ವಿಜಯಪುರದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ದಂಧೆ ಜಾಲ ಸಕ್ರಿಯ, ಇವುಗಳನ್ನ ನೋಡಿದ್ರೆ ಮನೆಗೆ ಹುಡುಕಿಕೊಂಡು ಬರ್ತಾರೆ ಪೊಲೀಸ್ರು!

ವಯಸ್ಕರ ಪಾರ್ನ್‌ವೆಬ್‌ ಸೈಟ್‌ಗಳು ಮಾತ್ರವಲ್ಲ ಮಕ್ಕಳ ಅಶ್ಲೀಲ ಚಿತ್ರಗಳು ವೆಬ್‌ಸೈಟ್‌ಗಳು ಇಂಟರ್​ನೆಟ್​ನಲ್ಲಿ ದಂಡಿಯಾಗಿವೆ. ಮಕ್ಕಳ ಅಶ್ಲೀಲ ಚಿತ್ರಗಳ ದಂಧೆ ಸಮಾಜಕ್ಕೆ ಮಾರಕವಾಗಿ ಪರಿಣಮಿಸಿದೆ. ಕರ್ನಾಟಕದಲ್ಲೂ ಇದರ ಹಾವಳಿ ಮಿತಿ ಮೀರಿದ್ದು, ವಿಜಯಪುರ ಜಿಲ್ಲೆಯಲ್ಲಿ ಇದರ ಜಾಲ ಸಕ್ರಿಯವಾಗಿದೆ. ಹೀಗಾಗಿ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿದ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ಆರೋಪದಲ್ಲಿ ವಿಜಯಪುರದಲ್ಲಿ 13 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

Important Highlight‌
ವಿಜಯಪುರದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ದಂಧೆ ಜಾಲ ಸಕ್ರಿಯ, ಇವುಗಳನ್ನ ನೋಡಿದ್ರೆ ಮನೆಗೆ ಹುಡುಕಿಕೊಂಡು ಬರ್ತಾರೆ ಪೊಲೀಸ್ರು!
ಸಾಂದರ್ಭಿಕ ಚಿತ್ರ
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ರಮೇಶ್ ಬಿ. ಜವಳಗೇರಾ

Updated on: Aug 18, 2023 | 8:50 AM

ವಿಜಯಪುರ, (ಆಗಸ್ಟ್ 18): ಇದು ಸೋಷಿಯಲ್ ಮೀಡಿಯಾ (Social Media) ಯುಗ. ಮೊಬೈಲ್,(Mobile Phone) ಇಂಟರ್​ನೆಟ್​ (Internet)ಬಂದಾಗಿನಿಂದ ಇಡೀ ಜಗತ್ತೇ ಅಂಗೈಯಲ್ಲಿದೆ. ಬೇಕಿದ್ದು. ಬೇಡದ್ದು ಎಲ್ಲವೂ ಇಂಟರ್​ನೆಟ್​ನಲ್ಲಿ ಸಿಗುತ್ತೆ. ಅದರಲ್ಲೂ ಅಶ್ಲೀಲ ಚಿತ್ರಗಳ ವೆಬ್‌ಸೈಟ್‌ಗಳ ಹಾವಳಿ ಮಿತಿ ಮೀರಿದೆ. ವಯಸ್ಕರ ಪಾರ್ನ್‌ವೆಬ್‌ ಸೈಟ್‌ಗಳು ಮಾತ್ರವಲ್ಲ ಮಕ್ಕಳ ಅಶ್ಲೀಲ ಚಿತ್ರಗಳು ವೆಬ್‌ಸೈಟ್‌ಗಳು ಇಂಟರ್​ನೆಟ್​ನಲ್ಲಿ ದಂಡಿಯಾಗಿವೆ. ಮಕ್ಕಳ ಅಶ್ಲೀಲ ಚಿತ್ರಗಳ ದಂಧೆ ಸಮಾಜಕ್ಕೆ ಮಾರಕವಾಗಿ ಪರಿಣಮಿಸಿದೆ. ಕರ್ನಾಟಕದಲ್ಲೂ (Karnataka) ಇದರ ಹಾವಳಿ ಮಿತಿ ಮೀರಿದ್ದು, ವಿಜಯಪುರ ಜಿಲ್ಲೆಯಲ್ಲಿ ಇದರ ಜಾಲ ಸಕ್ರಿಯವಾಗಿದೆ.

ವಿಜಯಪುರದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‌ಲೋಡ್‌ ಮಾಡಿ ಹರಿಬಿಡಲಾಗುತ್ತಿದೆ. ಅಪ್ರಾಪ್ತ ಮಕ್ಕಳು ತಮಗಿಂತ ಹಿರಿಯರಾದ ಪುರುಷ ಇಲ್ಲವೇ ಮಹಿಳೆಯೊಂದಿಗೆ ನಡೆಸಿದ ಲೈಂಗಿಕ ಕ್ರಿಯೆಯ ವಿಡಿಯೋವನ್ನು ಯೂಟ್ಯೂಬ್, ವಿವಿಧ ಪೋರ್ನ್‌ ಸೈಟ್‌ಗಳು, ಇನ್ಸ್ಟಾಗ್ರಾಮ್, ಫೇಸ್‌ಬುಕ್, ಟ್ವಿಟರ್ ಸೇರಿ ಇತರೆ ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ ಲೋಡ್ ಮಾಡುತ್ತಾರೆ. ಇದು ಅಪರಾಧ ಕೃತ್ಯವಾಗಿದೆ. ಇಂಥ ವಿಡಿಯೋಗಳನ್ನು ಸಾಮಾಜಿಕ ಜಾಲ ತಾಣಗಳಿಂದ ಡೌನ್ ಲೋಡ್ ಮಾಡಿಕೊಳ್ಳುವುದು ಹಾಗೂ ನಂತರ ಅವುಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ ಲೋಡ್ ಮಾಡುವುದು ಶಿಕ್ಷಾರ್ಹ ಅಪರಾಧ. ವಿಜಯಪುರ ಜಿಲ್ಲೆಯಲ್ಲಿ ಇದರ ಜಾಲ ಸಕ್ರಿಯವಾಗಿದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಅಮೆಜಾನ್ ಕಂಪನಿಗೆ ಹ್ಯಾಕರ್​ಗಳ ಕಂಟಕ: ಯಶವಂತಪುರ ಪೊಲೀಸರ ತನಿಖೆ ವೇಳೆ ಕಳ್ಳಾಟ ಬಯಲು

ಇನ್ನು ಚೈಲ್ಡ್‌ ಪೋರ್ನೋಗ್ರಫಿ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿದ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ಆರೋಪದಲ್ಲಿ ವಿಜಯಪುರದಲ್ಲಿ 13 ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನ್ಯಾಷನಲ್ ಸೆಂಟರ್ ಆಫ್ ಮಿಸ್ಸಿಂಗ್ ಆ್ಯಂಡ್ ಎಕ್ಸಪ್ಲೋಟೆಡ್ ಚಿಲ್ಡರ್ನ್ ತಂಡ ಸೈಬರ್ ಟ್ರಿಪ್ ಲೈನ್ ರಿಪೋರ್ಟ್‌ಅನ್ನು ಆಯಾ ರಾಜ್ಯದ ಸಿಐಡಿ ಘಟಕಕ್ಕೆ ಹಸ್ತಾಂತರಿಸುತ್ತಾರೆ.

ಸಿಐಡಿ ತಂಡ ಆಯಾ ಜಿಲ್ಲೆಗಳ ಸಿಇಎನ್ ಪೊಲೀಸರಿಗೆ ಮಾಹಿತಿ ನೀಡುತ್ತಾರೆ.ಯಾರ್ಯಾರು ಚೈಲ್ಡ್ ಪೋರ್ನೋಗ್ರಾಫಿ ಡೌನ್ ಲೋಡ್ ಹಾಗೂ ಅಪ್ ಲೋಡ್ ಮಾಡುತ್ತಾರೆ ಅವರ ಐಪಿ ಅಡ್ರೆಸ್ ಪೋನ್ ನಂಬರ್, ಸಾಮಾಜಿಕ ಜಾಲ ತಾಣಗಳ ಐಡಿಗಳನ್ನು ಸರ್ಚ್ ಮಾಡಿ ಅವರನ್ನು ಪತ್ತೆ ಮಾಡುತ್ತಾರೆ. ಅದೇ ರೀತಿ ವಿಜಯಪುರದಲ್ಲಿ 13ಮಂದಿ ವಿರುದ್ಧ ಕೇಸ್ ದಾಖಲಿಸಲಾಗಿದೆ. ಇಂತಹ ಪ್ರಕರಣದಲ್ಲಿ ಬಂಧಿತರಾದವರಿಗೆ ಸುಲಭವಾಗಿ ಜಾಮಿನು ಪಡೆಯುವ ಅವಕಾಶವಿದೆ. ಇದು ಸಹ ಸಮಸ್ಯೆ ಬೆಳೆಯಲು ಕಾರಣವಾಗುತ್ತದೆ. ಆದ್ದರಿಂದ ಫೋಕ್ಸೋದಂತಹ ಕಾನೂನು ಇದಕ್ಕೆ ಅನ್ವಯ ಮಾಡಬೇಕೆಂದು ಜನರು ಒತ್ತಾಯಿಸಿದ್ದಾರೆ.

ಇನ್ನಷ್ಟು ವಿಜಯಪುರ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು