ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಕೇಸ್: ವಿದ್ಯಾರ್ಥಿನಿಯರ ಫೋನ್ ಗುಜರಾತ್​ಗೆ ರವಾನಿಸುವ ಸಾಧ್ಯತೆ

| Updated By: Ayesha Banu

Updated on: Aug 17, 2023 | 12:18 PM

ಉಡುಪಿಯಲ್ಲಿ ಪ್ರಕರಣದ ತನಿಖೆ ನಡೆಸಿ, ಹೇಳಿಕೆ ದಾಖಲಿಸಿರುವ ಪೊಲೀಸರು ಮೂರು ವಾರಗಳ ಹಿಂದೆ ಎಫ್​ಎಸ್​ಎಲ್​ಗೆ ಮೊಬೈಲ್ ಕಳುಹಿಸಿದ್ದರು. ಸದ್ಯ ವರದಿಗಾಗಿ ಕಾಯುತ್ತಿದ್ದಾರೆ. ಎಫ್​ಎಸ್ಎಲ್ ಅಧಿಕಾರಿಗಳು ವಿಡಿಯೋ ಫೋಟೋ ರಿಟ್ರೈವ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ವಿಡಿಯೋ ಫೋಟೋ ಹಿಂಪಡೆಯಲಾಗದಿದ್ದರೆ ಗುಜರಾತ್​ಗೆ ಫೋನ್​ಗಳನ್ನು ರವಾನಿಸಲು ಚಿಂತನೆ ನಡೆದಿದೆ.

ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಕೇಸ್: ವಿದ್ಯಾರ್ಥಿನಿಯರ ಫೋನ್ ಗುಜರಾತ್​ಗೆ ರವಾನಿಸುವ ಸಾಧ್ಯತೆ
ಶೌಚಗೃಹದಲ್ಲಿ ಅಧಿಕಾರಿಗಳ ಪರಿಶೀಲನೆ
Follow us on

ಉಡುಪಿ, ಆ.17: ಉಡುಪಿ ನೇತ್ರ ಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜು(Udupi Washroom Video Case) ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ(CID) ಅಧಿಕಾರಿಗಳ ತಂಡ ಮೊದಲನೇ ಹಂತದ ತನಿಖೆ ಮುಗಿಸಿ ಬೆಂಗಳೂರಿಗೆ ತೆರಳಿದೆ. ಸದ್ಯ ಸಿಐಡಿ ಪೊಲೀಸರು ಎಫ್​ಎಸ್​ಎಲ್ ವರದಿಗಾಗಿ(FSL Report) ಕಾಯುತ್ತಿದ್ದಾರೆ. ಉಡುಪಿಯಲ್ಲಿ ಪ್ರಕರಣದ ತನಿಖೆ ನಡೆಸಿ, ಹೇಳಿಕೆ ದಾಖಲಿಸಿರುವ ಪೊಲೀಸರು ಮೂರು ವಾರಗಳ ಹಿಂದೆ ಎಫ್​ಎಸ್​ಎಲ್​ಗೆ ಮೊಬೈಲ್ ಕಳುಹಿಸಿದ್ದರು. ಸದ್ಯ ವರದಿಗಾಗಿ ಕಾಯುತ್ತಿದ್ದಾರೆ.

ಎಫ್​ಎಸ್ಎಲ್ ಅಧಿಕಾರಿಗಳು ವಿಡಿಯೋ ಫೋಟೋ ರಿಟ್ರೈವ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ವಿಡಿಯೋ ಫೋಟೋ ಹಿಂಪಡೆಯಲಾಗದಿದ್ದರೆ ಗುಜರಾತ್​ಗೆ ಫೋನ್​ಗಳನ್ನು ರವಾನಿಸಲು ಚಿಂತನೆ ನಡೆದಿದೆ. ಗುಜರಾತ್​ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವಿಡಿಯೋ ರಿಟ್ರೈವ್ ಮಾಡಿಸಲಾಗುತ್ತೆ. ಒಂದೆರಡು ದಿನದಲ್ಲಿ ಗುಜರಾತ್​ಗೆ ಫೋನ್​ಗಳನ್ನು ರವಾನಿಸುವ ಸಾಧ್ಯತೆ ಇದೆ. ಗುಜರಾತ್​ನ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ ಮೂಲಕ ಫೋನ್ ರಿಟ್ರೈವ್ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಕೇಸ್: ಮೊದಲ ಹಂತದ ತನಿಖೆ ಅಂತ್ಯ, ಆ ಒಂದು ವರದಿಗೆ ಕಾಯುತ್ತಿರುವ ಸಿಐಡಿ

ಜುಲೈ 18ರಂದು ಉಡುಪಿಯ ಕಾಲೇಜೊಂದರಲ್ಲಿ ನಡೆದ ಶೌಚಗೃಹದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಸಿಐಡಿ ತನಿಖೆ ಪ್ರಗತಿಯಲ್ಲಿದೆ. ಕಳೆದ ಒಂದು ವಾರದಿಂದ ಉಡುಪಿಯಲ್ಲಿ ಬೀಡು ಬಿಟ್ಟಿದ್ದ ಸಿಐಡಿ ತಂಡ ಪ್ಯಾರಾ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿದೆ. ಸಿಐಡಿ ಎಡಿಜಿಪಿ ಮನೀಶ್ ಕರ್ಬಿಕರ್ ಮತ್ತು ಎಸ್ ಪಿ ರಾಘವೇಂದ್ರ ಹೆಗಡೆ ಅವರ ನೇತೃತ್ವದಲ್ಲಿ ತನಿಖಾಧಿಕಾರಿ ಡಿವೈಎಸ್ಪಿ ಅಂಜುಮಾಲ ಅವರು ಒಂದು ವಾರದಿಂದ ಉಡುಪಿಯಲ್ಲಿ ಇದ್ದುಕೊಂಡು ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಬೆಂಗಳೂರಿಗೆ ತೆರಳಿದ್ದಾರೆ. ಸದ್ಯ ಸಿಐಡಿ ಪೊಲೀಸರು ಎಫ್​ಎಸ್​ಎಲ್ ವರದಿಗಾಗಿ ಕಾಯುತ್ತಿದ್ದಾರೆ.

ಇನ್ನು ಸಿಐಡಿ ತಂಡ ಒಂದು ಹಂತದ ತನಿಖೆ ಮುಗಿಸಿದ್ದು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದ್ದ ಮೊಬೈಲ್ ನ ಎಫ್​ಎಸ್​ಎಲ್ ವರದಿಗಾಗಿ ಸಿಐಡಿ ತನಿಖಾ ತಂಡ ಕಾಯುತ್ತಿದೆ. ವಿದ್ಯಾರ್ಥಿನಿಯರಿಂದ ಪಡೆಯಲಾಗಿದ್ದ ಮೂರು ಮೊಬೈಲ್​ಗಳ ಎಫ್​ಎಸ್​ಎಲ್ ವರದಿ ಬಂದ ತಕ್ಷಣ ಪ್ರಕರಣದ ಸತ್ಯತೆ ಹೊರಗೆ ಬೀಳುವ ಸಾಧ್ಯತೆ ದಟ್ಟವಾಗಿದೆ.

ಉಡುಪಿಗೆ ಸಂಬಂಧಪಟ್ಟ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ