ವಿಜಯನಗರ, ಜುಲೈ 22: ಹಂಪಿಯಲ್ಲಿ ಇದೇ ತಿಂಗಳು ಜರುಗಿದ ಜಿ20 ಸಭೆ (G-20 Summit) ಕೊನೆಗೊಂಡಿದೆ. ಯಶ್ವಸಿಯಾಗಿ ಮುಕ್ತಾಯವಾದ ಜಿ-20 ಶೃಂಗಸಭೆಯ ಸಮಾವೇಶ ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಆದರೆ ವಾರದ ಹಿಂದೆ ವಿದೇಶಿ ಗಣ್ಯರು ನೆಟ್ಟ ಗಿಡಗಳು ಮಾತ್ರ ಈಗ ಕಣ್ಮರೆಯಾಗಿರುವುದು ವಿಶ್ವಮಟ್ಟದ ಸಭೆಯನ್ನೇ ಅಣಕಿಸುವಂತೆ ಮಾಡಿದೆ.
ಜಿ20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ (ಸಿಡಬ್ಲ್ಯುಜಿ) ಮೂರನೇ ಸಭೆಯ ಅಂಗವಾಗಿ ಇದೇ 10ರಂದು ರಾಣಿ ಸ್ನಾನಗೃಹ ಪ್ರದೇಶದಲ್ಲಿ ವಿದೇಶಿ ಗಣ್ಯರು ಗಿಡಗಳನ್ನು ನೆಟ್ಟಿದ್ದರು. ಇದೊಂದು ಸ್ಮರಣೀಯ ಕಾರ್ಯಕ್ರಮವೂ ಆಗಿತ್ತು. ಮುಂದಿನ ದಿನಗಳಲ್ಲಿ ಇದೊಂದು ಉತ್ತಮ ಉದ್ಯಾನವಾಗುವ ಹಾಗೂ ಜಿ20 ಸಭೆಯ ನೆನಪನ್ನು ಹಸಿರಾಗಿ ಇಡುವ ಪ್ರಯತ್ನವಾಗಿತ್ತು.
ಇದನ್ನೂ ಓದಿ: ಜಿ-20 ರಾಷ್ಟ್ರಗಳ ಗುಂಪಿಗೆ ಆಫ್ರಿಕನ್ ಯೂನಿಯನ್ ಸೇರ್ಪಡೆಗೆ ಸದಸ್ಯ ರಾಷ್ಟ್ರಗಳ ಬೆಂಬಲ: ಭಾರತೀಯ ಶೆರ್ಪಾ ಅಮಿತಾಬ್ ಕಾಂತ್
ಆದರೆ ಗಿಡ ನೆಟ್ಟ ನಂತರ ಅದಕ್ಕೆ ಸೂಕ್ತ ರಕ್ಷಣೆ ನೀಡುವುದೂ ಸಂಬಂಧಪಟ್ಟವರ ಹೊಣೆಗಾರಿಕೆ. ಬೇಲಿ
ನಿರ್ಮಿಸಿ ಗಿಡಕ್ಕೆ ರಕ್ಷಣಾ ಹಾಕುವುದಾಗಲಿ, ಗಿಡಗಳ ಸಂರಕ್ಷಣೆಗೆ ಕಾವಲುಗಾರರನ್ನು ನಿಯೋಜನೆಯನ್ನು
ಮಾಡಿರಲಿಲ್ಲ. ಹೀಗಾಗಿ ಬಹುತೇಕ ಗಿಡಗಳು ಕುರಿ, ಮೇಕೆಗಳ ಪಾಲಾಗಿವೆ. ಇಲ್ಲಿ ಹತ್ತಾರು ವಿದೇಶಿಯರು ಗಿಡ ನೆಟ್ಟಿದ್ದಾರೆ ಎಂಬ ಕುರುಹೇ ಈಗ ಇಲ್ಲವಾಗಿವೆ.
ಇದನ್ನೂ ಓದಿ: ಬಾರ್ಗಳಲ್ಲಿ ಸ್ಮೋಕಿಂಗ್ ಝೋನ್ ಕಡ್ಡಾಯ ಸ್ಥಾಪನೆಗೆ ಜಿಲ್ಲಾಧಿಕಾರಿ ಸೂಚನೆ
ಜಿ20 ಮುಗಿಯಿತು, ವಿದೇಶಿಯರು ಹೊರಟು ಹೋದರು. ಆದರೆ ವಿದೇಶಿ ಪ್ರವಾಸಿಗರು ಮುಂದೆಯೂ ಬರುತ್ತಲೇ ಇರುತ್ತಾರೆ. ತಮ್ಮ ದೇಶದವರು ನೆಟ್ಟ ಗಿಡಗಳಿಗೆ ಸಂರಕ್ಷಣೆ ನೀಡದ ಸ್ಥಳೀಯರ ಬಗ್ಗೆ ವಿದೇಶಿ ಪ್ರಜೆಗಳು ಏನೆಂದುಕೊಂಡಾರು ಎಂದು ಸ್ಥಳೀಯರು ಈಗ ಕೊರಗುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.