ನಾಡಬಾಂಬ್ ಸ್ಫೋಟಿಸಿ ಕಾಡುಹಂದಿ ಹತ್ಯೆ; ಕಾಂತಾರ ಸಿನಿಮಾ ನಂತರ ದೈವದ ಸ್ಥಾನ ಕೊಟ್ಟು ಸಾಕಿದ್ದ ಗ್ರಾಮಸ್ಥರ ಕಣ್ಣೀರು
ಕಾರವಾರ ತಾಲೂಕಿನ ಚಂಡಿಯಾ ಗ್ರಾಮದಲ್ಲಿ ಕೋಳಿ ಮಾಂಸದಲ್ಲಿ ನಾಡಬಾಂಬ್ ಇಟ್ಟು ಕಾಡುಹಂದಿಯನ್ನ ಹತ್ಯೆ ಮಾಡಿದ ಘಟನೆ ನಡೆದಿದೆ. ಇನ್ನು ಚಂಡಿಯಾ ಗ್ರಾಮದ ಸುತ್ತಮುತ್ತ ಓಡಾಡುತ್ತಿದ್ದ ಈ ಕಾಡು ಹಂದಿಗೆ, ಕಾಂತಾರ ಸಿನಿಮಾದ ನಂತರ ಪಂಜುರ್ಲಿ ದೈವದ ಸ್ಥಾನ ಕೊಟ್ಟು ಗ್ರಾಮಸ್ಥರು ಪೂಜೆ ಮಾಡುತ್ತಿದ್ದರು.
ಉತ್ತರ ಕನ್ನಡ, ಆ.6: ಜಿಲ್ಲೆಯ ಕಾರವಾರ(Karwar)ತಾಲೂಕಿನ ಚಂಡಿಯಾ ಗ್ರಾಮದಲ್ಲಿ ಕೋಳಿ ಮಾಂಸದಲ್ಲಿ ನಾಡಬಾಂಬ್ ಇಟ್ಟು ಕಾಡುಹಂದಿ(Pig)ಯನ್ನ ಹತ್ಯೆ ಮಾಡಿದ ಘಟನೆ ನಡೆದಿದೆ. ಇನ್ನು ಚಂಡಿಯಾ ಗ್ರಾಮದ ಸುತ್ತಮುತ್ತ ಓಡಾಡುತ್ತಿದ್ದ ಈ ಕಾಡು ಹಂದಿಗೆ, ಕಾಂತಾರ ಸಿನಿಮಾದ ನಂತರ ಪಂಜುರ್ಲಿ ದೈವದ ಸ್ಥಾನ ಕೊಟ್ಟು ಗ್ರಾಮಸ್ಥರು ಪೂಜೆ ಮಾಡುತ್ತಿದ್ದರು. ಅದರಂತೆ ಊರಿನಲ್ಲಿ ಜನ ನೀಡಿದ ಆಹಾರವನ್ನ ಸೇವಿಸುತ್ತ ಜನರ ಪ್ರೀತಿಯನ್ನ ಗಳಿಸಿದ್ದ ಕಾಡು ಹಂದಿಯನ್ನ, ನಿನ್ನೆ(ಆ.5) ರಾತ್ರಿ ಯಾರೋ ದುಷ್ಕರ್ಮಿಗಳು ಬಾಂಬ್ ಇಟ್ಟು ಹತ್ಯೆ ಮಾಡಿದ್ದಾರೆ. ಈ ಕುರಿತು ಕಾರವಾರ ಅರಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವು ಕಡಿತದಿಂದ ಹೈಸ್ಕೂಲ್ನ ಡಿ ದರ್ಜೆ ಸಿಬ್ಬಂದಿ ಸಾವು
ಉತ್ತರ ಕನ್ನಡ: ಹಾವು ಕಡಿತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಹೈಸ್ಕೂಲ್ ಉದ್ಯೋಗಿಯೊಬ್ಬರು ಸಾವನ್ನಪ್ಪಿದ ಘಟನೆ ಕಾರವಾರದಲ್ಲಿ ನಡೆದಿದೆ. ತಾಲ್ಲೂಕಿನ ಶಿರವಾಡದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಡಿ ದರ್ಜೆ ನೌಕರಳಾಗಿದ್ದ ಆನಂದಿ ಕಾಣಕೋಣಕರ(46) ಮೃತ ದುರ್ದೈವಿಯಾಗಿದ್ದಾರೆ. ಅಗಸ್ಟ್ 1 ರಂದು ಸಂಜೆ ವೇಳೆಗೆ ಶಾಲೆಯ ಜನರೇಟರ್ ಕೊಠಡಿಯ ಬಳಿ ತೆರಳಿದ್ದ ವೇಳೆ ಹಾವು ಕಚ್ಚಿತ್ತು. ಬಳಿಕ ಅವರನ್ನು ಕಾರವಾರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಐಸಿಯುನಲ್ಲಿದ್ದ ಮಹಿಳೆ ನಿನ್ನೆ(ಆ.6)ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೆಂಗಿನ ಮರದಿಂದ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವು
ಆನೇಕಲ್: ತೆಂಗಿನ ಮರ ಏರಿದ್ದ ಯುವಕ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಆನೇಕಲ್ ತಾಲ್ಲೂಕಿನ ಚಿನ್ನಯ್ನ ಪಾಳ್ಯದಲ್ಲಿ ನಡೆದಿದೆ. ಮುನಿರಾಜು (25) ಮೃತಪಟ್ಟ ದುರ್ದೈವಿ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇತ, ನಾಲ್ವರು ಸ್ನೇಹಿತರ ಜೊತೆಗೂಡಿ ಜಮೀನಿನೊಂದರಲ್ಲಿನ ತೆಂಗಿನ ಕಾಯಿ ತೆಗೆಯಲು ಹೋಗಿದ್ದ. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದು ಕುತ್ತಿಗೆ, ಬೆನ್ನು, ಕಾಲು ಮುರಿದು ಹೋಗಿ ಸಾವನ್ನಪ್ಪಿದ್ದಾನೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ