿಮ್ಮ ಮಗನಿಗೆ ಕಿಡ್ನಿ ಹಾಕಲೇ ಬೇಕು ಅಂತ ಹೇಳಿದ್ದಾರೆ.. ಬೇರೆ ಕಿಡ್ನಿ ಹಾಕಬೇಕಂದ್ರೇ ಸುಮಾರು ೩೦ ಲಕ್ಷ ರೂಪಾಯಿ ಖರ್ಚಾಗುತ್ತದೆಯಂತೆ, ನಮ್ಮ ಬಳಿ ಅಷ್ಡೋಂದು ಹಣ ಇಲ್ಲ ನಾವು ಬಡವರು ಇದ್ದೇವೆ.. ಹೀಗಾಗಿ ನಾನೇ ಮಗನಿಗೆ ನನ್ನ ಒಂದು ಕಿಡ್ನಿ ನೀಡಲು ಮುಂದಾಗಿದ್ದೇನೆ. ಆದ್ರೇ ನನ್ನದೇ ಕಿಡ್ನಿ ಟ್ರಾನ್ಸಫರ್ ಮಾಡಲು ಸಹ ಎಂಟು ಲಕ್ಷ ಹಣ ಕೇಳ್ತಿದ್ದಾರೆ. ಇಂತಹ ಪರಿಸ್ಥಿತಿ ಯಾವ ತಾಯಿಗೂ ಬರಬಾರದು ಎಂದು ತಾಯಿ ಪರಮವ್ವ ಕಣ್ಣೀರಿಡುತ್ತಿರುವ ದೃಶ್ಯ ಕರಳು ಹಿಂಡುವಂತಿದೆ.
ಇತ್ತ, ತನ್ನ ಕಿಡ್ನಿ ವೈಫಲ್ಯದಿಂದ ತಾಯಿ ಚಿಂತೆಯಲ್ಲೇ ಸೊರಗಿ ಸುಣ್ಣವಾಗಿದ್ದಾಳೆ ಅಂತ ರೋಗಿ ನಿಂಗಣ್ಣ ಸಹ ಚಿಂತೆಗೆ ಜಾರಿದ್ದಾನೆ.. ನನಗೆ ಸಿಗರೇಟ್, ಸಾರಾಯಿ, ಗುಟ್ಕಾ ಅಂತ ಯಾವುದೇ ಹವ್ಯಾಸ ಇಲ್ಲ.. ಆದ್ರೇ ಕಳೆದ ಒಂದು ವರ್ಷದ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಹಾಸ್ಪಿಟಲ್ ನಲ್ಲಿ ತೋರಿಸಿದ್ದೆ, ಅವಾಗ ಸ್ವಲ್ಪ ಕಡಿಮೆ ಆಗಿತ್ತು.. ಆದ್ರೆ ನಾನು ಆಸ್ಪತ್ರೆ ಮಾತ್ರೆ ತಿನ್ನೋದು ಬಿಟ್ಟಿದ್ರಿಂದ ಕಾಲು, ಮುಖ ಬಾವು ಬರಲು ಆರಂಭಿಸಿತ್ತು..
ಹೀಗಾಗಿ ವಿಜಯಪುರದ ಯಶೋದಾ ಆಸ್ಪತ್ರೆಗೆ ತೋರಿಸಿದ್ವಿ.. ಈ ವೇಳೆ ಡಾ. ರವೀಂದ್ರ ಮದರಕಿ ಎರಡು ಕಿಡ್ನಿ ಫೇಲ್ ಆಗಿವೆ.. ಒಂದು ಕಿಡ್ನಿಯನ್ನಾದ್ರು ಹಾಕಲೇಬೇಕು, ಇಲ್ಲದಿದ್ರೇ ಬದುಕಲ್ಲ ಅಂತ ಹೇಳಿದ್ದಾರೆ.. ಇದರಿಂದ ಆತಂಕಕ್ಕಿಡಾದ ನಮ್ಮ ತಾಯಿಯೇ ನನಗೆ ಕಿಡ್ನಿ ನೀಡಲು ಮುಂದಾಗಿದ್ದಾಳೆ..ನಾವು ನಾಲ್ಕು ಜನ ಅಣ್ಣ ತಮ್ಮಂದಿರು. ಈ ಪೈಕಿ ನಾನು ಎರಡನೇಯವ, ನನಗೆ ಹೀಗೆ ಆಗಿರೋದ್ರಿಂದ ನಮ್ಮ ಕುಟುಂಬ ಕಣ್ಣೀರಿನಲ್ಲೇ ಕೈ ತೊಳೆಯುವಂತಾಗಿದೆ ಅಂತ ಹೇಳುವುದನ್ನು ಕೇಳಿದರೆ ಯಾರನ್ನೇ ಆಗಲಿ ಚಿಂತೆಗೆ ದೂಡುತ್ತೆ.
ಇದನ್ನೂ ಓದಿ: ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ, ಬಸವಕಲ್ಯಾಣದಲ್ಲಿ ಪೈಶಾಚಿಕ ಕೃತ್ಯ!
ಇದೀಗ ನಮ್ಮ ಬಳಿ ಸಹ ಹಣವಿಲ್ಲ ನಮ್ಮ ತಾಯಿ ಕಿಡ್ನಿ ಟ್ರಾನ್ಸಫರ್ ಮಾಡಿದ್ರು ಸಹ ಹಣವಿಲ್ಲ.. ಹೀಗಾಗಿ ಆರೋಗ್ಯ ಇಲಾಖೆ ನನಗೆ ಸಹಾಯ ಮಾಡಬೇಕು ಅಂತ ಕಿಡ್ನಿ ವೈಫಲ್ಯದಿಂದ ಬಳಲುತ್ತಿರೋ ರೋಗಿ ನಿಂಗಣ್ಣ ಸರ್ಕಾರಕ್ಕೆ ಬೇಡಿಕೊಂಡ್ರು..
ಒಟ್ನಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಗನಿಗೆ ಕರುಣಾಮಯಿ ತಾಯಿಯೇ ಕಿಡ್ನಿ ನೀಡಲು ಮುಂದಾಗಿದ್ದಾಳೆ.. ಕೂಡಲೇ ಸರ್ಕಾರ ಹಾಗೂ ದಾನಿಗಳು ಈ ತಾಯಿ ನೆರವಿಗೆ ಧಾವಿಸಿ, ಸಹಾಯ ಮಾಡಬೇಕು ಅನ್ನೋದೆ ಸಾರ್ವಜನಿಕರ ಆಶಯ
ಯಾದಗಿರಿ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:39 am, Mon, 31 July 23