ಜಾತಿ ಜಾತಿಗಳ ವೈಷಮ್ಯದ ಗ್ಯಾರಂಟಿ ಇರುವಾಗ ಬಳೂತಿ ಗ್ರಾಮದ ಬೀಬಿ ಫಾತೀಮಾ ಜಾತ್ರೆ ಅಪರೂಪದ್ದಾಗಿದೆ! ಹೇಗೆ?

Bibi Fatima Jatre: ಒಟ್ಟಾರೆ ಜಾತಿ ಜಾತಿಗಳು, ಮೇಲು ಕೀಳು, ಹಿಂದೂ ಮುಸ್ಲಿಂ, ಕೇಸರಿ ಹಸಿರು ಧ್ವಜಗಳ ಕಾದಾಟಗಳ ಮಧ್ಯೆ ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದಲ್ಲಿ ನಡೆಯೋ ಬೀಬಿ ಫಾತೀಮಾ ಜಾತ್ರೆ ಅಪರೂಪದ ಜಾತ್ರೆಯಾಗಿದೆ.

Important Highlight‌
ಜಾತಿ ಜಾತಿಗಳ ವೈಷಮ್ಯದ ಗ್ಯಾರಂಟಿ ಇರುವಾಗ ಬಳೂತಿ ಗ್ರಾಮದ ಬೀಬಿ ಫಾತೀಮಾ ಜಾತ್ರೆ ಅಪರೂಪದ್ದಾಗಿದೆ! ಹೇಗೆ?
ಬಳೂತಿ ಗ್ರಾಮದ ಬೀಬಿ ಫಾತೀಮಾ ಜಾತ್ರೆ
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಸಾಧು ಶ್ರೀನಾಥ್​

Updated on: Aug 07, 2023 | 10:13 AM

ಜಾತಿ ಜಾತಿಗಳ ನಡುವೆ ಇಂದು ಸಾಮರಸ್ಯ ಇಲ್ಲ. ಮಸೀದಿ ಮೇಲೆ ಕೇಸರಿ ಧ್ವಜ, ಮಂದಿರದ ಮೇಲೆ ನಕ್ಷತ್ರವಿರೋ ಹಸಿರು ಧ್ವಜ ಹಾರಿಸಿದರೆ ಅಲ್ಲಿ ಪರಿಸ್ಥಿತಿ ಉದ್ವಿಗ್ನವಾಗೋದು ಮಾತ್ರ ಗ್ಯಾರಂಟಿ. ಆದರೆ ವಿಜಯಪುರ ( Vijayapura) ಜಿಲ್ಲೆ ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದ ಬೀಬಿ ಫಾತೀಮಾ (Bibi Fatima Jatre) ಮಸೀದಿಯ ಮೇಲೆ ಕೇಸರಿ ಬಣ್ಣದ ಧ್ವಜಗಳ ಸರಗಳನ್ನೇ ಕಟ್ಟಿದ್ದರು. ಅಷ್ಟೇ ಅಲ್ಲಾ ಗ್ರಾಮದ ರಸ್ತೆಗಳಲ್ಲಿಯೂ ಕೇಸರಿ ಧ್ವಜಗಳೇ ರಾರಾಜಿಸುತ್ತಿದ್ದವು. ಮಸೀದಿ ಮೇಲೆ ಕೇಸರಿ ಬಣ್ಣದ ಧ್ವಜಗಳ ಸರಗಳು ಹಾರಾಡುತ್ತಿದ್ದರು ಅಲ್ಲಿ ಹಿಂದೂ ಮುಸ್ಲಿಂ ಸಮುದಾಯದ (hindu-muslim) ಜನರು ಖುಷಿ ಖುಷಿಯಾಗಿಯೇ ಇದ್ದರು. ಇದಕ್ಕೆ ನಾಡಿನ ಹೆಸರಾಂತ ಮಠದ ಪೀಠಾಧೀಪತಿಗಳು ಸಹ ಸಾಕ್ಷಿಯಾಗಿದ್ದರು. ಹಿಂದೂ ಮುಸ್ಲಿಂ ಭಾಯಿ ಭಾಯಿ ಎಂಬ ಸಡಗರ ಮನೆ ಮಾಡಿತ್ತು. ಇದನ್ನು ಕೇಳಿ ನಿಮಗೂ ಆಶ್ಚರ್ಯ ಅಲ್ವಾ? ಹಾಗಾದರೆ ಈ ಸ್ಟೋರಿ ನೋಡಿ… ಮಸೀದಿ ಮೇಲೆ ಕೇಸರಿ ಧ್ವಜಗಳು… ಗ್ರಾಮಗಳ ರಸ್ತೆ ರಸ್ತೆಗಳಲ್ಲಿಯೂ ಸಹ ಕೇಸರಿ ಧ್ವಜಗಳ ಹಾರಾಟ…. ಹಿಂದೂ ಮುಸ್ಲಿಂ ಸಮುದಾಯದವರಿಂದಲೇ ಕಟ್ಟಲ್ಪಟ್ಟಿರೋ ಕೇಸರಿ ಧ್ವಜಗಳು… ಕೊಪ್ಪಳದ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳ ಸಮ್ಮುಖದಲ್ಲಿ ಕೋಮುಸೌಹಾರ್ದತೆ ಮೆರೆದ ಬಳೂತಿ ಗ್ರಾಮದ ಜನರು…

ಇಷ್ಟೆಲ್ಲ ಸಡಗರ ಸಂಭ್ರಮ ಭಾವೈಕ್ಯತೆ ಕೂಮು ಸೌಹಾರ್ದತೆ ಕಂಡು ಬಂದಿದ್ದು ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದಲ್ಲಿ. ಬಳೂತಿ ಗ್ರಾಮದ ಬೀಬಿ ಫಾತೀಮಾ ಅವರ ಹತ್ತು ದಿನಗಳ ಜಾರತ್ ಜಾತ್ರೆ ಈ ಸಡಗರಕ್ಕೆ ಭಾವೈಕ್ಯತೆಗೆ ಸಾಕ್ಷಿಯಾಗಿತ್ತು. ಪ್ರತಿ ವರ್ಷ ಮೋಹರಂ ಹಬ್ಬವಾದ ಬಳಿಕ ಹತ್ತು ದಿನಗಳ ನಂತರ ಬೀಬಿ ಫಾತೀಮಾ ಅವರ ಹತ್ತು ದಿನಗಳ ಜಾರತ್ ಜಾತ್ರೆ ನಡೆಯುತ್ತದೆ. ನೂರಾರು ವರ್ಷಗಳಿಂದ ಈ ಜಾತ್ರೆ ನಡೆದುಕೊಂಡು ಬಂದಿದೆ. ಬೀಬಿ ಫಾತೀಮಾ ಜಾತ್ರೆ ಕೇವಲ ಇಲ್ಲಿ ಮುಸ್ಲಿಂ ಸಮುದಾಯದವರಿಗೆ ಅಷ್ಟೇ ಮೀಸಲಾಗಿಲ್ಲ. ಗ್ರಾಮದ ಪ್ರತಿ ಕುಟುಂಬದವರಿಗೂ ಪ್ರತಿ ಸಮುದಾಯಕ್ಕೂ ಸೇರಿದ ಜಾತ್ರೆಯಾಗಿದೆ. ಇದು ಕೋಮು ಸೌಹಾರ್ದತೆ ಬೆಸೆಯೋ ಜಾತ್ರೆಯಾಗಿದೆ. ಹಿಂದೂ ಮುಸ್ಲಿಂ ಸಮುದಾಯದ ಜನರೆಲ್ಲಾ ಸೇರಿ ಗ್ರಾಮದ ಬೀದಿ ಬೀದಿಗಳಲ್ಲಿ ಹಾಗೂ ಬೀಬಿ ಫಾತೀಮಾ ಮಸೀದಿಯ ಕಳಶದವರೆಗೂ ಕೇಸರಿ ಬಣ್ಣದ ಧ್ವಜಗಳನ್ನು ಕಟ್ಟುತ್ತಾರೆ. ಹಿಂದೂಗಳದ್ದು ಕೇಸರಿ ಮುಸ್ಲಿಮರದ್ದು ಹಸಿರು ಎಂಬ ಬೇಧ ಭಾವವಿಲ್ಲಾ. ಈ ರೀತಿಯಾಗಿ ಹಿಂದೂ ಮುಸ್ಲಿಂ ಎಂಬ ತಾರತಮ್ಯವಿಲ್ಲದೇ ಬೀಬಿ ಫಾತೀಮಾ ಅವರ ಹತ್ತು ದಿನಗಳ ಜಾರತ್ ಜಾತ್ರೆ ಹತ್ತಾರು ದಶಮಾನಗಳಿಂದಲೂ ನಡೆದುಕೊಂಡು ಬಂದಿದೆ.

ಬೀಬಿ ಫಾತೀಮಾ ಜಾತ್ರೆಯ ಹಿಂದೆ ಒಂದು ಪವಾಡವೂ ಇದೆ. ಈ ಹಿಂದೆ ಬೀಬಿ ಫಾತೀಮಾ ಅವರ ಹೆಸರಿ ಡೋಲಿ, ಅಂದರೆ ಪಲ್ಲಕ್ಕಿಯ ಭಾಗ ಮುರಿದಿದ್ದ ಕಾರಣ 2006 ರಲ್ಲಿ ಅದನ್ನು ಕೃಷ್ಣಾ ನದಿಯ ನೀರಲ್ಲಿ ಬಿಟ್ಟು ಬಂದಿದ್ದರಂತೆ. ಬಳಿಕ ಹೊಸ ಡೋಲಿಯನ್ನು ಮಾಡಿಸಿದ್ದರಂತೆ. ಆದರೆ ಬೀಬಿ ಫಾತೀಮಾ ಜಾತ್ರೆ ನಡೆಯೋ ಪ್ರತಿ ವರ್ಷವೂ ಡೋಲಿಯನ್ನು ನದಿಯಲ್ಲಿ ಬಿಟ್ಟು ಬಂದಿದ್ದವರಲ್ಲಿ ಒಬ್ಬೊಬ್ಬರು ಮೃತಪಡುತ್ತಾ ಹೋದರಂತೆ. ಗ್ರಾಮಕ್ಕೂ ಕೆಡುಕಾಗುತ್ತಾ ಹೋಗಿತ್ತಂತೆ.

ಗ್ರಾಮದ ಹಿರಿಯರು ಸ್ವಾಮೀಜಿಯೊಬ್ಬರ ಎದುರು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡಾಗ ಅವರು ನಿಮ್ಮೂರಿನ ದೊಡ್ಡ ಶಕ್ತಿಯನ್ನು ನೀರಿನಲ್ಲಿ ಬಿಟ್ಟು ಬಂದಿದ್ದೀರಿ, ಅದನ್ನು ಮರಳಿ ತಂದು ಸಂಪ್ರದಾಯದಂತೆ ಜಾತ್ರೆ, ಉತ್ಸವಾಚರಣೆಗಳನ್ನು ಮಾಡಿದರೆ ಸಂಕಷ್ಟಗಳು ದೂರಾಗುತ್ತವೆ ಎಂದು ದೈವಿ ನುಡಿಗಳಾಡಿದ್ದರು.

ಗ್ರಾಮಸ್ಥರು ಮರಳಿ ಹಳೆ ಡೋಲಿಯನ್ನು ತರಲು ಹೋದಾಗ ಪವಾಡದಂತೆ ತಕ್ಷಣವೇ ಡೋಲಿ ಕಣ್ಣಿಗೆ ಕಾಣಿಸಿಕೊಂಡು ನೀರಿನಲ್ಲಿ ಬಿಟ್ಟು ಆರು ವರ್ಷಗಳಾಗಿದ್ದರೂ ಡೋಲಿ ಮೊದಲಿದ್ದ ಸ್ಥಿತಿಯಲ್ಲೇ ಇತ್ತು. ಗ್ರಾಮಸ್ಥರು ಡೋಲಿಯನ್ನು ಮರಳಿ ಗ್ರಾಮಕ್ಕೆ ತಂದು ಹೊಸ ಡೋಲಿಯೊಂದಿಗೆ ಮೋಹರಂ ಆಚರಿಸಿ ಸಂಪ್ರಾದಾಯಿಕ ಹಳೆಯ ಬೀಬಿ ಫಾತೀಮಾ ದೇವಿಯ ಡೋಲಿಗೆ ಮೋಹರಂ ನಂತರದ ಹತ್ತು ದಿನಗಳ ಕಾಲ ವಿಶೇಷ ಉತ್ಸವ, ಆಚರಣೆಗಳ ಮಾಡುತ್ತಿದ್ದು, ಸಂಕಷ್ಟಗಳು ದೂರಾಗಿ ಗ್ರಾಮಕ್ಕೆ ಒಳಿತಾಗುತ್ತಿದೆ ಎಂದು ಸ್ಮರಿಸಿಕೊಳ್ಳುತ್ತಾರೆ ಗುರುಪಾದಪ್ಪಾ ಹಂಗರಗಿ, ಬಳೂತಿ ಗ್ರಾಮದ ಹಿರಿಯ.

Also Read: ಶಿವಮೊಗ್ಗ ಉಡುಪಿ ಗಡಿಭಾಗ: ಆಗುಂಬೆ ಘಾಟಿಯ ಸೂರ್ಯಸ್ತಮಾನ ಸ್ಥಳದಲ್ಲಿ ಎಂಜಾಯ್ ಮಾಡುತ್ತಿದ್ದಾರೆ ಪ್ರವಾಸಿಗರು!

ಪ್ರತಿ ವರ್ಷ ಮೊಹರಂ ಆದ ಹತ್ತು ದಿನಗಳ ಬಳಿಕ ನಡೆಯೋ ಬೀಬಿ ಫಾತೀಮಾ ಜಾತ್ರೆ ಭಾವೈಕ್ಯತೆಯ ಜಾತ್ರೆಯಾಗಿದೆ. ಮೊಹರಂ ದಿನದಂದು ಐತಿಹಾಸಿಕ ಬೀಬಿ ಫಾತೀಮಾ ಡೋಲಿ ಕೃಷ್ಣಾ ನದಿಯಲ್ಲಿ ಪೂಜೆ ಪುನಸ್ಕಾರಕ್ಕೆ ಹೋಗಿ ಬಂದ ಮರು ದಿನದಿಂದ ಹತ್ತು ದಿನಗಳವರೆಗೆ ಪ್ರತಿದಿನ ದರ್ಗಾದಲ್ಲಿ ಭಕ್ತರು ಬೀಬಿ ಫಾತೀಮಾ ಡೋಲಿಗೆ ವಿಶೇಷ ಪೂಜೆ, ಭಕ್ತಿ ಸೇವೆಗಳನ್ನು ಸಮರ್ಪಿಸುತ್ತಾರೆ. ಹತ್ತನೇ ದಿನ ಜಾರತ್ ಜಾತ್ರೆ ನಡೆಯುತ್ತದೆ. ಜಾತ್ರೆಗೆ ಬಳೂತಿ ಗ್ರಾಮದ ಜನರು ಅಷ್ಟೇ ಅಲ್ಲಾ ಸುತ್ತಮುತ್ತಲ ಗ್ರಾಮದ ಜನರೂ ಸಹ ಆಗಮಿಸಿ ಭಕ್ತಿಯಿಂದ ದರ್ಶನ ಮಾಡುತ್ತಾರೆ.

ಈ ಬಾರಿಯ ಜಾತ್ರೆಗೆ ಕೊಪ್ಪಳದ ಗವಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಅಭಿನವ ಗವಿ ಸಿದ್ದೇಶ್ವರ ಶ್ರೀಗಳು ಸಾಕ್ಷಿಯಾಗಿದ್ದರು. ಬೀಬಿ ಫಾತೀಮಾ ಡೋಲಿ ದರ್ಶನ ಮಾಡಿದ ಶ್ರೀಗಳು ನೆರೆದ ಜನರನ್ನು ಉದ್ದೇಶಿಸಿ ಮಾತನಾಡಿದರು. ಜೀವನದ ಪಯಣದ ಬಗ್ಗೆ ಮಾತನಾಡಿದ ಶ್ರೀಗಳು ತಾಯಿಯ ಗರ್ಭದಿಂದ ಭೂತಾಯಿ ಗರ್ಭಕ್ಕೆ ಸೇರುವವರೆಗೆ ಮನುಷ್ಯ ಜೀವನ ಪ್ರಯಾಣ ಮಾಡುತ್ತಾನೆ. ಸುಮ್ಮನೇ ಕಾಲ ಕಳೆಯದೇ ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂದು ತಮ್ಮ ಮಾತಿನುದ್ದಕ್ಕೂ ಹೇಳಿದರು. ಇನ್ನು ಜಾತ್ರೆಯ ಕುರಿತು ಹಿಂದೂ ಮುಸ್ಲೀಂ ಸಮುದಾಯದ ಜನರು ಖುಷಿಯಿಂದಲೇ ಸಕಲ ತಯಾರಿ ಮಾಡಿಕೊಂಡಿದ್ದರು. ಜಾತ್ರೆಗೆ ಆಗಮಿಸೋ ಸಾವಿರಾರು ಜನರು ಊಟದ ವ್ಯವಸ್ಥೆ ಮಾಡಿದ್ದರು. 36 ಕ್ವಿಂಟಾಲ್ ಸುರಮಾ, ಉಪ್ಪಿಟ್ಟು ಹಾಗೂ ಅಣ್ಣ ಸಾಂಬಾರ ಪ್ರಸಾದವನ್ನಾಗಿ ನೀಡಲಾಯಿತು ಎಂದು ಅಬ್ದುಲ್ ಗಣಿ ವಾಲೀಕಾರ, ಬಳತಿ ಗ್ರಾಮದ ಮುಸ್ಲಿಂ ಸಮಾಜದ ಹಿರಿಯ ಹೇಳಿದರು.

ಒಟ್ಟಾರೆ ಜಾತಿ ಜಾತಿಗಳು, ಮೇಲು ಕೀಳು, ಹಿಂದೂ ಮುಸ್ಲೀಂ, ಕೇಸರಿ – ಹಸಿರು ಧ್ವಜಗಳ ಕಾದಾಟಗಳ ಮಧ್ಯೆ ಬಳೂತಿ ಗ್ರಾಮದಲ್ಲಿ ನಡೆಯೋ ಬೀಬಿ ಫಾತೀಮಾ ಜಾತ್ರೆ ಅಪರೂಪದ ಜಾತ್ರೆಯಾಗಿದೆ. ಜಾತಿ ವೈಷಮ್ಯದಿಂದ ಕಿತ್ತಾಡೋ ವಿಕೃತಿಗಳಿಗೆ ಪಾಠವಾಗಿದೆ. ಬಳೂತಿ ಗ್ರಾಮದಲ್ಲಿ ನಡೆಯೋ ಕೋಮು ಸಾಂರಸ್ಯದ ಜಾತ್ರೆಯ ಹಾಗೆ ಎಲ್ಲಾ ಗ್ರಾಮ ಪಟ್ಟಣದ ನಗರಗಳಲ್ಲೂ ಜಾತ್ರೆ ನಡೆಯಬೇಕಿದೆ. ನಾವೆಲ್ಲಾ ಒಂದೆ ಎಂದು ಸಾಮರಸ್ಯವನ್ನು ಉಳಿಸಿಕೊಂಡು ಹೋಗುವ ಕೆಲಸವಾಗಬೇಕಿದೆ.

ವಿಜಯಪುರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು