ರಂಗನತಿಟ್ಟು ಪಕ್ಷಿಧಾಮದಲ್ಲಿ ನಿರೀನ ಅಭಾವ; ಬೋಟಿಂಗ್ ಸ್ಥಗಿತ, ಪ್ರವಾಸಿಗರಲ್ಲಿ ನಿರಾಸೆ

| Updated By: Rakesh Nayak Manchi

Updated on: Aug 18, 2023 | 4:34 PM

ತಮಿಳುನಾಡು ಸರ್ಕಾರದ ಒತ್ತಡಕ್ಕೆ ಮಣಿದ ಕರ್ನಾಟಕ ಸರ್ಕಾರ, ರಾಜ್ಯದಲ್ಲಿ ನೀರಿನ ಕೊರತೆ ಕಾಡುತ್ತಿದ್ದರೂ ಕೆಆರ್​ಎಸ್ ಜಲಾಶಯದಿಂದ ಆ ರಾಜ್ಯಕ್ಕೆ ನೀರು ಹರಿಸಿದೆ. ಇದರ ಪರಿಣಾಮ, ಮಂಡ್ಯದ ರಂಗನತಿಟ್ಟು ಪಕ್ಷಿಧಾಮದಲ್ಲಿ ನೀರಿನ ಅಭಾವ ಕಾಣಿಸಿದೆ. ಇದರಿಂದಾಗಿ ತಾತ್ಕಾಲಿಕವಾಗಿ ಬೋಟಿಂಗ್ ಕೂಡ ಸ್ಥಗಿತಗೊಂಡಿದೆ.

ರಂಗನತಿಟ್ಟು ಪಕ್ಷಿಧಾಮದಲ್ಲಿ ನಿರೀನ ಅಭಾವ; ಬೋಟಿಂಗ್ ಸ್ಥಗಿತ, ಪ್ರವಾಸಿಗರಲ್ಲಿ ನಿರಾಸೆ
ನೀರಿನ ಅಭಾವ ಹಿನ್ನೆಲೆ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ತಾತ್ಕಾಲಿಕ ಸ್ಥಗಿತ
Follow us on

ಮಂಡ್ಯ, ಆಗಸ್ಟ್ 18: ನಮ್ಮ ರಾಜ್ಯದಲ್ಲಿ ನೀರಿನ ಕೊರತೆ ಕಾಣಿಸಿಕೊಂಡಿದ್ದರೂ ಕರ್ನಾಟಕ ಸರ್ಕಾರವು ತಮಿಳುನಾಡು ಸರ್ಕಾರದ ಒತ್ತಡಕ್ಕೆ ಮಣಿದು ಕೆಆರ್​ಎಸ್​​ (KRS) ಜಲಾಶಯದಿಂದ ತಮಿಳುನಾಡಿಗೆ (Tamil Nadu) ನೀರು ಹರಿಸಿದೆ. ಪರಿಣಾಮ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ರಂಗನತಿಟ್ಟು ಪಕ್ಷಿಧಾಮದಲ್ಲಿ (Ranganathittu Bird Sanctuary) ನೀರಿನ ಅಭಾವವಾಗಿ ತಾತ್ಕಾಲಿಕವಾಗಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ. ಇದರಿಂದ ಪ್ರವಾಸಿಗರು ನಿರಾಶೆಗೊಂಡಿದ್ದಾರೆ.

ಕೆಆರ್​ಎಸ್​ ಜಲಾಶಯದಿಂದ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ಪರಿಣಾಮ ರಂಗನತಿಟ್ಟು ಪಕ್ಷಿಧಾಮದಲ್ಲಿ ನೀರಿನ ಅಭಾವ ಕಾಣಿಸಿಕೊಂಡಿದೆ. ಹೀಗಾಗಿ ಬೋಟಿಂಗ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: ನೀರಿನ ಅಭಾವದ ಮಧ್ಯೆ ತಮಿಳುನಾಡಿಗೆ ನೀರು: ಕಾವೇರಿ ನಿರ್ವಹಣಾ ಪ್ರಾಧಿಕಾರ ಮೊರೆ ಹೋಗಲು ಸರ್ಕಾರ ತೀರ್ಮಾನ

ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಇದೇ ಪ್ರಮಾಣದಲ್ಲಿ ನೀರನ್ನು ತಮಿಳುನಾಡಿಗೆ ಹರಿಬಿಟ್ಟರೆ ರಾಜ್ಯದಲ್ಲಿ ನೀರಿನ ಅಭಾವ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ. ನೀರಿನ ಹರಿಯುವಿಕೆ ಪ್ರಮಾಣವನ್ನು ಒಮ್ಮಿಂದೊಮ್ಮೆ ಹೆಚ್ಚಿಸಿದ್ದರಿಂದ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್​​ಗೆ ನೀರಿನ ಕೊರತೆ ಉಂಟಾಗಿದೆ.

ಜಲಾಶಯದಿಂದ 13,145 ಕ್ಯೂಸೆಕ್ ನೀರು ನದಿಗೆ ಹರಿಯುತ್ತಿದೆ. ಜಲಾಶಯದ ಗರಿಷ್ಟ ಮಟ್ಟ 124.80 ಅಡಿಯಷ್ಟಿದ್ದು, ಸದ್ಯದಲ್ಲಿ ಜಲಾಶಯದ ಮಟ್ಟ 108.86 ರಷ್ಟಿದೆ. ಹೆಚ್ಚುವರಿ ನೀರನ್ನು ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ತಮಿಳುನಾಡು ಸರ್ಕಾರ, ಅದರಲ್ಲಿ ಯಶಸ್ವಿಯಾಗಿದೆ. ಆಗಸ್ಟ್ 13 ರ ಬೆಳಿಗ್ಗೆ 5,243 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿತ್ತು. ನಂತರ ಹೆಚ್ಚುವರಿ ನಾಲ್ಕು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ