ರಾಮನಗರ: ಸಮಾಜಕ್ಕೆ ಅಂಜಿ ರೈಲಿಗೆ ತಲೆಕೊಟ್ಟು ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಆತ್ಮಹತ್ಯೆ

| Updated By: Rakesh Nayak Manchi

Updated on: Aug 12, 2023 | 7:21 PM

ರೈಲಿನಡಿ ತಲೆಕೊಟ್ಟು ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರ ಜಿಲ್ಲೆಯ ಹೊರವಲಯದ ಕುಂಬಾಪುರ ಗೇಟ್​ ಬಳಿ ಇಂದು ನಡೆದಿದೆ. ಮೃತರಿಬ್ಬರು ಯಂಟಗಾನಹಳ್ಳಿ ಶಾಲೆಯ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಾಗಿದ್ದಾರೆ.

ರಾಮನಗರ: ಸಮಾಜಕ್ಕೆ ಅಂಜಿ ರೈಲಿಗೆ ತಲೆಕೊಟ್ಟು ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಆತ್ಮಹತ್ಯೆ
ರೈಲಿನಡಿ ತಲೆ ಇಟ್ಟು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳು
Follow us on

ರಾಮನಗರ, ಆಗಸ್ಟ್ 12: ಶಾಲೆಯಲ್ಲಿ ಓದುತ್ತಿದ್ದಾಗಲೇ ಪ್ರೀತಿಗೆ ಬಿದ್ದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ರೈಲಿನಡಿ ತಲೆ ಇಟ್ಟು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ರಾಮನಗರ (Ramanagara) ಹೊರವಲಯದ ಕುಂಬಾಪುರ ಗೇಟ್ ಬಳಿ ಇಂದು ನಡೆದಿದೆ. ಯಂಟಗಾನಹಳ್ಳಿ ಶಾಲೆಯ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ನವ್ಯಶ್ರೀ (15) ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿ ಹರ್ಷವರ್ಧನ್ (17) ಆತ್ಮಹತ್ಯೆ ಮಾಡಿಕೊಂಡವರು.

‌ನವ್ಯಶ್ರೀ ಮತ್ತು ಹರ್ಷವರ್ಧನ್ ಇಬ್ಬರು ಒಂದೇ‌ ಶಾಲೆಯಲ್ಲಿ‌ ಓದುತ್ತಿದ್ದ ವಿದ್ಯಾರ್ಥಿಗಳು. ನೆಲಮಂಗಲ‌ ತಾಲೂಕಿನ ಯಂಟಗಾನಹಳ್ಳಿ ಯ‌ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು, ‌ಅಲ್ಲೇ ಅಕ್ಕಪಕ್ಕದ ಊರಿನವರಾಗಿದ್ದಾರೆ. ಶಾಲೆಯಲ್ಲಿದ್ದಾಗಲೇ ಇಬ್ಬರ ಮಧ್ಯೆ ಪ್ರೀತಿ‌ಭಾವ ಮೂಡಿದೆ.

ಇದನ್ನೂ ಓದಿ: ರಾಮನಗರ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಯಾರು ಬರಬೇಡಿ ಹುಷಾರ್​.! ಫೇಸ್​ಬುಕ್​​ನಲ್ಲಿ ಜನರನ್ನು ಭಯಗೊಳಿಸುವ ಪೋಸ್ಟ್​​

ಈ ವಿಚಾರ ತಿಳಿದ ಪೋಷಕರು ಬುದ್ಧಿವಾದ ಹೇಳಿದ್ದಾರೆ. ಈ ನಡುವೆ ನಿನ್ನೆ ಬೆಳಿಗ್ಗೆ ಶಾಲೆಗೆ ಹೋಗಿ ಬರುತ್ತೇನೆ ಅಂತ‌ ಹೊರಟ ನವ್ಯಶ್ರೀ, ಹರ್ಷವರ್ಧನ್ ಜೊತೆ ಬೈಕಿನಲ್ಲಿ‌ ನೆಲಮಂಗಲ‌ ತೊರೆದಿದ್ದಾಳೆ. ‌ಮೈಸೂರಿನ‌ ನಂಜನಗೂಡು ಹೋಗಿ ನಂತರ ಅಲ್ಲಿಂದ ಬೆಳಿಗ್ಗೆ ರಾಮನಗರಕ್ಕೆ ವಾಪಾಸ್ ಆಗಿದ್ದಾರೆ.‌ ಬೆಳಗಿನ ಜಾವ 6 ಗಂಟೆಗೆ ರಾಮನಗರ ತಲುಪಿದ್ದ ಜೋಡಿ‌ ರಾಮನಗರ ಹೊರವಲಯದ ಕುಂಬಾಪುರ‌ಗೇಟ್ ದಾಟಿ ಅಲ್ಲೇ ಬೈಕ್‌ ನಿಲ್ಲಿಸಿ‌ ಸರಿಯಾಗಿ 6:30 ಬಂದ‌ ತಾರಗುಂಪಾ‌ ಎಕ್ಸ್‌ಪ್ರೆಸ್‌ ರೈಲಿಗೆ ತಲೆ‌ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈಲು ಹರಿದ ಪರಿಣಾಮ‌ ಇಬ್ಬರ ತಲೆ ತುಂಡಾಗಿದೆ.

ಆತ್ಮಹತ್ಯೆಗೂ ಮುನ್ನ ನಿನ್ನೆ ರಾತ್ರಿ ನವ್ಯಶ್ರೀ ತನ್ನ ತಾಯಿ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾಳೆ. ಆದರೂ ಆಕೆ ಸ್ಪಷ್ಟವಾಗಿ ತಾಯಿ ಜೊತೆ ಮಾತನಾಡಿಲ್ಲ. ಮನೆಗೆ ಬಾ ನಾವೇನು ಹೊಡೆಯುವುದು ಬಡಿಯುವುದು ಮಾಡಲ್ಲ ಅಂತ ತಾಯಿ ಹೇಳಿದ್ದಾರೆ.‌ ಆದರೂ ಇಡೀ ರಾತ್ರಿ ಬೇರೆಡೆ ಕಳೆದಿದ್ದೇವೆ ಊರಿನವರೆಲ್ಲಾ ಏನು ಮಾತಾಡಿಕೊಳ್ಳುತ್ತಾರೋ ಅನ್ನೋ ಭಯ ಇಬ್ಬರಿಗೂ ಮೂಡಿದೆ.‌ ಹೀಗಾಗಿ‌ ಇಬ್ಬರು ಸೇರಿ ಈ ಪ್ರಪಂಚ‌ ತೊರೆಯಲು ನಿರ್ಧರಿಸಿದ್ದಾರೆ. ಅದರಂತೆ ನವ್ಯ ಹರ್ಷವರ್ಧನ್ ಕೈ ಕೈ ಹಿಡಿದು ರೈಲು ಹಳಿಗೆ ತಲೆಕೊಟ್ಟು ಮಲಗಿದ್ದು, ಈ ವೇಳೆ ರೈಲು ಹರಿದು ಇಬ್ಬರೂ ಸಾವನ್ನಪ್ಪಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:06 pm, Sat, 12 August 23