ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿ ಮುಂದುವರಿದ ಕಳ್ಳರ ಹಾವಳಿ: ತಂತಿ ಬೇಲಿ ಕಳವು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 16, 2023 | 8:35 PM

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​​ ಹೈವೇಯಲ್ಲಿ ಕಳ್ಳರ ಹಾವಳಿ ಮುಂದುವರೆದಿದ್ದು, ಎನ್​ಹೆಚ್​ಎಐನ ತಿಟ್ಟಮಾರನಹಳ್ಳಿ ಬಳಿ ಅಳವಡಿಸಿದ್ದ 1 ಕಿಲೋ ಮೀಟರ್​ ತಂತಿ ಬೇಲಿಯನ್ನು ಕಳವು ಮಾಡಲಾಗಿದೆ. ಕಬ್ಬಿಣದ ವಿದ್ಯುತ್ ಕಂಬಗಳ ಆ್ಯಂಗ್ಲರ್​ಗಳನ್ನು ಕಿಡಿಗೇಡಿಗಳು ಕದ್ದಿಯುತ್ತಿದ್ದಾರೆ.

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿ ಮುಂದುವರಿದ ಕಳ್ಳರ ಹಾವಳಿ: ತಂತಿ ಬೇಲಿ ಕಳವು
ತಂತಿ ಬೇಲಿ ಕಳವು
Follow us on

ರಾಮನಗರ, ಆಗಸ್ಟ್​ 16: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​​ ಹೈವೇಯಲ್ಲಿ (Bengaluru-Mysuru Expressway) ಕಳ್ಳರ ಹಾವಳಿ ಮುಂದುವರೆದಿದ್ದು, ಎನ್​ಹೆಚ್​ಎಐನ ತಿಟ್ಟಮಾರನಹಳ್ಳಿ ಬಳಿ ಅಳವಡಿಸಿದ್ದ 1 ಕಿಲೋ ಮೀಟರ್​ ತಂತಿ ಬೇಲಿಯನ್ನು ಕಳವು ಮಾಡಲಾಗಿದೆ. ಕಬ್ಬಿಣದ ವಿದ್ಯುತ್ ಕಂಬಗಳ ಆ್ಯಂಗ್ಲರ್​ಗಳನ್ನು ಕಿಡಿಗೇಡಿಗಳು ಕದ್ದಿಯುತ್ತಿದ್ದಾರೆ. ತಂತಿಬೇಲಿ ಇಲ್ಲದಿರುವುದರಿಂದ ಹೆದ್ದಾರಿಯಲ್ಲಿ ಅಪಘಾತ ಸಾಧ್ಯತೆಯಿದೆ. ಜನ, ಜಾನುವಾರು ಹೆದ್ದಾರಿ ಪ್ರವೇಶಿಸಿ ಅನಾಹುತ ಆಗುವ ಆತಂಕ ಸೃಷ್ಟಿಯಾಗಿದ್ದು, ಕೂಡಲೇ ತಂತಿಬೇಲಿಯನ್ನು ಅಳವಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದರು. ಹೈವೇ ಪೆಟ್ರೋಲಿಂಗ್ ಮೂಲಕ ಕಳ್ಳತನಕ್ಕೆ ಕಡಿವಾಣ ಹಾಕಲು ಮನವಿ ಮಾಡಿದ್ದು, ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆಗೆ ಆಗ್ರಹಿಸಲಾಗಿದೆ.

ಮದ್ದೂರು ಮಂಡ್ಯಕ್ಕೆ ಬರುವ ಮಾರ್ಗ ಮಧ್ಯೆ ಸುಮಾರು 20 ಕಡೆ ತಂತಿ ಬೇಲಿಯನ್ನು ಕಳ್ಳತನ ಮಾಡುವ ಮೂಲಕ ಕಳ್ಳರು ತಮ್ಮ ಕೈಚಳಕ ತೋರಿದ್ದರು. ಪದೇ ಪದೇ ತಂತಿ ಬೇಲಿ ಕಳವು ಆಗುತ್ತಿರುವುದರಿಂದ ಪಾದಚಾರಿಗಳು, ಜಾನುವಾರುಗಳು ಹೆದ್ದಾರಿಗೆ ಪ್ರವೇಶಿಸುತ್ತಿವೆ.

ಸಕ್ಕರೆ ಲೋಡ್ ಸಮೇತ ಲಾರಿ ಮಾರಾಟ ಮಾಡುತ್ತಿದ್ದ ಚಾಲಕನ ಬಂಧನ

ಬಾಗಲಕೋಟೆ: ಸಕ್ಕರೆ ಲೋಡ್ ಸಮೇತ ಲಾರಿ ಮಾರಾಟ ಮಾಡುತ್ತಿದ್ದ ಚಾಲಕನನ್ನು ಮುಧೋಳ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಶಿಶುವಿನಾಳದ ವಿಜಯ್ ದಳವಾಯಿ ಬಂಧಿತ. 10.83 ಲಕ್ಷ ಮೌಲ್ಯದ 600 ಚೀಲ ಸಕ್ಕರೆ, 10 ಲಕ್ಷ ಮೌಲ್ಯದ ಲಾರಿ ಜಪ್ತಿ ಮಾಡಲಾಗಿದೆ. ಟ್ರಾನ್ಸ್​​ಪೋರ್ಟ್​​ ಉದ್ಯಮಿ ಸಂತೋಷ್ ನೀರಕೇರಿ ಎನ್ನುವವರಿಗೆ ಲಾರಿ ಸೇರಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಸಿಸಿ ಟಿವಿ ನಿಷ್ಕ್ರಿಯಗೊಳಿಸಿ ATM ನಲ್ಲಿದ್ದ 14 ಲಕ್ಷ ಹಣ ಲೂಟಿ ಮಾಡಿದ ಖದೀಮರು

ನಿರಾಣಿ ಕಾರ್ಖಾನೆಯಿಂದ ಲೋಡ್​ ಮಾಡಿಕೊಂಡು ಹೋಗಿದ್ದು, ಚಿಕ್ಕಬಳ್ಳಾಪುರದ ವಿಲ್​ಕಾರ್ಟ್ ಕಂಪನಿಗೆ ಅನ್​ಲೋಡ್ ಮಾಡಬೇಕಿತ್ತು. ಆದರೆ ಜೂ.14ರಂದು ಸಕ್ಕರೆ ತುಂಬಿದ್ದ ಲಾರಿ ಸಮೇತ ನಾಪತ್ತೆಯಾಗಿದ್ದ. ಈ ಬಗ್ಗೆ ಮುಧೋಳ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಮಂಡ್ಯ: ಅನುಮಾನ ಎನ್ನುವ ಭೂತಕ್ಕೆ ಹೆಂಡ್ತಿಯನ್ನು ಕೊಂದ ಪತಿ, ಮಗನೊಂದಿಗೆ ಎಸ್ಕೇಪ್

ಮತ್ತೊಂದು ಪ್ರಕರಣದಲ್ಲಿ ಚಿನ್ನ ಕಳ್ಳತನ ಮಾಡಿದ್ದ ಮಹಿಳೆಯನ್ನು ಮುಧೋಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭಾಗವ್ವ ಯರಗುದರಿ ಬಂಧಿತ ಮಹಿಳೆ. 2.54 ಲಕ್ಷ ರೂಪಾಯಿ ಮೌಲ್ಯದ 67 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆಗಸ್ಟ್ 9ರಂದು ಮುಧೋಳ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:23 pm, Wed, 16 August 23