ರಾಯಚೂರು: ಭಗ್ನ ಪ್ರೇಮಿಯ ಹುಚ್ಚಾಟಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ, ಪೋಕ್ಸೊ ಪ್ರಕರಣದಡಿ ಆರೋಪಿ ಅರೆಸ್ಟ್​

ಆರೋಪಿಯ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಆರೋಪಿ ರಮೇಶ್​ನನ್ನ ಬಂಧಿಸಲಾಗಿದೆ. ದುರಂತ ಅಂದ್ರೆ ಮಗಳ ವಿಚಾರಗಳಿಂದ ಮಾನಸಿಕ ರೋಗಿಯಾಗಿರುವ ಮೃತ ಹಂಪಮ್ಮಳ ತಂದೆ ದೇವೆಂದ್ರ ಮಗಳ ಅಂತ್ಯಸಂಸ್ಕಾರದ ವೇಳೆ ನಗುತ್ತಿದ್ದನಂತೆ...

Important Highlight‌
ರಾಯಚೂರು: ಭಗ್ನ ಪ್ರೇಮಿಯ ಹುಚ್ಚಾಟಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ, ಪೋಕ್ಸೊ ಪ್ರಕರಣದಡಿ ಆರೋಪಿ ಅರೆಸ್ಟ್​
ಭಗ್ನ ಪ್ರೇಮಿಯ ಹುಚ್ಚಾಟಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ!
Follow us
Bhemesh Poojar
| Updated By: ಸಾಧು ಶ್ರೀನಾಥ್​

Updated on: Aug 02, 2023 | 3:07 PM

ಆಕೆ ಬಾಳಿ ಬದುಕಬೇಕಿದ್ದ ಬಾಲೆ.. ಅಪ್ರಾಪ್ತ ವಯಸ್ಸಲ್ಲೇ ಹುಚ್ಚಾಟದ ಪ್ರೇಮಿಯ (POCSO case) ಕಪಿಮುಷ್ಟಿಗೆ ಸಿಲುಕಿದ್ದಳು. ಕೊನೆಗೆ ಅತನೇ (broken lover) ಆಕೆಯ ಬಾಳಿಗೆ ಕೊಳ್ಳಿ ಇಟ್ಟಿದ್ದಾನೆ.. ಆಕೆಯ ಮದುವೆ ಮುರಿದಿದ್ದ ಕಿರಾತಕ ಕೊನೆಗೆ ಅವಳ ಅಕಾಲಿಕ ಸಾವಿಗೆ ಕಾರಣವಾಗಿದ್ದಾನೆ. ಮೃತಳ ಕುಟುಂಬದ ದುಖಃ ನೋಡಲಾಗದೇ ಸ್ಥಳೀಯರು ಭಾವುಕರಾಗಿದ್ದಾರೆ. ಬಾಳಿ ಬದುಕಬೇಕಿದ್ದ ಮಗಳ ಸ್ಥಿತಿ ಕಂಡು ಆ ಹೆತ್ತವರು ಅಕ್ಷರಶಃ ಕಂಗಾಲಾಗಿದ್ದಾರೆ. ಮುಂದೇನು ಅನ್ನೋದರ ಬಗ್ಗೆ ದಿಕ್ಕೆ ಕಾಣದಂತಾಗಿದ್ದು ಕಣ್ಣೀರಿನಲ್ಲೇ ಕಾಲ ಕಳೆಯುತ್ತಿದ್ದಾರೆ. ಹೌದು ರಾಯಚೂರು (Raichur) ತಾಲ್ಲೂಕಿನ ಅರಸಣಗಿ ಅನ್ನೋ ಗ್ರಾಮದಲ್ಲಿ ಇದೇ ಜುಲೈ 30 ರಂದು ಅದೊಂದು ಘಟನೆ ನಡೆದಿತ್ತು.

ದೇವೆಂದ್ರ-ನಾಗಮ್ಮ ಅನ್ನೋ ದಂಪತಿಯ ಮೂರನೇ ಮಗಳಾಗಿದ್ದ ಹಂಪಮ್ಮ ಅನ್ನೋ ಬಾಲಕಿಯೇ ಜೀವತೆತ್ತಿದ್ದಾಳೆ. ಈ ದಂಪತಿಗೆ ನಾಲ್ಕು ಜನ ಹೆಣ್ಮಕ್ಕಳು. ಇಬ್ಬರ ಮದುವೆಯಾಗಿದೆ..ಹಂಪಮ್ಮ ಮೂರನೇ ಮಗಳು..ಈಕೆ ಇದೇ ಗ್ರಾಮದ ಸರ್ಕಾರಿ ಶಾಲೆಯಲ್ಲಿ 8 ನೇ ತರಗತಿ ಓದುತ್ತಿರೋವಾಗ ಅದೇ ಗ್ರಾಮದ ರಮೇಶ್ ಅನ್ನೋನು ಈಕೆ ಮೇಲೆ ಕಣ್ಣು ಹಾಕಿದ್ದ..ಆಕೆ ಬೆನ್ನು ಬಿದ್ದು ಪ್ರೀತ್ಸೇ ಪ್ರೀತ್ಸೆ ಅಂತ ಕಾಟ ಕೊಡ್ತಿದ್ದ..

ಆಗ ಆತನ ಎಡಬಿಡಂಗಿ ವೈಯಾರಕ್ಕೆ ಕೊನೆಗೆ ಮರುಳಾಗಿದ್ದ ಆಕೆ ರಮೇಶ್ ಜೊತೆ ಸ್ನೇಹ ಬೆಳೆಸಿದ್ದಳು ಅಷ್ಟೇ.. ಆದ್ರೆ ಈ ವಿಚಾರ ಮನೆಯಲ್ಲಿ ಗೊತ್ತಾಗಿ ಹಂಪಮ್ಮಳ ಶಾಲೆ ಬಿಡಿಸಿದ್ರಂತೆ..ಆದ್ರೆ ದುರಂತ ಅಂದ್ರೆ ಆ ಕಿರಾತಕ ರಮೇಶ ಈ ಹಂಪಮ್ಮಳ ಮನೆ ಎದುರಿಗೆ ವಾಸವಿದ್ದ..ಎದುರು ಮನೆ ಹುಡುಗ ಆತ..ಹೀಗಾಗಿ ಆತ ನಿತ್ಯ ಆಕೆ ಜೊತೆ ಕದ್ದುಮುಚ್ಚಿ ಸಲುಗೆಯಿಂದಿದ್ದ..ಆದ್ರೆ ಕೊನೆಗೆ ಇದೇ ರಮೇಶ್ ಒಂದು ಇಡೀ ಕುಟುಂಬವನ್ನೇ ಸರ್ವನಾಶ ಮಾಡಿದ್ದಾನೆ ಎನ್ನುತ್ತಾರೆ ಮೃತಳ ಸಂಬಂಧಿ ಸುಗಪ್ಪ.

ಹೌದು..ರಮೇಶನ ಕಾಟ ಹೆಚ್ಚಾಗ್ತಿದ್ದಂತೆಯೇ ಹಂಪಮ್ಮಳ ಪೋಷಕರು ಆಕೆಗೆ ಸಂಬಂಧಿಕರ ಕಡೆಯಲ್ಲೇ ವರ ನೋಡಿದ್ರು..ಈಕೆ ಮನೆಗೆ ಬಂದು ಹಂಪಮ್ಮಳನ್ನು ಮದುವೆಗಾಗಿ ನೋಡಿಕೊಂಡು ಹೋಗಿದ್ರು..ಅವರಿಗೂ ಆಕೆ ಇಷ್ಟವಾಗಿದ್ಲು..ಆದ್ರೆ ಈ ವಿಚಾರ ತಿಳಿದ ಕಿಡಿಗೇಡಿ ರಮೇಶ ಹಂಪ್ಪಳ ಮನೆಯವರ ಜೊತೆ ಗಲಾಟೆ ಮಾಡಿದ್ದ..ಹಂಪಮ್ಮಳ ತಾಯಿ ನಾಗಮ್ಮಳನ್ನ ಕೊಲ್ತಿನಿ ಅಂತ ಕಲ್ಲು ಎತ್ತಿ ಹಾಕೋಕೆ ಹೋಗಿದ್ನಂತೆ..

ಆದ್ರೆ ಊರಿನ ಹಿರಿಯರು ಈ ಜಗಳವನ್ನ ತಿಳಿಗೊಳಿಸಿದ್ರು..ಆದ್ರೆ ಅಷ್ಟಕ್ಕೆ ಸುಮ್ಮನಾಗದ ರಾಕ್ಷಸ ಪ್ರವೃತ್ತಿಯ ರಮೇಶ ಹಂಪಮ್ಮಳನ್ನ ಮದುವೆಯಾಗಬೇಕಿದ್ದ ಹುಡುಗನ ಫೋನ್ ನಂಬರ್ ಪಡೆದಿದ್ದ..ಸೀದಾ ಆ ಹುಡುಗನ ನಂಬರ್​ಗೆ ಹಂಪ್ಪಮ್ಮ ತನ್ನ ಜೊತೆ ಮಾತನಾಡಿದ್ದ ಆಡಿಯೋಗಳು, ಆತನ ಜೊತೆಗಿದ್ದ ವಿಡಿಯೋಗಳು, ಫೋಟೊಗಳು ಹಾಗೂ ತನ್ನ ಫೋಟೊಗಳನ್ನ ಕಳುಹಿಸಿದ್ದನಂತೆ..

ಅದೊಂದೇ ಕಾರಣಕ್ಕೆ ಆಕೆಯ ಮದುವೆ ಕ್ಯಾನ್ಸಲ್ ಆಗಿತ್ತು..ಇದರಿಂದ ಹಂಪಮ್ಮಳ ತಂದೆ ದೇವೆಂದ್ರ ಶಾಕ್​ಗೆ ಒಳಗಾಗಿದ್ರು..ಮಗಳ ವಿಚಾರ ಇಷ್ಟು ದೊಡ್ಡ ಹೊಡೆತ ಕೊಟ್ತಲ್ಲ ಅಂತ ಹಂಪಮ್ಮಳ ತಂದೆ ದೇವೆಂದ್ರ ಏಕಾಏಕಿ ಹಾಸಿಗೆ ಹಿಡಿದಿದ್ದರು..ಮಾನಸಿಕ ಸ್ಥಿಮತ ಕಳೆದುಕೊಂಡು ಆಸ್ಪತ್ರೆ ಸೇರಿದ್ರು..

ಇದನ್ನೂ ಓದಿ: Noisy bike silencers: ಇದಪ್ಪಾ ಪೊಲೀಸ್​​ ವರಸೆ -ಹತ್ತಾರು ಬೈಕ್ ಸೈಲನ್ಸರ್​​ ಮೇಲೆ ಬೀದರ್ ಪೊಲೀಸರು ರೋಲರ್ ಹತ್ತಿಸಿಯೇ ಬಿಟ್ಟರು!

ಈ ಮಧ್ಯೆ ಮತ್ತೆ ರಮೇಶ ಹಂಪಮ್ಮಳ ಮನೆ ಸ್ಥಿತಿ ಅರ್ಥ ಮಾಡಿಕೊಳ್ಳದೇ ಕಾಟ ಕೊಡೊಕೇ ಶುರು ಮಾಡಿದ್ದ..ಮದುವೆಯಾಗೋಣ ಅಂತ ಮತ್ತೆ ದಂಬಾಲು ಬಿದ್ದಿದ್ದ..ಇದರಿಂದ ಮಾನಸಿಕವಾಗಿ ಕುಗ್ಗಿದ್ದ ಹಂಪಮ್ಮ ತನ್ನ ವಿಷಯಕ್ಕೆ ತಂದೆ ಆಸ್ಪತ್ರೆ ಸೇರಿದ್ದಾನೆ..ಇತ್ತ ರಮೇಶನ ಕಾಟ ಹೆಚ್ಚಾಗ್ತಿದೆ ಅಂತ ಇದೇ ಜುಲೈ 30 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇತ್ತ ಘಟನೆಯ ಬಳಿಕ ರಾಯಚೂರು ಮಹಿಳಾ ಠಾಣೆಯಲ್ಲಿ ಆರೋಪಿ ರಮೇಶ್ ವಿರುದ್ಧ ಪೋಕ್ಸೋ,ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಾಗಿದೆ..ಆರೋಪಿ ರಮೇಶ್​ನನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ..ದುರಂತ ಅಂದ್ರೆ ಮಗಳ ವಿಚಾರಗಳಿಂದ ಮಾನಸಿಕ ರೋಗಿಯಾಗಿರೊ ಹಂಪಮ್ಮಳ ತಂದೆ ದೇವೆಂದ್ರ ಮಗಳ ಅಂತ್ಯಸಂಸ್ಕಾರದ ವೇಳೆ ನಗುತ್ತಿದ್ದನಂತೆ..ಮಗಳು ಸತ್ತು ಹೆಣವಾಗಿರೋದು ಗೊತ್ತಾಗದ ಸ್ಥಿತಿಯಲ್ಲಿರೊ ಆ ತಂದೆಯ ಮಾನಸಿಕ ರೋದನೆ ಆ ದೇವರೇ ಬಲ್ಲ..

ರಾಯಚೂರು ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು