ಮಂಡ್ಯ: ಬೃಂದಾವನದಲ್ಲಿ ಐವರು ಪ್ರವಾಸಿಗರನ್ನು ಕಚ್ಚಿದ ಹುಚ್ಚುನಾಯಿ, ಬೇಜವಾಬ್ದಾರಿತನ ಪ್ರದರ್ಶಶಿಸಿದ ಅಧಿಕಾರಿಗಳು
ಹುಚ್ಚು ನಾಯಿಯ ವಿಷಯ ಗೊತ್ತಾದ ಕೂಡಲೇ ಅವರು ಬೃಂದಾವನ ಉಸ್ತುವಾರಿ ಅಧಿಕಾರಿಗಳ ಮೇಲೆ ಮುಗಿಬಿದ್ದರು. ಇದು ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿಯಲ್ಲದೆ ಮತ್ತೇನೂ ಅಲ್ಲ. ನಾಯಿ ಬೃಂದಾವನ ಪ್ರವೇಶಿಸಿದ್ದು ಗೊತ್ತಾದ ಕೂಡಲೇ ಅವರು ಕ್ರಮ ತೆಗೆದುಕೊಳ್ಳಬೇಕಿತ್ತು.
ಮಂಡ್ಯ: ಮೈಸೂರಿಗೆ ಬರುವ ಪ್ರವಾಸಿಗರೆಲ್ಲ-ಭಾರತೀಯರಾಗಿರಲಿ ಅಥವಾ ವಿದೇಶಿಯರು ತಪ್ಪದೆ ಬೃಂದಾವನಕ್ಕೆ ಭೇಟಿ ನೀಡುತ್ತಾರೆ. ಆದರೆ ಸದ್ಯಕ್ಕೆ ಕೆಆರ್ ಎಸ್ ಬೃಂದಾವನಕ್ಕೆ (KRS Brindavan) ಹೋಗಬಯಸುವವರು ಎರಡೆರಡು ಬಾರಿ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಷಯವೇನೆಂದರೆ, ಹುಚ್ಚು ನಾಯಿಯೊಂದು (mad dog) ಬೃಂದಾವನ ಹೊಕ್ಕು ಸಿಕ್ಕವರನ್ನೆಲ್ಲ ಕಚ್ಚುತ್ತಾ ಅಟ್ಟಹಾಸ ಮೆರೆಯುತ್ತಿದೆ ಮತ್ತು ಭೀತಿಯ ವಾತಾವಣವನ್ನು ಸೃಷ್ಟಿಸಿದೆ. ಲಭ್ಯವಿರುವ ಮಾಹಿತಿ ಪ್ರಕಾರ ನಾಯಿ ಈಗಾಗಲೇ ಐವರನ್ನು ಕಚ್ಚಿದ್ದು ಅವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ (private hospital) ಚಿಕಿತ್ಸೆ ಒದಗಿಸಲಾಗುತ್ತಿದೆ. ರವಿವಾರವಾದ ಕಾರಣ ನಿನ್ನೆ ಬೃಂದಾವನದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಹುಚ್ಚು ನಾಯಿಯ ವಿಷಯ ಗೊತ್ತಾದ ಕೂಡಲೇ ಅವರು ಬೃಂದಾವನ ಉಸ್ತುವಾರಿ ಅಧಿಕಾರಿಗಳ ಮೇಲೆ ಮುಗಿಬಿದ್ದರು. ಇದು ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿಯಲ್ಲದೆ ಮತ್ತೇನೂ ಅಲ್ಲ. ನಾಯಿ ಬೃಂದಾವನ ಪ್ರವೇಶಿಸಿದ್ದು ಗೊತ್ತಾದ ಕೂಡಲೇ ಅವರು ಕ್ರಮ ತೆಗೆದುಕೊಳ್ಳಬೇಕಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ