ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಪ್ರಮೋದ್​ ಮುತಾಲಿಕ್​ ಮುಂದುವರಿಕೆ, ಗೌರವಧ್ಯಕ್ಷರಾಗಿ ಸಿದ್ಧಲಿಂಗ ಸ್ವಾಮಿ ನೇಮಕ

| Updated By: ರಮೇಶ್ ಬಿ. ಜವಳಗೇರಾ

Updated on: Jul 30, 2023 | 3:20 PM

ಶ್ರೀ ರಾಮಸೇನೆಯ ಕರ್ನಾಟಕ ಅಧ್ಯಕ್ಷರನ್ನ ಬದಲಾವಣೆ ಮಾಡಲಾಗಿದೆ. ಸಿದ್ದಲಿಂಗ ಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಇನ್ನು ಸಿದ್ದಲಿಂಗ ಸ್ವಾಮಿ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಲಾಗಿದೆ.

ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಪ್ರಮೋದ್​ ಮುತಾಲಿಕ್​ ಮುಂದುವರಿಕೆ, ಗೌರವಧ್ಯಕ್ಷರಾಗಿ  ಸಿದ್ಧಲಿಂಗ ಸ್ವಾಮಿ ನೇಮಕ
ಸಿದ್ದಲಿಂಗ ಸ್ವಾಮೀಜಿ, ಪ್ರಮೋದ್ ಮುತಾಲಿಕ್
Follow us on

ಹಾವೇರಿ, (ಜುಲೈ 30): ಶ್ರೀ ರಾಮಸೇನೆ(sri rama sene) ರಾಷ್ಟ್ರೀಯ ಗೌರವಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿದೆ. ಇಂದು (ಜುಲೈ 30) ಹಾವೇರಿ ಜಿಲ್ಲೆ ಸವಣೂರು ತಾಲೂಕು ಕಾರಡಗಿ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀರಾಮ ಸೇನಾ ಪ್ರಾಂತ ಅಭ್ಯಾಸ ವರ್ಗದಲ್ಲಿ ಘೋಷಣೆ ಮಾಡಲಾಗಿದೆ. ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷರಾಗಿ ಪ್ರಮೋದ್ ಮುತಾಲಿಕ್ ಮುಂದುವರಿಯಲಿದ್ದಾರೆ. ಇನ್ನು ಶ್ರೀರಾಮಸೇನೆ ರಾಜ್ಯಾಧ್ಯಕ್ಷರಾಗಿದ್ದ ಸಿದ್ದಲಿಂಗ ಸ್ವಾಮೀಜಿ ಸ್ಥಾನಕ್ಕೆ ಗಂಗಾಧರ ಕುಲಕರ್ಣಿ ಅವರನ್ನು ನೇಮಕ ಮಾಡಿ ಪ್ರಮೋದ್ ಮುತಾಲಿ ಘೋಷಣೆ ಮಾಡಿದರು.

ಇದನ್ನೂ ಓದಿ: Pramod Muthalik: ಕಾಂಗ್ರೆಸ್ ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಪ್ರಮೋದ್ ಮುತಾಲಿಕ್; ಕಾರಣವೇನು ಗೊತ್ತಾ? 

ಶ್ರೀ ರಾಮಸೇನೆ ರಾಷ್ಟ್ರೀಯ ಗೌರವಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಸಿದ್ಧಲಿಂಗ ಸ್ವಾಮಿ, ಯಾವಾಗ ಬಿಜೆಪಿ ರಾಜ್ಯಾಧ್ಯಕ್ಷರ ಕಾರು ಅಲ್ಲಾಡಿತ್ತೋ ಹಾಗೂ 2023ರ ವಿಧಾನಸಭೆ ಚುನಾವಣೆಯಲ್ಲಿ ಹಿನಾಯವಾಗಿ ಸೋಲು ಅನುಭವಿಸಿದಾಗ ಬಿಜೆಪಿಗೆ ಕಾರ್ಯಕರ್ತರು ಮತ್ತು ಹಿಂದುತ್ವದ ಬೆಲೆ ಗೊತ್ತಾಗಿದೆ ಎಂದರು.

ಇಂದು ಉಡುಪಿಯಲ್ಲಿ ವಿದ್ಯಾರ್ಥಿನಿಯರು ವಿಡಿಯೋ ಮಾಡುತ್ತಿದ್ದಾರೆ. ಅದು ಮಕ್ಕಳ ಆಟ ಎಂದು ಗೃಹ ಸಚಿವರು ಹೇಳುತ್ತಿದ್ದಾರೆ. ಒಂದು ವೇಳೆ ಹಿಂದೂಗಳ‌ ಮೇಲೆ ಆಗುತ್ತಿರುವ ಅನ್ಯಾಯ ಮಕ್ಕಳಾಟ ಆಗಿದ್ರೆ. ಇಂದಿರಾ ಗಾಂದಿಯನ್ನು ಕೊಲೆ ಮಾಡಿದ್ದು ಕೂಡ ಮಕ್ಕಳಾಟ ಎನ್ನಬಹುದಲ್ವೇ ಎಂದು ಪ್ರಶ್ನಿಸಿದರು.

ಉಡುಪಿ ಕಾಲೇಜಿನಲ್ಲಿ ಶೌಚಾಲಯದಲ್ಲಿ ಕ್ಯಾಮರಾ ಇಡಲಾಗಿತ್ತು. ಅಲ್ಲಿ ಕ್ಯಾಮರಾ ಇಟ್ಟಿದ್ದು ಮುಸ್ಲೀಂ ಯುವಕರಲ್ಲ, ಯುವತಿಯರು. ಹಿಂದೂ ಯುವತಿಯರ ವಿಡಿಯೋಗಳು ಮುಸ್ಲೀಂ ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದಾಡಿತ್ತಿದ್ದ, ಈ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ ಆಗಬೇಕು. ಕಾಂಗ್ರೆಸ್ ನವರು ಮಹಾತ್ಮ ಗಾಂಧಿಯವರ ಆರಾಧಕರಲ್ವಾ? ಸ್ತ್ರೀ ಪೂಜ್ಯನೀಯ ಅಂದ ಗಾಂಧಿಜಿ ಎಲ್ಲಿ? ಅವರ ತತ್ವ ಅನುಸರಿಸೋ‌ ಕಾಂಗ್ರೆಸ್ ಎಲ್ಲಿ? ಇದಕ್ಕೆ ಮಕ್ಕಳಾಟ ಅಂತಾರೆ. ಹಾಗಾದರೆ ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ಆದ ಅತ್ಯಾಚಾರ ಮಕ್ಕಳಾಟಾನಾ? ಮುಂಬೈ ಅಟ್ಯಾಕ್ ನಲ್ಲಿ ಅಮಾಯಕರನ್ನು ಕೊಂದಿದ್ದು ಮಕ್ಕಳಾಟನಾ? ಹಾಗಾದರೆ ಇಂದಿರಾಗಾಂಧಿನ ಸಿಖ್ ಸೇನೆಯವರು ಹತ್ಯೆ ಮಾಡಿದ್ದು ಮಕ್ಕಳಾಟ ಅಂತ ಹೇಳಬಹುದಲ್ವಾ? ಮುಸ್ಲಿಂರಿಗಾದರೆ ಅದು ಮಕ್ಕಳಾಟ. ಮುಸ್ಲೀಂ ಪುಷ್ಟೀಕರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ನಾವು ಈ ಗ್ರಾಮದಲ್ಲಿ ಪರೇಡ್ ಮಾಡಲು ಸರ್ಕಾರ ವಿರೋಧ ಮಾಡಿದೆ. ಆದರೆ ಇಲ್ಲಿ ಶಿಬಿರ ಮಾಡಿ‌ ಪರೇಡ್ ಕೂಡಾ ಮಾಡಿದ್ದೇವೆ. ಇದು ಶ್ರೀರಾಮಸೇನೆ ತಾಕತ್ತು. ಈ ಗ್ರಾಮದಲ್ಲಿ ಮುಸ್ಲಿಮ್ ಬಹುಸಂಖ್ಯಾತ ಇದ್ದಾರೆ ಅಂತ ಸರ್ಕಾರ ವಿರೋದ ಮಾಡಿತು.ಈಗ ನಮಗೆ ಎಸ್ಕಾರ್ಟ್ ಕೊಟ್ಟಿದ್ದಾರೆ. ಇಲ್ಲಿ ಓಡಾಡುವಾಗ ಒಂದು ಕ್ಷಣ ಪಾಕಿಸ್ತಾನದಲ್ಲಿ ಇದ್ದೇವೇನೋ ಎನ್ನುವ ತರ ಭಾಸವಾಯ್ತು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:30 pm, Sun, 30 July 23