ವಿಜಯಪುರ: ಜ್ಞಾನಯೋಗಾಶ್ರಮದ (Jnanayogashrama) ಸಿದ್ದೇಶ್ವರ ಸ್ವಾಮೀಜಿ (Siddeshwar swamiji) ಆರೋಗ್ಯದಲ್ಲಿ (Health) ಏರುಪೇರಾಗಿದ್ದು, ಶ್ರೀಗಳಿಗೆ ಉಸಿರಾಟದ ಸಮಸ್ಯೆಯಿದೆ, ಆಕ್ಸಿಜನ್ ನೀಡುತ್ತಿದ್ದೇವೆ ಎಂದು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಎಸ್.ಬಿ.ಪಾಟೀಲ್ ತಿಳಿಸಿದ್ದಾರೆ. ಸಿದ್ದೇಶ್ವರ ಸ್ವಾಮೀಜಿ ರಕ್ತದೊತ್ತಡದಲ್ಲಿ ವ್ಯತ್ಯಾಸ ಆಗಿದೆ. ಚಿಕಿತ್ಸೆಗೆ ಬೇಕಾದ ವೈದ್ಯಕೀಯ ಉಪಕರಣ ಸನ್ನದ್ಧವಾಗಿವೆ. ನಾವು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ ಎಂದು ವೈದ್ಯರು ಹೇಳಿದರು.
ವಿಜಯಪುರದಲ್ಲಿ ಇಂದು (ಜ.2) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಶ್ರೀಗಳು ಬೆಳಗ್ಗೆ ಗಂಜಿ ಕುಡಿದಿದ್ದರು, ಅದಾದ ನಂತರ ಆಹಾರ ಸೇವಿಸಿಲ್ಲ. ಆಸ್ಪತ್ರೆಗೆ ದಾಖಲಾಗಲು ಸಿದ್ದೇಶ್ವರ ಸ್ವಾಮೀಜಿ ನಿರಾಕರಿಸುತ್ತಿದ್ದಾರೆ. ಅವರ ಅಣತಿಯಂತೆ ಜ್ಞಾನಯೋಗಾಶ್ರಮದಲ್ಲೇ ಚಿಕಿತ್ಸೆ ಮುಂದುವರಿಕೆಯಾಗಿದೆ. ಶ್ರೀಗಳಲ್ಲಿ ಮೂಮೆಂಟ್ ಇದೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶ್ರೀ ಸಿದ್ದೇಶ್ವರ ಸ್ವಾಮೀಜಿ ಬೇಗ ಚೇತರಿಸಿಕೊಳ್ಳುವಂತಾಗಲು ಬಿಜ್ಜರಗಿ ಶಾಲಾಮಕ್ಕಳಿಂದ ಎಡೆಬಿಡದ ಪ್ರಾರ್ಥನೆ
ಶ್ರೀಗಳಿಗೆ ಉಸಿರಾಟದಲ್ಲಿ ಸ್ವಲ್ಪ ತೊಂದರೆ ಇದೆ. ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲು ಮನವೊಲಿಸಲು ಯತ್ನಿಸಿದೆವು. ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದಾರೆ, ಹೀಗಾಗಿ ಆಶ್ರಮದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಸಿದ್ದೇಶ್ವರ ಶ್ರೀಗಳು ಮಾತನಾಡುತ್ತಿಲ್ಲ, ಆದರೆ ಸನ್ನೆ ಮಾಡುತ್ತಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ