ರಾಮನಗರ, ಆಗಸ್ಟ್ 13: ಆಗಸ್ಟ್ ತಿಂಗಳಾಂತ್ಯಕ್ಕೆ ಜಾರಿಯಾಗಲಿರುವ ಗೃಹಲಕ್ಷ್ಮೀ ಯೋಜನೆಯ ಪೋಸ್ಟರ್ (Gruha Lakshmi Scheme Poster) ಇದೀಗ ಆಕ್ಷೇಪಕ್ಕೆ ಕಾರಣವಾಗಿದೆ. ಫೋಟೋದಲ್ಲಿ ವಯಸ್ಸಾದ ಹಿಂದೂ ಮಹಿಳೆಯರ ಜಾತಿವಾರು ಫೋಟೋಗಳನ್ನು ಹಾಕಿದರೆ, ಕೆಲವು ಕಡೆಗಳಲ್ಲಿ ಮುಸ್ಲಿಂ ಯುವತಿಯ ಫೋಟೋ ಹಾಕಿದ್ದಾರೆ. ಈ ಮುಸ್ಲಿಂ ಯುವತಿ ನಿಜವಾಗಲೂ ಕರ್ನಾಟಕದವರಾ ಅಥವಾ ವಿದೇಶದವರಾ ಎಂಬ ಶಂಕೆ ವ್ಯಕ್ತವಾಗಿದೆ. ಇದರ ಜೊತೆಗೆ ಆಕೆಯ ಫೋಟೋ ಹಾಕಬೇಕೇ ಎಂಬ ಚರ್ಚೆ ಇಲಾಖೆ ಮಟ್ಟದಲ್ಲಿ ನಡೆಯುತ್ತಿದೆಯಾ ಎಂಬ ಅನುಮಾನ ಹುಟ್ಟುಹಾಕಿದೆ.
ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ರಾಮನಗರ ಬಿಜೆಪಿ ಸದಸ್ಯ ರಾಮಾಂಜನೇಯ, ಹೆಣ್ಣು ಮಕ್ಕಳು ಎಲ್ಲರೂ ಒಂದೆ. ಕೆಲವು ಕಡೆಗಳಲ್ಲಿ ಹಾಕಿರುವ ಪೋಸ್ಟರ್ಗಲ್ಲಿ ಮೂರು ಫೋಟೋ, ಕೆಲವು ತಾಲೂಕಿನಲ್ಲಿ ನಾಲ್ಕು ಮಹಿಳೆಯರ ಫೋಟೋ ಹಾಕುತ್ತಿದ್ದಾರೆ. ಈ ರೀತಿಯ ಹೊಲಸು ರಾಜಕಾರಣ ಮಾಡಬಾರದು ಎಂದರು.
ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗಿ
ಯೋಜನೆಯ ಫಲಾನುಭವಿ ಮನೆಯ ಹಿರಿಯ ಯಜಮಾನಿಯಾಗಿದ್ದಾಳೆ. ಆದರೆ ಈ ಪೋಸ್ಟರ್ನಲ್ಲಿರುವ ಮುಸ್ಲಿಂ ಯುವತಿಯಾಗಿದ್ದಾರೆ. ಅಲ್ಲದೆ, ಬುರ್ಖಾ ತೊಟ್ಟಿರುವ ಆಕೆ ಕರ್ನಾಟಕದವರಾ ಎಂದು ಕಂಡುಹಿಡಿಯುವುದು ಹೇಗೆ? ಮುಸ್ಲಿಂ ಯುವತಿಯನ್ನು ನಿಲ್ಲಿಸಿ ಫೋಟೋಶೂಟ್ ಮಾಡಿದ ರೀತಿ ಕಾಣಿಸುತ್ತಿಲ್ಲ. ಜೊತೆಗೆ, ಹಿಂದೂ ಹಿರಿಯರ ಜೊತೆ ಅಂದದ ಮುಸ್ಲಿಂ ಯುವತಿಯ ಫೋಟೋ ಹಾಕುವ ಯಾವ ಸಂದೇಶ ರವಾನಿಸಲು ಹೊರಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಜಾತ್ಯತೀತ ಅಂತ ಹೇಳುವವರು ಹಿಜಾಬ್ ಧರಿಸಿದ ಯುವತಿಯ ಫೋಟೋ ಯಾಕೆ ಬಳಕೆ ಮಾಡುತ್ತಿದ್ದೀರಿ ಅಂತ ಪ್ರಶ್ನಿಸಿದ ರಾಮಾಂಜನೇಯ, ಕೆಲವು ಕಡೆ ಮುಸ್ಲಿಂ ಯುವತಿ ಫೋಟೋ ಇದೆ, ಇನ್ನೂ ಕೆಲವು ಕಡೆ ಇಲ್ಲ. ಹೀಗಾಗಿ ಮುಸ್ಲಿಂ ಯುವತಿ ಕರ್ನಾಟಕದವರೋ ಅಥವಾ ಅಲ್ಲವೋ ಎಂಬ ಅನುಮಾನ ಇದೆ. ಕೂಡಲೇ ಪೋಸ್ಟರ್ ರದ್ದು ಪಡಿಸಿ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ