ಬದುಕಿರೊ ಮಹಿಳೆ ಮೃತಪಟ್ಟಿದ್ದಾಳೆಂದು 8 ತಿಂಗಳಿಂದ ಬಡ ಮಹಿಳೆಯ ವೃದ್ಧಾಪ್ಯ ವೇತನ ಬಂದ್!
ಅಧಿಕಾರಿಗಳು, ಕಳೆದ ಡಿಸೆಂಬರ್ ನಲ್ಲಿ ಕೊನೆಯ ಬಾರಿಗೆ ಮಾಸಿಕ ಹಣ ನೀಡಿದ್ದಾರೆ. ನಂತರ 2023 ಜನವರಿಯಿಂದ ಈ ವರೆಗೆ 8 ತಿಂಗಳಿನಿಂದ ವೃದ್ಧಾಪ್ಯ ವೇತನ ಕಡಿತಗೊಳಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೇ ಶರಣಮ್ಮ ಮೃತಳಾಗಿದ್ದಾಳೆ ಎಂದು ಅಧಿಕಾರಿಗಳ ಉದ್ಧಟತನ ತೋರಿದ್ದಾರೆ. ಬಳಿಕ ಖುದ್ದು ಬದುಕಿರೊ ಶರಣಮ್ಮಳನ್ನ ಕರೆದೊಯ್ದು ಅಧಿಕಾರಿಗಳ ಮುಂದೆ ಹಾಜರು ಪಡಿಸಿದರೂ ದರ್ಪದ ಅಧಿಕಾರಿವರ್ಗ ಡೋಂಟ್ ಕೇರ್ ಅಂದಿದೆ.
ರಾಯಚೂರು, ಆಗಸ್ಟ್ 21 : ಅಧಿಕಾರಿಗಳಿಗೆ ಚೆಲ್ಲಾಟ, ವೃದ್ಧೆಗೆ ಪ್ರಾಣ ಸಂಕಟ.. ಬೇಜವಾಬ್ದಾರಿ ಅಧಿಕಾರಿಗಳು ಹಿರಿಯ ಜೀವ ಮೃತಪಟ್ಟಿದ್ದಾರೆ ಎಂದು ದಾಖಲೆ ಕೊಟ್ಟು, ಈ ವರೆಗೆ 8 ತಿಂಗಳ ವೃದ್ಧಾಪ್ಯ ವೇತನ (old age pension) ಬಂದ್ ಮಾಡಿರುವ ಪ್ರಸಂಗ ಇದಾಗಿದೆ. ಪತಿ ಮತ್ತು ಮಕ್ಕಳಿಲ್ಲದ ಅನಾಥ ವೃದ್ಧೆಯನ್ನ ಅಧಿಕಾರಿಗಳು ಸೀದಾ ಬೀದಿಗೆ ತಳ್ಳಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ (Lingasugur, Raichur) ಹಿರೆ ಉಪ್ಪೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಶರಣಮ್ಮ(69) ಅನ್ನೋ ವೃದ್ಧೆಯ ವಿಷಯದಲ್ಲಿ ಅಧಿಕಾರಿಗಳು ಈ ಮೋಸದಾಟ ನಡೆಸಿದ್ದಾರೆ. ಪತಿ, ಮಕ್ಕಳು ಇಲ್ಲದೇ ಅನಾಥಳಾಗಿ ಜೀವನ ನಡೆಸ್ತಿರೊ ಶರಣಮ್ಮಗೆ ಪ್ರತಿ ತಿಂಗಳು 1,200 ರೂಪಾಯಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದರು.
ಇದನ್ನೂ ಓದಿ: ವೃದ್ಧಾಪ್ಯ ವೇತನದಲ್ಲಿ ಗೋಲ್ಮಾಲ್; ಸಾರ್ವಜನಿಕವಾಗಿ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಶಾಸಕ
ಅಧಿಕಾರಿಗಳು, ಕಳೆದ ಡಿಸೆಂಬರ್ ನಲ್ಲಿ ಕೊನೆಯ ಬಾರಿಗೆ ಮಾಸಿಕ ಹಣ ನೀಡಿದ್ದಾರೆ. ನಂತರ 2023 ಜನವರಿಯಿಂದ ಈ ವರೆಗೆ 8 ತಿಂಗಳಿನಿಂದ ವೃದ್ಧಾಪ್ಯ ವೇತನ ಕಡಿತಗೊಳಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೇ ಶರಣಮ್ಮ ಮೃತಳಾಗಿದ್ದಾಳೆ ಎಂದು ಅಧಿಕಾರಿಗಳ ಉದ್ಧಟತನ ತೋರಿದ್ದಾರೆ. ಬಳಿಕ ಖುದ್ದು ಬದುಕಿರೊ ಶರಣಮ್ಮಳನ್ನ ಕರೆದೊಯ್ದು ಅಧಿಕಾರಿಗಳ ಮುಂದೆ ಹಾಜರು ಪಡಿಸಿದರೂ ದರ್ಪದ ಅಧಿಕಾರಿವರ್ಗ ಡೋಂಟ್ ಕೇರ್ ಅಂದಿದೆ. ಇದರಿಂದಾಗಿ ವೃದ್ಧಾಪ್ಯ ವೇತನ ಇಲ್ಲದೇ ಬೀದಿಗೆ ಬಿದ್ದಿದ್ದಾರೆ ಬಡ ವೃದ್ಧೆ! ಪ್ರಕರಣದಲ್ಕಲಿ ಒಟ್ಟಾರೆಯಾಗಿ ಲಿಂಗಸುಗೂರು ತಹಶಿಲ್ದಾರ್ ಸೇರಿ ಕೆಲ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ.
ರಾಯಚೂರು ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ