ಗೋಮಾತೆಯನ್ನು ಕಡಿಯುವ ಮುಸ್ಲಿಮರ ಕೈಗಳನ್ನು ಕತ್ತರಿಸಬೇಕೆಂದ ಹಿಂದೂ ಮುಖಂಡ ಪುನೀತ್ ಅತ್ತಾವರ; ಕಾರ್ಕಳದಲ್ಲಿ ಪ್ರಕರಣ ದಾಖಲು

| Updated By: ಗಣಪತಿ ಶರ್ಮ

Updated on: Aug 14, 2023 | 6:47 PM

Udupi News; ಕಾರ್ಕಳ ನಗರ ಬಜರಂಗದಳದ ವತಿಯಿಂದ ಆಯೋಜಿಸಲಾದ ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದ್ದ್ದ ಅತ್ತಾವರ, ಗೋವುಗಳನ್ನು ಕೊಲ್ಲುವವರ ವಿರುದ್ಧ ಹಿಂಸಾತ್ಮಕ ಕ್ರಮ ಕೈಗೊಳ್ಳುವಂತೆ ಜನರನ್ನು ಪ್ರಚೋದಿಸಿದ್ದಾರೆ. ಭಾಷಣದ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮ ಮತ್ತು ವಾಟ್ಸ್​ಆ್ಯಪ್‌ನಲ್ಲಿ ಹರಿದಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ತಕ್ಷಣ, ಪೊಲೀಸರು ಕ್ರಮ ಕೈಗೊಂಡು ಪ್ರಕರಣ ದಾಖಲಿಸಿದ್ದಾರೆ.

ಗೋಮಾತೆಯನ್ನು ಕಡಿಯುವ ಮುಸ್ಲಿಮರ ಕೈಗಳನ್ನು ಕತ್ತರಿಸಬೇಕೆಂದ ಹಿಂದೂ ಮುಖಂಡ ಪುನೀತ್ ಅತ್ತಾವರ; ಕಾರ್ಕಳದಲ್ಲಿ ಪ್ರಕರಣ ದಾಖಲು
ಪುನೀತ್ ಅತ್ತಾವರ
Follow us on

ಉಡುಪಿ, ಆಗಸ್ಟ್ 14: ಗೋಮಾತೆಯನ್ನು ಕಡಿಯುವ ಮುಸ್ಲಿಮರ ಕೈಗಳನ್ನು ಅವರ ದೇಹದಿಂದ ಬೇರ್ಪಡಿಸುವ ಬಗ್ಗೆ ಸಂಕಲ್ಪ ಮಾಡಬೇಕು ಎಂದು ಸಾರ್ವಜನಿಕ ಸಭೆಯಲ್ಲಿ ಕರೆ ನೀಡಿದ ಬಜರಂಗದಳ (Bajrang dal) ಮಂಗಳೂರು ವಿಭಾಗೀಯ ಸಹ ಸಂಯೋಜಕ ಪುನೀತ್ ಅತ್ತಾವರ (Punith Attavar) ವಿರುದ್ಧ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಪುನೀತ್ ಅತ್ತಾವರ ಹಾಗೂ ಕಾರ್ಕಳ ನಗರ ಬಜರಂಗದಳ ಸಂಚಾಲಕ್ ಸಂಪತ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಕಾರ್ಕಳ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿದ್ದಾರೆ. ಕಾರ್ಕಳ ನಗರ ಬಜರಂಗದಳ ಸಂಚಾಲಕ್ ಸಂಪತ್ ಕಾರ್ಯಕ್ರಮ ಆಯೋಜಿಸಿದ್ದರು.

ಕಾರ್ಕಳ ನಗರ ಬಜರಂಗದಳದ ವತಿಯಿಂದ ಆಯೋಜಿಸಲಾದ ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದ್ದ್ದ ಅತ್ತಾವರ, ಗೋವುಗಳನ್ನು ಕೊಲ್ಲುವವರ ವಿರುದ್ಧ ಹಿಂಸಾತ್ಮಕ ಕ್ರಮ ಕೈಗೊಳ್ಳುವಂತೆ ಜನರನ್ನು ಪ್ರಚೋದಿಸಿದ್ದಾರೆ.

ಪುನೀತ್ ಅತ್ತಾವರ ಅವರ ಭಾಷಣದ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮ ಮತ್ತು ವಾಟ್ಸ್​ಆ್ಯಪ್‌ನಲ್ಲಿ ಹರಿದಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ತಕ್ಷಣ, ಪೊಲೀಸರು ಕ್ರಮ ಕೈಗೊಂಡು ಇಬ್ಬರು ಹಿಂದುತ್ವವಾದಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಾರ್ಯಕ್ರಮ ಆಯೋಜಕರ ವಿರುದ್ಧ ಎಫ್​ಐಆರ್ ಕೂಡ ದಾಖಲಾಗಿದೆ.

ವಿಡಿಯೋ ಪ್ರಕರಣ; ತನಿಖೆ ಯಾವ ಹಂತದಲ್ಲಿದೆ ಎಂಬ ಮಾಹಿತಿ ನೀಡಲಾಗದೆಂದ ಹೆಬ್ಬಾಳ್ಕರ್

ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣದ ಸಿಐಡಿ ತನಿಖೆ ಯಾವ ಹಂತದಲ್ಲಿದೆ ಎಂದು ಈಗ ಬಹಿರಂಗಪಡಿಸಲು ಆಗುವುದಿಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಸಿಐಡಿ ಅಧಿಕಾರಿಗಳ ತಂಡ ಸಂತ್ರಸ್ತೆಯಿಂದ ಮಾಹಿತಿ ಪಡೆದಿದೆ. ತನಿಖೆ ಎಲ್ಲಿಯವರೆಗೆ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಯಾರಿಗೆ ಅನ್ಯಾಯವಾದರೂ ನಾವು ಸಹಿಸಲ್ಲ. ನಿಷ್ಪಕ್ಷಪಾತವಾಗಿ ಉಡುಪಿ ಪ್ರಕರಣದ ತನಿಖೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಈ ಪ್ರಕರಣದ ವಿಚಾರದಲ್ಲಿ ಸರ್ಕಾರ, ಮುಖ್ಯಮಂತ್ರಿಗಳು, ಪೊಲೀಸ್ ಇಲಾಖೆ 24 ಗಂಟೆ ಅಲರ್ಟ್ ಆಗಿವೆ. ಹೆಚ್ಚಿನ ತನಿಖೆಗೆ ಬೇಡಿಕೆ ಇತ್ತು. ಹೀಗಾಗಿ ಮುಖ್ಯಮಂತ್ರಿಗಳು ಸಿಐಡಿಗೆ ವಹಿಸಿದ್ದಾರೆ. ಸಿಐಡಿ ತಂಡ ಕಾಲೇಜಿಗೆ ಭೇಟಿ ಕೊಟ್ಟಿದೆ, ಸಂತ್ರಸ್ತೆಯ ಜೊತೆ ಮಾತುಕತೆ ನಡೆಸಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಉಡುಪಿ: ವಿದ್ಯಾರ್ಥಿಗಳಲ್ಲಿ ಗಾಂಜಾ, ಡ್ರಗ್ಸ್ ಹೆಚ್ಚುತ್ತಿರುವ ಹಿನ್ನೆಲೆ ಮಣಿಪಾಲ ಪೊಲೀಸರಿಂದ ತಡರಾತ್ರಿ ಭರ್ಜರಿ ಕಾರ್ಯಾಚರಣೆ

ಸಿಐಡಿ ತನಿಖೆ ಬಗ್ಗೆ ವಿಶ್ವಾಸವಿಲ್ಲ ಎಂದು ಉಡುಪಿ ಶಾಸಕ ಯಶ್​ಪಾಲ್ ಸುವರ್ಣ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಹೆಬ್ಬಾಳ್ಕರ್, ಶಾಸಕ ಸುವರ್ಣ ನನ್ನ ಸಹೋದರರು, ವಿರೋಧ ಪಕ್ಷದಲ್ಲಿದ್ದಾರೆ. ಅವರು ಮಾತನಾಡಬೇಕಾಗುತ್ತದೆ ಆ ಕಾರಣಕ್ಕೆ ಮಾತನಾಡುತ್ತಾರೆ ಅಷ್ಟೆ. ನಮ್ಮದು ಮಹಿಳೆಯರಿಗೆ ಗೌರವ ಕೊಡುವ ಸರಕಾರ. ಯಾರಿಗೆ ಅನ್ಯಾಯವಾದರೂ ನಾವು ಸಹಿಸಲ್ಲ. ನಿಷ್ಪಕ್ಷಪಾತವಾದ ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ