ಶಿವಮೊಗ್ಗದಲ್ಲೊಂದು ಹೃದಯ ವಿದ್ರಾವಕ ಘಟನೆ: ಕುಚಿಕು ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಗೆಳೆಯ ಸಾವು

| Updated By: Kiran Hanumant Madar

Updated on: Aug 20, 2023 | 6:13 PM

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ-ಶಿರಾಳಕೊಪ್ಪ ನಡುವಿನ ಕೆಎಸ್​ಆರ್​ಟಿಸಿ ಡಿಪೋ ಬಳಿ ಹೃದಯ ವಿಧ್ರಾವಕ ಘಟನೆಯೊಂದು ನಡೆದಿದೆ. ಹೌದು, ಬೈಕ್​ನಲ್ಲಿ ಹೋಗುತ್ತಿದ್ದ ಸ್ನೇಹಿತನಿಗೆ ಅಪಘಾತವಾಗಿ ಸಾವನ್ನಪ್ಪಿದ್ದು, ಈ ವಿಷಯ ಕೇಳಿ ಯುವಕನೊಬ್ಬ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ.

ಶಿವಮೊಗ್ಗದಲ್ಲೊಂದು ಹೃದಯ ವಿದ್ರಾವಕ ಘಟನೆ: ಕುಚಿಕು  ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಗೆಳೆಯ ಸಾವು
ಆನಂದ್​, ಸಾಗರ್​
Follow us on

ಶಿವಮೊಗ್ಗ, ಆ.20: ಸ್ನೇಹಿತನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ (Heart Attack) ಯುವಕನೊಬ್ಬ ಸಾವನ್ನಪ್ಪಿದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಶಿಕಾರಿಪುರ-ಶಿರಾಳಕೊಪ್ಪ ನಡುವಿನ ಕೆಎಸ್​ಆರ್​ಟಿಸಿ ಡಿಪೋ ಬಳಿ ನಡೆದಿದೆ. ನಿನ್ನೆ(ಆ.19) ರಾತ್ರಿ ಬೈಕ್​ ಅಪಘಾತ (Accident) ದಲ್ಲಿ ಸವಾರ ಆನಂದ(30) ಮೃತಪಟ್ಟಿದ್ದ. ಈ ವಿಷಯ ಕೇಳುತ್ತಿದ್ದಂತೆ ಆತನ ಸ್ನೇಹಿತ ಸಾಗರ(22) ಎಂಬಾತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಈ ಇಬ್ಬರು ಗೆಳೆಯರು ಶಿಕಾರಿಪುರ ತಾಲೂಕಿನ ಪುಣೇದಹಳ್ಳಿ ನಿವಾಸಿಗಳು. ಇನ್ನು ಆನಂದನ ಜೊತೆ ಬೈಕ್​ನಲ್ಲಿ ನಿನ್ನೆ ರಾತ್ರಿ ತೆರಳುತ್ತಿದ್ದ ಸವಾರ ನಟರಾಜ್​ ಸ್ಥಿತಿ ಗಂಭೀರವಾಗಿದೆ. ಜೊತೆಗೆ ಇದೇ ವೇಳೆ ಮತ್ತೊಂದು ಬೈಕ್​ನಲ್ಲಿದ್ದ ಜಾವಿದ್, ಮಲಿಕ್ ಎಂಬುವರಿಗೂ ಕೂಡ ಗಂಭೀರ ಗಾಯಗೊಂಡಿದ್ದರು. ಕೂಡಲೇ ಮೂವರು ಗಾಯಾಳುಗಳಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲುವೆಯಲ್ಲಿ ತೇಲಿ ಬಂದ ಮಹಿಳೆ ಶವ

ವಿಜಯನಗರ: ಜಿಲ್ಲೆಯ ಹೊಸಪೇಟೆಯ ರ್‌ಟಿ‌ಓ ಕಚೇರಿ ಬಳಿಯಿರುವ ಹೆಚ್​ಎಲ್​ಸಿ ಕಾಲುವೆಯಲ್ಲಿ ಮಹಿಳೆಯ ಶವವೊಂದು ತೇಲಿಬಂದ ಘಟನೆ ನಡೆದಿದೆ. ಸಂಡೂರಿನ ಕೃಷ್ಣಾನಗರದ ಮಹಿಳೆ ಎಂಬ ಗುರುತು ಪತ್ತೆಯಾಗಿದೆ. ಇದು ಆತ್ಮಹತ್ಯೆಯೋ ಅಥವಾ ಕಾಲುಜಾರಿ ಬಿದ್ದಿದ್ದಾರೆಯೇ ಎಂಬ ಮಾಹಿತಿ ತನಿಖೆಯಿಂದ ಹೊರ ಬರಬೇಕಿದೆ. ಈಗಾಗಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನು ವಿಷಯ ತಿಳಿದು ಜನರು ಕಾಲುವೆಯತ್ತ ಧಾವಿಸುತ್ತಿದ್ದಾರೆ.

ಇದನ್ನೂ ಓದಿ:ರಾಮನಗರದಲ್ಲಿ ಇಬ್ಬರಿಗೆ ಹೃದಯಾಘಾತ, ಚೇರಿನಲ್ಲಿ ಕುಳಿತಲ್ಲೇ ಅಟೆಂಡರ್ ಸಾವು, ಎಲೆಕ್ಷನ್​ ಕರ್ತವ್ಯದಲ್ಲಿದ್ದ ಅಧಿಕಾರಿಗೆ ಆರ್ಟ್​ ಅಟ್ಯಾಕ್

ಕೆರೆಗೆ ನೀರು ಕುಡಿಯಲು ಹೋಗಿ, ನೀರುಪಾಲಾದ ವ್ಯಕ್ತಿ

ಗದಗ: ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿನ ಕೆರೆಯೊಂದಕ್ಕೆ ನಿನ್ನೆ (ಆ.19) ರಾತ್ರಿ ನೀರು ಕುಡಿಯಲು ಹೋಗಿದ್ದ ವ್ಯಕ್ತಿಯೋರ್ವ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಶಂಕರಗೌಡ (38) ಮೃತ ವ್ಯಕ್ತಿ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ನರಗುಂದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದೀಗ ಸ್ಥಳೀಯ ಈಜುಗಾರರು ಮೃತದೇಹವನ್ನು ಹೊರ ತೆಗೆದಿದ್ದಾರೆ. ಈ ಕುರಿತು ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ