ಡಿಕೆ ಶಿವಕುಮಾರ್​​ ಕ್ಷೇತ್ರದಲ್ಲೇ ಇದೆಂಥಾ ದುಸ್ಥಿತಿ; ಮೈ ಮೇಲೆ ಮಲ ಸುರಿದುಕೊಂಡ ಪೌರ ಕಾರ್ಮಿಕರು

| Updated By: ವಿವೇಕ ಬಿರಾದಾರ

Updated on: Aug 22, 2023 | 8:50 PM

ಬಾಕಿ ವೇತನಕ್ಕಾಗಿ ಪೌರ ಕಾರ್ಮಿಕ ಮೈ ಮೇಲೆ ಮಲ ಸುರಿದುಕೊಂಡ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ‌ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪೌರ ಕಾರ್ಮಿಕರಿಗೆ ಕಳೆದ 15 ತಿಂಗಳ ವೇತನವನ್ನು ನೀಡದೇ ಸತಾಯಿಸುತ್ತಿದ್ದ ಆರೋಪ ಕೇಳಿಬಂದಿದೆ.

ರಾಮನಗರ: ಬಾಕಿ ವೇತನಕ್ಕಾಗಿ ಪೌರ ಕಾರ್ಮಿಕರು (Civic workers) ಮೈ ಮೇಲೆ ಮಲ ಸುರಿದುಕೊಂಡ ಘಟನೆ ಜಿಲ್ಲೆಯ ಕನಕಪುರ (Kankpur) ತಾಲೂಕಿನ‌ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಲ್ಲಹಳ್ಳಿ ಗ್ರಾಮ ಪಂಚಾಯಿತಿ (Gram Panchayati) ಅಧಿಕಾರಿಗಳು ಪೌರ ಕಾರ್ಮಿಕರಿಗೆ ಕಳೆದ 15 ತಿಂಗಳ ವೇತನವನ್ನು ನೀಡದೇ ಸತಾಯಿಸುತ್ತಿದ್ದ ಆರೋಪ ಕೇಳಿಬಂದಿದೆ. ಪೌರ ಕಾರ್ಮಿಕರು ತಮ್ಮ ವೇತನ ಕೇಳಿದರೂ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು (ಆ.22) ರಂಗಯ್ಯ, ಸುರೇಶ್ ಪೌರ ಕಾರ್ಮಿಕರು ಗ್ರಾಮ ಪಂಚಾಯಿತಿ ಬಳಿ ಬಂದು ಮೈ ಮೇಲೆ ಮಲ‌ ಸುರಿದುಕೊಂಡು ಪ್ರತಿಭಟನೆ ಮಾಡಿದ್ದಾರೆ.

ನಂತರ ಅಧಿಕಾರಿಗಳು ಕೂಡಲೇ ಒಟ್ಟು 3‌ ಲಕ್ಷ 20 ಸಾವಿರದ 800 ಬಾಕಿ ಹಣವನ್ನು ಪಾವತಿ ಮಾಡಿದ್ದಾರೆ. ಈ ಬಕ್ಕೆ ಪಿಡಿಓ ಶ್ರೀನಿವಾಸ್ ಮಾತನಾಡಿ ನಮ್ಮ ಅವಧಿಯಲ್ಲಿ ವೇತನ ಬಾಕಿ ಇರಲಿಲ್ಲ. ಈ ಹಿಂದೆ ಇದ್ದ ಅಧಿಕಾರಿಗಳು ಬಾಕಿ ಉಳಿಸಿಕೊಂಡಿದ್ದರು ಎಂದು ಹೇಳಿದರು. ಇದೇ ವೇಳೆ ಇನ್ಮುಂದೆ ಪ್ರತಿ ತಿಂಗಳು ಸರಿಯಾಗಿ ವೇತನ ಪಾವತಿ ಮಾಡುವಂತೆ ಪೌರ ಕಾರ್ಮಿಕರು ಆಗ್ರಹಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:48 pm, Tue, 22 August 23