ರಾಯಚೂರು, ಆ.05: ರಾಯಚೂರು ಜಿಲ್ಲೆಯ ಗ್ರಾಮ ಪಂಚಾಯತಿ(Gram Panchayat) ಚುನಾವಣೆಗೂ ಧರ್ಮ ದಂಗಲ್ ಕಾಲಿಟ್ಟಿದೆ. ಮುಸ್ಲಿಂ(Muslim) ಧರ್ಮದ ವ್ಯಕ್ತಿಗೆ ಅಧ್ಯಕ್ಷಗಿರಿ ನೀಡಿದ್ದಕ್ಕೆ ಹಿಂದೂ(Hindu) ಧರ್ಮದ 15 ಜನ ಗ್ರಾ.ಪಂ. ಸದಸ್ಯರು ಏಕಕಾಲಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಆರ್ಎಚ್ ಕ್ಯಾಂಪ್ 2 ರಲ್ಲಿ ಮುಸ್ಲಿಂ ಧರ್ಮದ ಕೆಲ ಕಿಡಿಗೇಡಿಗಳು ಹಿಂದೂ ಧರ್ಮದ ಜನರ ಮೇಲೆ ಹಲ್ಲೆ ನಡೆಸಿದ್ದರು. ಇದೇ ಕಾರಣಕ್ಕೆ ಅಧ್ಯಕ್ಷಗಿರಿ ವಿರೋಧಿಸಿ ಹಿಂದೂ ಸದಸ್ಯರು ರಾಜೀನಾಮೆ ನೀಡಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ನ 15 ಜನ ಗ್ರಾಮ ಪಂಚಾಯತಿ ಸದಸ್ಯರು ರಾಜೀನಾಮೆ ನೀಡಿದ್ದಾರೆ. RH 01 ಗ್ರಾಮ್ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಅಧ್ಯಕ್ಷಗಿರಿ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿತ್ತು. ಸಾಮಾನ್ಯ ವರ್ಗದವರಿದ್ದರೂ, ಅನ್ಯಕೋಮಿನ ವ್ಯಕ್ತಿ ಕಾಂಗ್ರೆಸ್ನ ರಹಮತ್ ಪಾಷಾಗೆ ಅಧ್ಯಕ್ಷಪಟ್ಟ ನೀಡಿದ್ದರು.
ಇದನ್ನೂ ಓದಿ: Viral Video: ಅಲ್ಝೈಮರ್; ‘ಅಪ್ಪಾ, ನಮ್ಮ ನೌಕಾಯಾನದ ನೆನಪಿದೆಯೇ, ಈ ಟ್ಯಾಟೂ ನೋಡಿ’
ರೆಹಮತ್ ಪಾಷಾಗೆ ಅಧ್ಯಕ್ಷಗಿರಿ ನೀಡಿದಕ್ಕೆ ಹಿಂದೂ ಸದಸ್ಯರು ಕ್ಯಾತೆ ತೆಗೆದಿದ್ದು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಆರ್ ಎಚ್ ಕ್ಯಾಂಪ್ 01 ಒಟ್ಟು 38 ಸದಸ್ಯರನ್ನ ಹೊಂದಿದ್ದು ಅದರಲ್ಲಿ ಓರ್ವ ಮಾತ್ರ ಮುಸ್ಲಿಂ ವ್ಯಕ್ತಿ ಗ್ರಾ.ಪಂ ಸದಸ್ಯರಾಗಿದ್ದಾರೆ. ಉಳಿದವರೆಲ್ಲಾ ಹಿಂದೂ ಧರ್ಮಕ್ಕೆ ಸೇರಿದ ಸದಸ್ಯರು. ಈ ಹಿನ್ನೆಲೆ ಅಸಮಾಧಾನಗೊಂಡು ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಇನ್ನೂ ನಾಲ್ಕು ಜನ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಇನ್ನು ಮತ್ತೊಂದೆಡೆ ಚಿಂಚೋಳಿ ತಾಲೂಕಿನ ಐನೊಳ್ಳಿ ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ನಾಲ್ವರು ಗ್ರಾಮ ಪಂಚಾಯಿತಿ ಸದಸ್ಯರನ್ನು ಕಾಂಗ್ರೆಸ್ ಕಾರ್ಯಕರ್ತರು ಅಪಹರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆ.7 ರಂದು ಐನೊಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಲಿದೆ. ಮಹಿಳಾ ಮೀಸಲಾತಿ ಇರುವ ಅಧ್ಯಕ್ಷ ಸ್ಥಾನಕ್ಕೆ ಏರಲು 10 ಸದಸ್ಯರ ಬೆಂಬಲ ಅವಶ್ಯಕತೆ ಇದೆ. ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಪರಿಶಿಷ್ಟ ಜಾತಿಯ (ಬಂಜಾರಾ ಹಾಗೂ ಎಸ್ಸಿ ಬಲ) ಮಹಿಳೆಯರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು ನಾಲ್ವರು ಸದಸ್ಯರ ಅಪಹರಣ ಮಾಡಲಾಗಿದೆ.
ರಾಯಚೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:14 pm, Sat, 5 August 23