ಲೋಕ ಸಭಾ ಚುನಾವಣೆಗೆ ಮೊದಲು ಅಥವಾ ನಂತರ ರಾಜ್ಯದಲ್ಲಿ ಕರ್ನಾಟಕ ಸರ್ಕಾರ ಪತನಗೊಳ್ಳಲಿದೆ: ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಸರ್ಕಾರದ ಪತನಕ್ಕೆ ಕಾಂಗ್ರೆಸ್ ಪಕ್ಷದ ನಾಯಕರೇ ಕಾರಣರಾಗುತ್ತಾರೆ, ಯಾರೂ ಅದನ್ನು ಉರುಳಿಸುವ ಅವಶ್ಯಕತೆಯಿಲ್ಲ, ಕಾಂಗ್ರೆಸ್ ನ 135 ಶಾಸಕರ ಪೈಕಿ ಕೇವಲ ಸಚಿವ ಸ್ಥಾನ ಗಿಟ್ಟಿಸಿದವರು ಮಾತ್ರ ಸಂತೋಷವಾಗಿದ್ದಾರೆ. ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಶಾಸಕರು ಅಸಮಾಧಾನದಿಂದ ಕುದಿಯುತ್ತಿದ್ದಾರೆ ಎಂದು ಯತ್ನಾಳ್ ಹೇಳಿದರು.
ವಿಜಯಪುರ: ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಸ್ಥಳೀಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಕಾಂಗ್ರೆಸ್ ಸರ್ಕಾರದ ಆಯುಷ್ಯದ ಬಗ್ಗೆ ಭವಿಷ್ಯ ನುಡಿದರು. ಲೋಕ ಸಭಾ ಚುನಾವಣೆಗೆ (Lok Sabha polls) ಮೊದಲು ಅಥವಾ ನಂತರ ಸಿದ್ದರಾಮಯ್ಯ ಸರ್ಕಾರ (Siddaramaiah government) ಪತನಗೊಳ್ಳಲಿದೆ ಎಂದು ಯತ್ನಾಳ್ ಹೇಳಿದರು. ಸರ್ಕಾರದ ಪತನಕ್ಕೆ ಕಾಂಗ್ರೆಸ್ ಪಕ್ಷದ ನಾಯಕರೇ ಕಾರಣರಾಗುತ್ತಾರೆ, ಯಾರೂ ಅದನ್ನು ಉರುಳಿಸುವ ಅವಶ್ಯಕತೆಯಿಲ್ಲ, ಕಾಂಗ್ರೆಸ್ ನ 135 ಶಾಸಕರ ಪೈಕಿ ಕೇವಲ ಸಚಿವ ಸ್ಥಾನ ಗಿಟ್ಟಿಸಿದವರು ಮಾತ್ರ ಸಂತೋಷವಾಗಿದ್ದಾರೆ. ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಶಾಸಕರರು ಅಸಮಾಧಾನದಿಂದ ಕುದಿಯುತ್ತಿದ್ದಾರೆ ಎಂದು ಯತ್ನಾಳ್ ಹೇಳಿದರು. ವರ್ಗಾವಣೆ ಧಂದೆಯಲ್ಲಿ ತೊಡಗಿರುವ ಸರ್ಕಾರದ ಪತನ ಖಚಿತ, ಕಾಂಗ್ರೆಸ್ ನಾಯಕರು ಮನೆಗೆ ಹೋಗುವುದು ನಿಶ್ಚಿತ, ಅವರು ಗ್ಯಾರಂಟಿಗಳನ್ನು ಉಚಿತವಾಗಿ ಕೊಟ್ಟಿದಕ್ಕೇನೂ ಜನ ಅವರಿಗೆ ವೋಟು ಹಾಕಲಾರರು ಎಂದು ವಿಜಯಪುರ ಶಾಸಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ