ಕೊಪ್ಪಳ: ಕೋಟ್ಯಾಂತರ ಮೌಲ್ಯದ ವಸ್ತುವನ್ನು ಕದ್ದಿದ್ದ ಖದೀಮರು ಅಂದರ್! ಎಂಟು ಲಕ್ಷ ಹಣ ಸೇರಿ 46 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ

| Updated By: Kiran Hanumant Madar

Updated on: Aug 15, 2023 | 3:17 PM

ಅವರೆಲ್ಲ ಖತರ್ನಾಕ್ ಖದೀಮರು.  ಕಣ್ಣಿಟ್ರೆ ಸಾಕು ಸಿಕ್ಕಿದ್ದೆಲ್ಲವನ್ನು ಕ್ಷಣ ಮಾತ್ರದಲ್ಲಿ ಕಳ್ಳತನ ಮಾಡ್ತಿದ್ರು. ಸಣ್ಣ ಪುಟ್ಟದಕ್ಕೆಲ್ಲ ಕೈಹಾಕದೇ ಕೋಟಿ ಕೋಟಿ ಖಜಾನೆಯನ್ನು ಹುಡುಕುತ್ತಿದ್ದ ಖದೀಮರು ಕೊನೆಗೂ ಕೊಪ್ಪಳ ಖಾಕಿ ಬಲೆಗೆ ಬಿದ್ದಿದ್ದಾರೆ. ಇನ್ನು ಇಂಟ್ರಸ್ಟಿಂಗ್ ಅಂದರೆ, ಇವರಲ್ಲೊಬ್ಬ ಪಿಎಸ್​ಐ ಆಗಬೇಕೆಂದು ಅಂದುಕೊಂಡವನು, ಇದೀಗ ಜೈಲು ಪಾಲಾಗಿದ್ದಾನೆ.

ಕೊಪ್ಪಳ: ಕೋಟ್ಯಾಂತರ ಮೌಲ್ಯದ ವಸ್ತುವನ್ನು ಕದ್ದಿದ್ದ ಖದೀಮರು ಅಂದರ್! ಎಂಟು ಲಕ್ಷ ಹಣ ಸೇರಿ 46 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ
ಕೊಪ್ಪಳ
Follow us on

ಕೊಪ್ಪಳ, ಆ.15: ಇವರು ಅಂತಿಂತ ಖದೀಮರಲ್ಲ. ಒಮ್ಮೆ ಫ್ಲ್ಯಾನ್ ಮಾಡಿ ಫಿಲ್ಡಿಗಳಿದ್ರೆ ಸಾಕು, ಕೋಟಿ ಕೋಟಿ ಬೆಲೆ ಬಾಳುವ ವಸ್ತುಗಳನ್ನು ದೋಚಿ ಏಸ್ಕೇಪ್ ಆಗುತ್ತಿದ್ದರು. ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವದಲ್ಲದೇ ಮಹಾರಾಷ್ಟ್ರ, ಆಂದ್ರ ಪ್ರದೇಶಲ್ಲೂ ಕೈಚಳಕ ತೋರಿಸಿ, ಪೊಲೀಸರಿಗೆ ಸಣ್ಣ ಕ್ಲ್ಯೂ ಕೂಡ ಬಿಡದೇ ಏಸ್ಕೇಪ್ ಆಗುತ್ತಿದ್ದರು. ಇಂತಹ ಖತರ್ನಾಕ್​ ಕಳ್ಳರನ್ನು ಇದೀಗ ಕೊಪ್ಪಳ ಪೊಲೀಸರು(Koppala Police) ಬಂಧಿಸಿದ್ದಾರೆ. ಇನ್ನು ಈ ಖದೀಮರು ಯಾರದೋ ಮನೆ ಅಥವಾ ಜಮೀನನ್ನು ಕಳ್ಳತನ ಮಾಡುತ್ತಿರಲಿಲ್ಲ. ಬದಲಾಗಿ, ಸರ್ಕಾರಿ ಯೋಜನೆಗಳ ಪ್ರಾಜೆಕ್ಟ್​ಗಳ ಖಜಾನೆಗೆ ಕೈ ಹಾಕುತ್ತಿದ್ದರು.

ಹೌದು, ನೂರಾರು ಕೋಟಿ ಯೋಜನೆಯ ಕಾಮಗಾರಿ ಅಂದರೆ, ಅಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಇರುತ್ತವೆ ಎನ್ನುವುದನ್ನು ಮೊದಲೇ ಅರಿತಿದ್ದ ಇವರು. ಅವುಗಳನ್ನ ಟಾರ್ಗೆಟ್ ಮಾಡಿ ಫ್ಲ್ಯಾನ್ ಮಾಡುತ್ತಿದ್ದರು. ಹಾಗೇ ಕೊಪ್ಪಳ ಏತ ನೀರಾವರಿಯ ಏರಡನೇ ಹಂತದ ಪ್ರಾಜೆಕ್ಟ್ ಇವರ ಕಣ್ಣಿಗೆ ಬಿದ್ದಿತ್ತು. ಇಷ್ಟೊಂದು ದೊಡ್ಡ ಮಟ್ಟದ ಕಾಮಗಾರಿ ಅಂದರೆ, ಏನಾದರೂ ಸಿಕ್ಕೆ ಸಿಗುತ್ತೆ ಎಂದು ಸ್ಕೆಚ್ ಹಾಕಿ, ಅದರಂತೆ ಕಳೆದ ಎರಡೂ ವರ್ಷಗಳಿಂದ ಕೊಪ್ಪಳ ತಾಲೂಕಿನ ಇರಕಲ್ ಗಡ ಬಳಿಯಿರುವ ಪವರ್ ಸಬ್ ಸ್ಟೇಷನ್​ಗೆ ರಾತ್ರಿ ನುಗ್ಗುತ್ತಿದ್ದ ಖದೀಮರು, ಅಲ್ಲಿ ಕಾಮಗಾರಿಗೆ ತಂದಿದ್ದ ಬೆಲೆ ಬಾಳುವ 9 ಟನ್ ಕಾಪರ್ ಪೈಪ್, 30 ಸಾವಿರ ಲೀಟರ್ ಟ್ರಾನ್ಸಫಾರ್ಮರ್ ಇನ್ಸುಲೇಟೆಡ್ ಆಯಿಲ್, ಸೇರಿದಂತೆ ವಿವಿಧ ವಸ್ತಗಳನ್ನು ಕದ್ದು ಎಸ್ಕೇಪ್ ಆಗಿದ್ದರು.

ಇದನ್ನೂ ಓದಿ:Bengaluru: ಕಿಟಕಿ ಮೂಲಕ ನುಗ್ಗಿ ಮನೆಯಲ್ಲಿದ್ದ 15ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ದೋಚಿದ ಖದೀಮರು

ಕಳ್ಳತನ ಗೊತ್ತಾಗದಿರಲು ಮಾಸ್ಟರ್​ ಪ್ಲ್ಯಾನ್; ಕೊನೆಗೂ ಅಂದರ್​​

ಅಲ್ಲದೇ ತಾವು ಕದ್ದ ಮೇಲೆ ಯಾರಿಗೂ ಗೊತ್ತಾಗಬಾರದು ಎಂದು ಟ್ರಾನ್ಸ್​ಫಾರ್ಮರ್​ಗಳನ್ನು ರೀಫಿಟ್ ಮಾಡುತ್ತಿದ್ದರು.‌ ಇದರಿಂದ ಎರಡೂ ವರ್ಷ ಕಳೆದ್ರು, ಕಳ್ಳತನ ಮಾಡಿದ್ದು ಗೊತ್ತಾಗಿರಲಿಲ್ಲ. ಆದ್ರೆ, ಪ್ರಾಜೆಕ್ಟ್ ಮುಗಿಯುವುದಕ್ಕೆ ಬಂದಾಗ ಕಳ್ಳತನ ಬಯಲಾಗಿದೆ. ಹೀಗಾಗಿ ಈ ಜೂನ್​ನಲ್ಲಿ ಬೇವೂರು ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಗಂಭೀರತೆ ಅರಿತ ಕೊಪ್ಪಳ ಎಸ್ಪಿ ಯಶೋಧಾ ವಂಟಗೋಡಿ ಡಿವೈಎಸ್​ಪಿ ನೇತೃತ್ವದಲ್ಲಿ ಟೀಂ ರಚಿಸಿ, ಕೊನೆಗೂ ಅಂತರ್​ರಾಜ್ಯ ಖದೀಮರಾದ ಶೇಖ್ ನಜೀರ್, ಮಾಲೋಜಿ ಭೋಸ್ಲೆ, ನಾನಾ ಸಾಹೇಬ ಸಾಲವಾಡೆ ಎಂಬುವರನ್ನು ಹೆಡೆಮುರಿ ಕಟ್ಟಿದ್ದಾರೆ.

ಬಂಧಿತರಿಂದ 8 ಲಕ್ಷ ನಗದು ಹಣ ಸೇರಿದಂತೆ ಒಟ್ಟು 46 ಲಕ್ಷ ಮೌಲ್ಯದ ವಸ್ತುಗಳನ್ನ ಜಪ್ತಿ

ಇನ್ನು 1 ಕೋಟಿ 18 ಲಕ್ಷ ಮೌಲ್ಯದ ವಸ್ತುಗಳನ್ನ ಕದ್ದಿದ್ದ ಗ್ಯಾಂಗ್, ಅವುಗಳನ್ನು ಹೊರ ರಾಜ್ಯಗಳಲ್ಲಿ ಮಾರಾಟ ಮಾಡಿ, ಬಿಂದಾಸ್ ಆಗಿ ಲೈಪ್ ಲೀಡ್ ಮಾಡುತ್ತಿದ್ದರು. ಇನ್ನು ಈ ಖದೀಮರು ಆಂಧ್ರ ಗಡಿಯಲ್ಲಿ ಇರುವ ಮಾಹಿತಿ ಮೇರೆಗೆ ತಡ ಮಾಡದೇ ಹೋಗಿ, ಕೊಪ್ಪಳ‌ ಖಾಕಿ ಟೀಂ ಅವರನ್ನ ಲಾಕ್ ಮಾಡಿದೆ. ಸಧ್ಯ ಬಂಧಿತರಿಂದ 8 ಲಕ್ಷ ನಗದು ಹಣ ಸೇರಿದಂತೆ ಒಟ್ಟು 46 ಲಕ್ಷ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ:ಶಿವಮೊಗ್ಗದಲ್ಲಿ ಎಟಿಎಂ ದರೋಡೆಗೆ ಜೆಸಿಬಿ ಕದ್ದು ತಂದ ಖದೀಮರು, ಮುಂದೇನಾಯ್ತು?

ಖದೀಮರಲ್ಲೊಬ್ಬ ಪಿಎಸ್​ಐ ಪರೀಕ್ಷೆ ಬರೆದು ಇಂಟರ್​ವ್ಯೂವ್ ಕೂಡ ಅಟೆಂಡ್ ಮಾಡಿದ್ದ

ಸದ್ಯ ಆರೋಪಿಗಳನ್ನ ವಿಚಾರಣೆ ಮಾಡಿರುವ ಪೊಲೀಸರಿಗೆ ಇಂಟ್ರಸ್ಟಿಂಗ್ ವಿಚಾರ ಗೊತ್ತಾಗಿದೆ. ಹೌದು, ಈ ಖದೀಮರಲ್ಲೊಬ್ಬ ಪಿಎಸ್​ಐ ಪರೀಕ್ಷೆ ಬರೆದು ಇಂಟರ್ ವ್ಯೂವ್ ಕೂಡ ಅಟೆಂಡ್ ಮಾಡಿದ್ದನಂತೆ. ಅಲ್ಲದೇ ಎಲ್ಲರೂ ಪದವಿ ಪಡೆದವರೇ ಆಗಿದ್ದು, ಯಾರಿಗೂ ಸುಳಿವೇ ಬರಬಾರದು ಮತ್ತು ಯಾರ ಕಿರಿಕಿರಿಯೂ ಇರಬಾರದು ಎಂದು ಸರ್ಕಾರಿ ಪ್ರಾಜೆಕ್ಟ್​ಗಳಿಗೆ ಕೈ ಹಾಕುತ್ತಿದ್ದರಂತೆ. ಇತ್ತೀಚಿಗೆ ಕಲುಬರಗಿ ಜಿಲ್ಲೆಯ ಪವರ್ ಗ್ರಿಡ್​ನಲ್ಲಿಯೂ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಒಟ್ಟಿನಲ್ಲಿ ಸಾಕಷ್ಟು ಜಟಿಲ ಹಾಗೂ ಯಾವುದೇ ಕುರುಹುಗಳಿಲ್ಲದ ಪ್ರಕರಣ ಭೇದಿಸಿದ ಕೊಪ್ಪಳ ಪೊಲೀಸರಿಗೆ ಬಹುಮಾನ ಸಿಕ್ಕಿದೆ. ರಾಜ್ಯ ಡಿಜಿಪಿಯವರೇ ಒಂದು ಲಕ್ಷ ಬಹುಮಾನ ಘೋಷಣೆ ಮಾಡಿದ್ದಾರೆ. ಇತ್ತ ಸರ್ಕಾರಿ ಪ್ರಾಜೆಕ್ಟ್​ಗಳಿಗೆ ಕಂಟಕವಾಗಿದ್ದ ಖದೀಮರನ್ನು ಹೆಡೆಮುರಿ ಕಟ್ಟಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ