ಸೇವಾ ನ್ಯೂನತೆ ಎಸಗಿದ ವಿಮಾ ಕಂಪನಿಗೆ ಬಡ್ಡಿ ಸಹಿತ 10 ಲಕ್ಷ ರೂ. ಪಾವತಿಸಲು ಉಡುಪಿ ಜಿಲ್ಲಾ ಗ್ರಾಹಕರ ನ್ಯಾಯಾಲಯ ಆದೇಶ

|

Updated on: Aug 09, 2023 | 3:02 PM

Udupi Consumer Court Order; ಸಂತ್ರಸ್ತರ ವಾದಗಳನ್ನು ಆಲಿಸಿದ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯವು, ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರದ ಸುತ್ತೋಲೆ ಮತ್ತು ಈ ವಿಷಯದ ಕುರಿತು ರಾಷ್ಟ್ರೀಯ ಪ್ರಾಧಿಕಾರದ ಹಿಂದಿನ ತೀರ್ಪಿನ ಆಧಾರದ ಮೇಲೆ ಅಪಘಾತ ವಿಮೆ ಕ್ಲೈಮ್‌ಗೆ 10 ಲಕ್ಷ ರೂಪಾಯಿಯನ್ನು ಪಾವತಿಸಲು ವಿಮಾ ಕಂಪನಿಗೆ ಆದೇಶಿಸಿತು.

ಸೇವಾ ನ್ಯೂನತೆ ಎಸಗಿದ ವಿಮಾ ಕಂಪನಿಗೆ ಬಡ್ಡಿ ಸಹಿತ 10 ಲಕ್ಷ ರೂ. ಪಾವತಿಸಲು ಉಡುಪಿ ಜಿಲ್ಲಾ ಗ್ರಾಹಕರ ನ್ಯಾಯಾಲಯ ಆದೇಶ
ಸಾಂದರ್ಭಿಕ ಚಿತ್ರ
Follow us on

ಉಡುಪಿ, ಆಗಸ್ಟ್ 9: ಸೇವಾ ನ್ಯೂನತೆ ಹಾಗೂ ವಿಳಂಬ ಧೋರಣೆ ಅನುಸರಿಸಿದ ವಿಮಾ ಕಂಪನಿಗೆ ಬಡ್ಡಿ ಸಮೇತ 10 ಲಕ್ಷ ರೂಪಾಯಿ ಪಾವತಿಸುವಂತೆ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯ (Udupi Consumer Court) ಆದೇಶಿಸಿದೆ. 2018 ರ ಡಿಸೆಂಬರ್ 24 ರಂದು ಹೆಬ್ರಿ ನಿವಾಸಿ ದಿವಂಗತ ಸಂತೋಷ್ ಶೆಟ್ಟಿ ಅವರು ಯೂನಿವರ್ಸಲ್ ಸೊಂಪೊ ಜನರಲ್ ಇನ್ಶೂರೆನ್ಸ್ ಕಂಪನಿಯಿಂದ (Insurance Company) ವೈಯಕ್ತಿಕ ಅಪಘಾತ ವಿಮಾ ಪಾಲಿಸಿ ಮಾಡಿಸಿಕೊಂಡಿದ್ದರು. ಸಂತೋಷ್ ಅವರು 2019 ರ ನವೆಂಬರ್ 1 ರಂದು ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿ ಸಾವನ್ನಪ್ಪಿದರು. ಅವರ ವಾರಸುದಾರರಾದ ಪುಷ್ಪಾ ಶೆಟ್ಟಿ ಮತ್ತು ದಿವ್ಯಾ ಶೆಟ್ಟಿ ಅವರು ವಿಮಾ ಕಂಪನಿಯನ್ನು ಸಂಪರ್ಕಿಸಿ ಸಂತೋಷ್ ಶೆಟ್ಟಿ ಅವರ ಸಾವಿನ ಬಗ್ಗೆ ವಿಮಾ ಕ್ಲೇಮ್ ಸಲ್ಲಿಸಿದ್ದರು. ಅರ್ಜಿದಾರರು ತಡವಾಗಿ ಸಲ್ಲಿಸಿದ್ದಾರೆ ಎಂಬ ಕಾರಣಕ್ಕಾಗಿ ಕಂಪನಿಯು ಕ್ಲೈಮ್ ಅನ್ನು ತಿರಸ್ಕರಿಸಿತ್ತು.

ಬಳಿಕ ಸಂತೋಷ್ ಶೆಟ್ಟಿ ಅವರ ವಾರಸುದಾರರು ವಕೀಲರ ಮೂಲಕ ಜಿಲ್ಲಾ ಗ್ರಾಹಕರ ವಿವಾದ ಇತ್ಯರ್ಥ ಪ್ರಾಧಿಕಾರದ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು.

ವಾದಗಳನ್ನು ಆಲಿಸಿದ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯವು, ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರದ ಸುತ್ತೋಲೆ ಮತ್ತು ಈ ವಿಷಯದ ಕುರಿತು ರಾಷ್ಟ್ರೀಯ ಪ್ರಾಧಿಕಾರದ ಹಿಂದಿನ ತೀರ್ಪಿನ ಆಧಾರದ ಮೇಲೆ ಅಪಘಾತ ವಿಮೆ ಕ್ಲೈಮ್‌ಗೆ 10 ಲಕ್ಷ ರೂಪಾಯಿಯನ್ನು ಪಾವತಿಸಲು ವಿಮಾ ಕಂಪನಿಗೆ ಆದೇಶಿಸಿತು.

ಇದನ್ನೂ ಓದಿ: ಉಡುಪಿ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ

ಕ್ಲೈಮ್ ನಿರಾಕರಣೆ ದಿನಾಂಕದ ನಂತರದಿಂದ ತೀರ್ಪಿನ ದಿನಾಂಕದವರೆಗೆ ಎಷ್ಟು ದಿನಗಳ ಅವಧಿಯಿತ್ತೋ ಅಷ್ಟಕ್ಕೆ ಬಡ್ಡಿಯಾಗಿ 25,000 ರೂಪಾಯಿಗಳನ್ನು ಅರ್ಜಿದಾರರಿಗೆ ಪಾವತಿಸಲು ಮತ್ತು 30 ದಿನಗಳಲ್ಲಿ ನ್ಯಾಯಾಲಯದ ವೆಚ್ಚವಾಗಿ 10,000 ರೂಪಾಯಿಗಳನ್ನು ಪಾವತಿಸಲು ನ್ಯಾಯಾಲಯವು ಕಂಪನಿಗೆ ಸೂಚಿಸಿದೆ.

ಜಿಲ್ಲಾ ಗ್ರಾಹಕರ ನ್ಯಾಯಾಲಯದ ಅಧ್ಯಕ್ಷ ಸುನೀಲ್ ಟಿ.ಎಂ.ರೆಡ್ಡಿ, ಸದಸ್ಯರಾದ ಸುಜಾತಾ ಬಿ ಕೊರಳ್ಳಿ ಮತ್ತು ಪ್ರೇಮಾ ತೀರ್ಪು ನೀಡಿದ್ದಾರೆ. ಅರ್ಜಿದಾರರ ಪರ ಕಾರ್ಕಳದ ವಿವೇಕಾನಂದ ಮಲ್ಯ ವಾದ ಮಂಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ