Dr PS Manjappa: ಸ್ಥಳೀಯತೆಯ ಮಹಾನ್‌ ಸಂಕೇತ; ಸಾಗರದ 2 ರೂಪಾಯಿ ವೈದ್ಯ ಮಂಜಪ್ಪ ಡಾಕ್ಟರ್ ಬಗ್ಗೆ ಬೇಳೂರು ಸುದರ್ಶನ ಬರಹ

ಮಂಜಪ್ಪ ಡಾಕ್ಟರ್ ಎಂದರೆ ಸಾಗರ, ಸೊರಬ ತಾಲೂಕಿನ ಎಲ್ಲ ರೋಗಿಗಳಿಗೂ ಅಚ್ಚುಮೆಚ್ಚು. ಮಂಜಪ್ಪ ಡಾಕ್ಟರ್ ಬಗ್ಗೆ ಸಾಹಿತಿ ಬೇಳೂರು ಸುದರ್ಶನ ಅವರು ಬರೆದಿರುವ ಹೃದ್ಯ ಬರಹ ಇಲ್ಲಿದೆ.

Important Highlight‌
Dr PS Manjappa: ಸ್ಥಳೀಯತೆಯ ಮಹಾನ್‌ ಸಂಕೇತ; ಸಾಗರದ 2 ರೂಪಾಯಿ ವೈದ್ಯ ಮಂಜಪ್ಪ ಡಾಕ್ಟರ್ ಬಗ್ಗೆ ಬೇಳೂರು ಸುದರ್ಶನ ಬರಹ
ಸಾಗರದ ಪ್ರಸಿದ್ಧ ವೈದ್ಯ ಡಾ ಪಿ.ಎಸ್.ಮಂಜಪ್ಪ
Follow us
TV9 Digital Desk
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 23, 2023 | 12:57 PM

ಎರಡು ರೂಪಾಯಿ ವೈದ್ಯರೆಂದೇ ಪ್ರಸಿದ್ಧರಾಗಿದ್ದ ಜನಾನುರಾಗಿ ವೈದ್ಯ ಡಾ ಮಂಜಪ್ಪ (85) ಭಾನುವಾರ (ಜ 22) ನಿಧನರಾದರು. ಸಾಗರದ (Sagara) ಜೋಸೆಫ್ ನಗರದಲ್ಲಿ ವಾಸವಿದ್ದ ಅವರು ಕಾನ್ಲೆ ಛತ್ರದ ಸಮೀಪ ಹಲವು ವರ್ಷಗಳ ಕಾಲ ಕ್ಲಿನಿಕ್ ನಡೆಸುತ್ತಿದ್ದರು. ಈಚೆಗೆ ತಮ್ಮ ನಿವಾಸದಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ತಮ್ಮ ಕಷ್ಟಸುಖಗಳಿಗೆ ಸ್ಪಂದಿಸುತ್ತಿದ್ದ ಸಹೃದಯಿ ವೈದ್ಯನ ನಿಧನಕ್ಕೆ (Dr PS Manjappa Passed Away) ಸಾಗರ , ಸೊರಬ ತಾಲ್ಲೂಕುಗಳ ಜನರು ನೊಂದುಕೊಂಡಿದ್ದಾರೆ. ಹಲವರು ಒಡನಾಟಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ‘ಇ-ಆಡಳಿತ’ ಸಲಹೆಗಾರ, ಸಾಹಿತಿ ಬೇಳೂರು ಸುದರ್ಶನ ಅವರು ಮಂಜಪ್ಪ ಡಾಕ್ಟರ್​ ಕುರಿತು ಬರೆದಿರುವ ಹೃದ್ಯ ಬರಹ ಇಲ್ಲಿದೆ.

***

ಮಂಜಪ್ಪ ಡಾಕ್ಟರ್ ಅಂದ್ರೆ ಸಾಗರ ಸೊರಬ ತಾಲೂಕಿನ ಎಲ್ಲ ರೋಗಿಗಳಿಗೂ ಅಚ್ಚುಮೆಚ್ಚು. ಏನಾ, ಬಾರಾ, ಹೋಗಾ ಎಂದು ರೋಗಿಗಳನ್ನು ತನ್ನದೇ ಆತ್ಮೀಯತೆಯಲ್ಲಿ ಕರೆಯುವ, ತಮ್ಮದೇ ಕಾಂಬಿನೇಶನ್ ಔಷಧಗಳನ್ನು ಕೊಟ್ಟು ಖಡಕ್ಕಾಗಿ ಪಥ್ಯಗಳನ್ನು ತಿಳಿಸುವ, ತನ್ನ ಮಾತನ್ನ ಕೇಳದವರನ್ನು ಸರಿಯಾಗಿಯೇ ರಚನಾತ್ಮಕವಾಗಿ ಬೈಯ್ಯುವ ಡಾಕ್ಟರಾಗಿ ಆ ಪ್ರದೇಶದ ಸಮಾಜ ಚಿಕಿತ್ಸಕರೇ ಆಗಿದ್ದರು ಎಂದರೆ ತಪ್ಪಿಲ್ಲ. ಅಡಿಕೆ ಮಂಡಿ ಕೆಲಸ ಮುಗಿದ ಮೇಲೆ ದಿನಸಿ ಕೊಳ್ಳುವ ಮೊದಲು ಮಂಜಪ್ಪ ಡಾಕ್ಟರ್‌ ಭೇಟಿ ಆಗುವುದು ಹಲವು ಅಡಿಕೆ ಬೆಳೆಗಾರರ ಹವ್ಯಾಸವಾಗಿತ್ತು!

ವೈದ್ಯ ವೃತ್ತಿಯನ್ನು ಯಾವತ್ತೂ ವಾಣಿಜ್ಯ ಉದ್ದೇಶಕ್ಕೆ ಬಳಸಲಿಲ್ಲ, ಜನರ ಆಶೋತ್ತರಕ್ಕೆ ಸ್ಪಂದಿಸುತ್ತಿದ್ದರು. ರೋಗಿಗಳನ್ನು ‘ಏನಾ, ಬಾರಾ, ಹೋಗಾ’ ಎಂದು ಆತ್ಮೀಯತೆಯಿಂದ ಮಾತನಾಡಿಸುತ್ತಾ, ಔಡಧಗಳೊಂದಿಗೆ ಪಥ್ಯವನ್ನು ಅನುಸರಿಸುವಂತೆ ಖಡಕ್ಕಾಗಿ ಹೇಳುತ್ತಿದ್ದರು. ಅವರ ಕ್ಲಿನಿಕ್‌ಗೆ ಮಧ್ಯಾಹ್ನದ ಹೊತ್ತು ಭೇಟಿ ಕೊಟ್ಟರೆ ನಿಜ ಭಾರತವನ್ನು ಕಣ್ಣಾರೆ ಕಾಣಬಹುದಿತ್ತು!!

ನನ್ನ ಬಾಲ್ಯದಲ್ಲಿ ಅವರ ಕ್ಲಿನಿಕ್‌ಗೆ ಎಷ್ಟೋ ಸಲ ಹೋಗಿದ್ದೇನೆ. ತುಂಬ ಜನರಿಗೆ ಮಂಜಪ್ಪ ಡಾಕ್ಟರ್‌ ಹತ್ರ ಹೋಗೋದೇ ಒಂದು ಸೈಕಾಲಜಿಕಲ್‌ ಸಮಾಧಾನದ ಸಂಗತಿಯಾಗಿತ್ತು. ಯಾಕಂದ್ರೆ ಅವರು ಕೊಡುವ ಔಷಧಿಯ ಹಾಗೆಯೇ ಅವರು ರೋಗಿಯಲ್ಲಿ ರೋಗದ ಬಗ್ಗೆ ಗಾಬರಿ ಹುಟ್ಟಿಸದೆ, ಕೊಂಚ ತಮಾಶೆಯಾಗಿ ಮಾತಾಡೋದು ಸಹಾ ಜನರಿಗೆ ಬೇಕಾಗಿತ್ತು ಅನ್ನೋದು ನನ್ನ ನೆನಪು.

ಆ ಕಾಲದಲ್ಲಿ ವೈದ್ಯರು ಅಂದ್ರೆ ಶುಲ್ಕ ಕೇಳಬಾರದು, ಪುಕ್ಕಟೆ ಚಿಕಿತ್ಸೆ ಕೊಡುವುದು ಅವರ ಆದ್ಯ ಕರ್ತವ್ಯ ಎಂದೇ ನನ್ನಂತಹವರೇನು, ಹಿರಿಯರೂ ಭಾವಿಸಿದ್ದರು. ಅದೇನು ತಪ್ಪಾದ ಅನಿಸಿಕೆಯಲ್ಲ. ಆದ್ರೆ ವೈದ್ಯರು ಬದುಕೋದು ಹೇಗೆ? ಮಂಜಪ್ಪ ಡಾಕ್ಟರ್ ಇದಕ್ಕೆ ಸರಿಯಾದ ಪರಿಹಾರ ಹುಡುಕಿದ್ದರು. ನೇರವಾಗಿಯೇ ದುಡ್ಡು ತಂದಿದೀಯ ಅಂತ ಕೇಳಿ ಇದ್ದರೆ ಮಾತ್ರ ಕನಿಷ್ಠ ಪ್ರಮಾಣದಲ್ಲಿ ಇಸ್ಕೋತಿದ್ರು ಎಂಬುದು ನನ್ನ ನೆನಪು. ಅವರು ಸಾವಿರಾರು ಜನರಿಗೆ ನೀಡಿದ ಉಚಿತ ಚಿಕಿತ್ಸೆಗೆ ಮಿತಿಯಿಲ್ಲ. ಅದನ್ನು ಹೇಳಿ ಸುಖವಿಲ್ಲ!

ಆದ್ರೆ ಅವರು ರೋಗಿಗಳಿಗೆ ನೀಡಿದ ಕೌನ್ಸೆಲಿಂಗ್‌ನ ಬೆಲೆ? ಅದು ಅವರು ಇಸ್ಕೊಂಡ ಕಾಸಿಗಿಂತ ಸಾವಿರಾರು ಪಟ್ಟು!!! ಅದನ್ನು ಲೆಕ್ಕ ಹಾಕಿದ್ರೆ ಅವರು ಸಾಗರ ಪಟ್ಟಣದಲ್ಲಿ ಎಂದೋ ಭಯಂಕರ ದೊಡ್ಡ ಹಾಸ್ಪಿಟಲ್‌ ಕಟ್ಟಬೇಕಾಗಿತ್ತು. ಹಾಗೇನೂ ಆಗಲಿಲ್ಲ. ಅವರು ನಮ್ಮೆಲ್ಲರ ಪ್ರೀತಿಯ ಮಂಜಪ್ಪ ಡಾಕ್ಟರ್‌ ಆಗಿಯೇ ಉಳಿದರು. ನಾಲ್ಕು ದಶಕ ಮೀರಿಯೂ ಅವರನ್ನು ನೋಡದ ನನಗೇ ಇಷ್ಟೆಲ್ಲ ನೆನಪು ಇರಬೇಕಾದ್ರೆ ಸಾಗರದ ಜನರ ಬಳಿ ಅದೆಷ್ಟು ನೂರು ನೆನಪುಗಳು ಇರಬಹುದು…

ಸಾಗರಕ್ಕೆ ಹೋದಾಗ ಮಂಜಪ್ಪ ಡಾಕ್ಟರ್ ಕ್ಲಿನಿಕ್‌ ಹಾದಿಯಲ್ಲಿ ಹೋಗುವಾಗ ಕ್ಲಿನಿಕ್‌ ಇದೆಯಾ ಅಂತ ಇಣುಕಿ ನೋಡುತ್ತಿದ್ದೆ. ನನಗೆ ಅವರೊಬ್ಬ ಎನಿಗ್ಮಾ ಆಗಿದ್ದರು. ಸ್ಥಳೀಯತೆಯ ಪರಿಕಲ್ಪನೆಗಳನ್ನು ನಾವೀಗ ಎಷ್ಟು ಪ್ರಯತ್ನಪಟ್ಟು ಹೇಳಿದ್ರೂ ಅರಿವಾಗದ ಕೊಳ್ಳುಬಾಕ – ನಗರ ಕೇಂದ್ರಿತ ಬದುಕಿಗೆ ಮೊರೆ ಹೋಗಿರುವ ನಮಗೆ ಅವರ ಸರಳ – ಸ್ಥಳೀಯತೆ ಕೇಂದ್ರಿತ ಆರೋಗ್ಯಸೇವೆಯ ಮಹತ್ವ ಅರಿವಾಗುವುದು ಕಷ್ಟ.

ನನಗೆ ನೆನಪು ಹುಟ್ಟುವ ಮುನ್ನವೇ ಎಡಗಾಲಿಗೆ ಪೋಲಿಯೋ ಆದಾಗ, ಇದಕ್ಕೆ ಬೆಳಂಬಾರದ ಸೊಪ್ಪಿನ ಮದ್ದೇ ಸರಿ ಎಂದು ನನ್ನ ಪಾಲಕರನ್ನು ಕಳಿಸಿ, ಚಿಕಿತ್ಸೆ ಮಾಡಿಸಿದ್ದಕ್ಕೇ ನಾನು ಈಗಿರುವಂತೆ ನಡೆಯುವ ಹಾಗಾಯ್ತು! ಅವರೊಬ್ಬ ದಿವ್ಯಜ್ಞಾನದ ಕರ್ಮಯೋಗಿ ಚಿಕಿತ್ಸಕ ಎನ್ನಲು ಬೇರೆ ಕಾರಣ ಬೇಕೆ?

ಇಂತಹ ಸ್ಥಳೀಯತೆಯನ್ನೇ ಉಸಿರಾಗಿಸಿಕೊಂಡ ನೂರಾರು ವೈದ್ಯರು ಕರ್ನಾಟಕದಲ್ಲಿ, ಇತರೆಡೆ ಇದ್ದಾರೆ. ಉದಾಹರಣೆಗೆ ಮೈಸೂರಿನಲ್ಲಿ ನಾವಿದ್ದ ನಾಲ್ಕೂ ವರ್ಷಗಳ ಕಾಲ ನಮ್ಮ ಆರೋಗ್ಯದ ಎಲ್ಲ ಸಮಸ್ಯೆಗಳನ್ನೂ ಕರಾರುವಾಕ್ಕಾಗಿ ಗುರುತಿಸಿ, ತಮಗಾದ್ರೆ ಮಾತ್ರ ಚಿಕಿತ್ಸೆ ಕೊಟ್ಟು, ಆಗದಿದ್ದರೆ ಉನ್ನತ ಚಿಕಿತ್ಸೆ ಸಿಗುವ ಕಡೆಗೆ ಹೋಗಲು ಸೂಚಿಸುವ ವೈದ್ಯರು ನಮ್ಮ ಮನೆ ಪಕ್ಕದಲ್ಲೇ ಇದ್ದರು; ಸರಸ್ವತೀಪುರಂನ ಏಳನೆಯ ಅಡ್ಡರಸ್ತೆಯಲ್ಲಿರುವ ಡಾ. ಎಸ್ ಜಯಕುಮಾರ್ ಈಗಲೂ ಅದೇ ಸೇವೆ ಮುಂದುವರಿಸಿದ್ದಾರೆ.

ನಾವು ಮಂಜಪ್ಪ ಡಾಕ್ಟರನ್ನು ಇಂತಹ ಸ್ಥಳೀಯತೆಯ ಸಂಕೇತವಾಗಿ ನೋಡಿದರೆ ಮಾತ್ರ ಅವರ ವ್ಯಕ್ತಿತ್ವ ಎಂತಹ ಮಹಾನ್‌ ಎಂಬ ಅರಿವಾಗುತ್ತದೆ. ದೇಶದ ಮಹಾನಗರಗಳಲ್ಲಿ ಒಳಗೆ ಹೋಗುವುದಕ್ಕೇ ಸಾವಿರಾರು ರೂ. ಕೊಟ್ಟು, ಇರಲಾರದ ರೋಗಗಳಿಗೆಲ್ಲ ಪರೀಕ್ಷೆ ಮಾಡಿಸಿಕೊಂಡು, ಅನಗತ್ಯ ಬಿಲ್ಲುಗಳನ್ನು ಹೊರಲೆಂದೇ ಆರೋಗ್ಯ ವಿಮೆಯನ್ನು ಕಟ್ ಮಾಡಿಸಿಕೊಳ್ಳುತ್ತ ಎಲ್ಲವೂ ಸರಿ ಇದೆ ಎಂದು ಬದುಕುವ ನಮಗೆ ಮಂಜಪ್ಪ ಡಾಕ್ಟರ್‌ ನೆನಪಾಗುವುದು ಕಷ್ಟವಾಗಿಬಿಟ್ಟಿದೆ!

ಅವರಿಗೆ ನನ್ನ ಅಂತಿಮ ನಮನಗಳು

ಇದನ್ನೂ ಓದಿ: LT Hegde Death: ಸಾಗರ ಕ್ಷೇತ್ರದ ಮಾಜಿ ಶಾಸಕ, ಸಹಕಾರಿ ಧುರೀಣ ಎಲ್ ಟಿ ತಿಮ್ಮಪ್ಪ ಹೆಗಡೆ ನಿಧನ

ಶಿವಮೊಗ್ಗ ಜಿಲ್ಲೆಯ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:57 pm, Mon, 23 January 23

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು