ಚನ್ನಪಟ್ಟಣ: ಹರಾಜಿನಲ್ಲಿ ಗುಜರಿ ಖರೀದಿಗೆ ಮುಗಿಬಿದ್ದ ಜನ
ಚನ್ನಪಟ್ಟಣ ನಗರಸಭೆ ಆವರಣದಲ್ಲಿ ಇಂದು ಗುಜರಿ ಹರಾಜು ಪ್ರಕ್ರಿಯೆ ನಡೆಯಿತು. ಈ ವೇಳೆ ಗುಜರಿ ವಸ್ತುಗಳ ಖರೀದಿಗೆ ನೂಕುಗ್ಗಲು ಉಂಟಾಗಿಯಿತು. ಅಲ್ಲದೆ, ಕಬ್ಬಿಣಕ್ಕೆ ಭಾರೀ ಭೇಡಿಕೆ ವ್ಯಕ್ತವಾಗಿದೆ.
ರಾಮನಗರ, ಆಗಸ್ಟ್ 1: ಚನ್ನಪಟ್ಟಣ (Channapatna) ನಗರಸಭೆಯಲ್ಲಿ ನಡೆದ 2023-24 ನೇ ಸಾಲಿನ ಬಹಿರಂಗ ಹರಾಜು (Auction) ಪ್ರಕ್ರಿಯೆಯಲ್ಲಿ ಗುಜರಿ ಖರೀದಿ ಮಾಡಲು ಜನರು ಮುಗಿಬಿದ್ದರು. ಆಟೋ ಟಿಪ್ಪರ್, ವಿದ್ಯುತ್ ಉಪಕರಣ ಸೇರಿದಂತೆ ಇನ್ನಿತರ ನಿರುಪಯುಕ್ತ ವಸ್ತುಗಳನ್ನು ಖರೀದಿಗೆ ಇಡಲಾಗಿತ್ತು. ಇದನ್ನು ಖರೀದಿಸಲು ಬೆಳಗ್ಗಿನಿಂದಲೇ ಸಾಲುಗಟ್ಟಿ ನಿಂತಿದ್ದರು.
ಆರೋಗ್ಯ ಶಾಖೆಯ ನಿರುಪಯುಕ್ತ ವಸ್ತುಗಳಾದ 14 ಆಟೋ ಟಿಪ್ಪರ್, ಡಂಪರ್ ಪೆಸ್ಲರ್ ವಾಹನ, 38 ವಿವಿಧ ಬಗೆಯ ವಿದ್ಯುತ್ ಉಪಕರಣಗಳು, 62 ಕ್ಕೂ ಹೆಚ್ಚು ಕಬ್ಬಿಣದ ವಸ್ತುಗಳ ಹರಾಜಿಗೆ ಟೆಂಡರ್ ಕರೆಯಲಾಯಿತು. ಈ ವೇಳೆ ಹಳೇ ಕಬ್ಬಿಣದ ವಸ್ತುಗಳ ಖರೀದಿಗೆ ಸಾಕಷ್ಟು ಪೈಪೋಟಿ ಏರ್ಪಟ್ಟಿತು.
ಸರಕಾರಿ ಕಚೇರಿ ನಿರುಪಯುಕ್ತ ಕಬ್ಬಿಣಕ್ಕೆ ಲಕ್ಷ ಲಕ್ಷ ಬೇಡಿಕೆ ವ್ಯಕ್ತವಾಯಿತು. ಮುಂಜಾನೆಯಿಂದಲೇ ಟೆಂಡರ್ನಲ್ಲಿ ಠೇವಣಿ ಕಟ್ಟಲು ಠೇವಣಿದಾರರು ಮುಗಿಬಿದ್ದರು. ಚನ್ನಪಟ್ಟಣ ಅಲ್ಲದೇ ಅಕ್ಕಪಕ್ಕದ ಜಿಲ್ಲೆಯ ಜನತೆಯೂ ಸಹ ಟೆಂಡರ್ನಲ್ಲಿ ಭಾಗಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ