ಕೊಪ್ಪಳ: ಜೂಜಾಟದಿಂದ ಬೂದಗುಂಪಾ ಗ್ರಾಮದಲ್ಲಿ ದೊಡ್ಡ ಗಲಾಟೆ: ಇಬ್ಬರು ಕಾನ್ಸ್‌ಟೇಬಲ್‌ ಸಸ್ಪೆಂಡ್‌

| Updated By: Ayesha Banu

Updated on: Aug 24, 2023 | 2:58 PM

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ಪ್ರಕರಣ ಸಂಬಂಧ ಗಲಾಟೆ ತಡೆಯಲು ವಿಫಲ ಹಾಗೂ ಕರ್ತವ್ಯಲೋಪದಡಿಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೆ ಕಾರಟಗಿ ಠಾಣೆ ಇನ್ಸಪೆಕ್ಟರ್ ಸಿದ್ರಾಮಯ್ಯ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಬಳ್ಳಾರಿ ಐಜಿಪಿಗೆ ವರದಿ ನೀಡಿದ್ದಾರೆ.

ಕೊಪ್ಪಳ: ಜೂಜಾಟದಿಂದ ಬೂದಗುಂಪಾ ಗ್ರಾಮದಲ್ಲಿ ದೊಡ್ಡ ಗಲಾಟೆ: ಇಬ್ಬರು ಕಾನ್ಸ್‌ಟೇಬಲ್‌ ಸಸ್ಪೆಂಡ್‌
ಬೂದಗುಂಪಾ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ
Follow us on

ಕೊಪ್ಪಳ, ಆ.24: ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ಜೂಜಾಟ(Gambling) ಸಂಬಂಧ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಈ ಸಂಬಂಧ ಗಲಾಟೆ ತಡೆಯಲು ವಿಫಲ ಹಾಗೂ ಕರ್ತವ್ಯಲೋಪದಡಿಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಹೆಡ್ ಕಾನ್ಸಟೇಬಲ್ ಸುರೇಶ್ ಹಾಗೂ ಕಾನ್ಸಟೇಬಲ್ ಶ್ರೀಕಾಂತ್ ರನ್ನ ಅಮಾನತು(Suspend) ಮಾಡಿ ಕೊಪ್ಪಳ ಎಸ್ಪಿ ಯಶೋಧಾ ವಂಟಗೋಡಿ ಅವರು ಆದೇಶ ಹೊರಡಿಸಿದ್ದಾರೆ. ಅಲ್ಲದೆ ಕಾರಟಗಿ ಠಾಣೆ ಇನ್ಸಪೆಕ್ಟರ್ ಸಿದ್ರಾಮಯ್ಯ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಬಳ್ಳಾರಿ ಐಜಿಪಿಗೆ ವರದಿ ನೀಡಿದ್ದಾರೆ.

ಆ.13 ರಂದು ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ಗಲಾಟೆ ನಡೆದಿತ್ತು. ಲಕ್ಷ ಲಕ್ಷ ಹಣವಿಟ್ಟು ಇಸ್ಪೀಟ್ ಆಡುತ್ತಿದ್ದ ಜೂಜು ಅಡ್ಡೆ ಮೇಲೆ ಗ್ರಾಮಸ್ಥರು ಮತ್ತು ಪೊಲೀಸರು ಜೊತೆಗೂಡಿ ದಾಳಿ ಮಾಡಿದ್ದರು. ಈ ಸಿಟ್ಟಿನಿಂದ ದಂಧೆಕೋರರು ಗ್ರಾಮಸ್ಥರ ಜೊತೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಮೀಸಲಾತಿ ವಿಚಾರವಾಗಿ ಕಿರಿಕ್ ಮಾಡಿದ್ದರು. ಇದರಿಂದ ಎರಡೂ ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಗಲಾಟೆ ತಡೆಯಲು ವಿಫಲ ಹಾಗೂ ಕರ್ತವ್ಯಲೋಪದಡಿಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ ಎಸ್ಪಿ ಆದೇಶ ಹೊರಡಿಸಿದ್ದಾರೆ.

ಗ್ರಾಮದಲ್ಲಿ ಜರುಗಿದ ಗಲಾಟೆ ವಿಷಯದಲ್ಲಿ ಮುಂಜಾಗ್ರತೆವಹಿಸಿ, ಮಾಹಿತಿ ಸಂಗ್ರಹಿಸಿ, ಅಗತ್ಯ ಕ್ರಮ ಜರುಗಿಸುವಲ್ಲಿ ವಿಫಲರಾಗಿ ಕರ್ತವ್ಯಲೋಪ ತೋರಿಸಿದ್ದಕ್ಕಾಗಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಇನ್ನು ಇದೇ ವೇಳೆ ಕಾರಟಗಿ ಠಾಣೆ ಇನ್ಸಪೆಕ್ಟರ್ ಸಿದ್ರಾಮಯ್ಯ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಬಳ್ಳಾರಿ ಐಜಿಪಿಗೆ ವರದಿ ನೀಡಿದ್ದಾರೆ.

ಇದನ್ನೂ ಓದಿ:ಕೊಪ್ಪಳ: ಗ್ರಾ.ಪಂ ಅಧ್ಯಕ್ಷ ಸ್ಥಾನದ ಮೀಸಲಾತಿಗಾಗಿ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್​: ಜೂಜು ಅಡ್ಡೆ ಮೇಲೆ ದಾಳಿ ಮಾಡಿದ್ದರಿಂದ ಘರ್ಷಣೆ 

ಆಗಸ್ಟ್ 13 ರಂದು ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ಗುಂಪು ಘರ್ಷಣೆ ನಡೆದಿತ್ತು. ಕತ್ತಲಾಗಿತ್ತಿದ್ದಂತೆ ಗ್ರಾಮದ ಬಸವೇಶ್ವರ ವೃತ್ತದ ಬಳಿ ಎರಡೂ ಗುಂಪುಗಳು ಜಮಾಯಿಸಿ ದೊಣ್ಣೆ ಹಾಗೂ ಕಲ್ಲುಗಳಿಂದ ಹೊಡೆದಾಡಿಕೊಂಡಿದ್ದರು. ಮೊದ ಮೊದಲು ಈ ಘರ್ಷಣೆಯನ್ನ ಗ್ರಾಮದ ಗ್ರಾಮ ಪಂಚಾಯತ್ ಅಧ್ಯಕ್ಷರ ಮೀಸಲಾತಿ ವಿಚಾರವಾಗಿ ಆಗಿದೆ ಎನ್ನಲಾಗಿತ್ತು. ಬೂದಗುಂಪಾ ಗ್ರಾಮ ಪಂಚಾಯತ್ ಎರಡನೇ ಅವಧಿಯ ಅಧ್ಯಕ್ಷ ಸ್ಥಾನದ‌ ಮೀಸಲಾತಿ ಎಸ್ಟಿ ಸಮೂದಾಯಕ್ಕೆ ನಿಗದಿಯಾಗಿತ್ತು. ಆದ್ರೆ ಗ್ರಾಮದ ಕೆಲವರು ಇದನ್ನ ಪ್ರಶ್ನಿಸಿ ನ್ಯಾಯಲಯದ ಮೊರ ಹೋಗಿ ತಡಯಾಜ್ನೆ ತಂದಿದ್ದರು. ಇದ್ರಿಂದ ಮುನಿಸಿಕೊಂಡಿದ್ದ ಎಸ್ಟಿ ಸಮೂದಾಯ ತಡೆಯಾಜ್ಞೆ ತಂದವರು ನಡೆಸುತ್ತಿದ್ದ ಅಕ್ರಮ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರೊಂದಿಗೆ ದಾಳಿ ನಡೆಸಿದ್ದರು. ಇದೇ ಕಾರಣಕ್ಕೆ ಗ್ರಾಮದಲ್ಲಿ ಮಾತಿಗೆ ಮಾತು ಆಗಿ ಗಲಾಟೆ ನಡೆದಿತ್ತು. ಆದ್ರೆ ಈ ಗಲಾಟೆಯನ್ನ ಮೀಸಲಾತಿಗಾಗಿ‌ ನಡೆದಿದೆ ಹಬ್ಬಿಸಲಾಗಿತ್ತು.

ಸದ್ಯ ಪೊಲೀಸ್ ತನಿಖೆ ವೇಳೆ ಬೂದಗುಂಪಾ ಗಲಾಟೆಗೆ ಇಸ್ಪೀಟ್ ದಂಧೆಯೇ ಕಾರಣ ಎನ್ನೋದು ಬಟಾ ಬಯಲಾಗಿದೆ. ಯಾಕೆಂದ್ರೆ ಗ್ರಾಮದ ಹೊರವಲಯದಲ್ಲಿ ಕೆಲ ಪುಡಾರಿಗಳು ಟೆಂಟ್ ಹಾಕಿ ಅಕ್ರಮವಾಗಿ ಇಸ್ಪೀಟ್ ಅಡ್ಡಾಗಳ‌ನ್ನ ಮಾಡಿದ್ದರು. ಅಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಜೂಜಾಟ ನಡೆಯುತ್ತಿತ್ತು. ಇದಕ್ಕೆ ಸ್ಥಳೀಯ ಪೊಲೀಸರ ಕುಮಕ್ಕು ಕೂಡಾ ಇತ್ತು ಎಂದು ಆರೋಪಿಸಲಾಗಿತ್ತು. ಯಾಕೆಂದ್ರೆ ಗಲಾಟೆ ನಡೆಯುವ ದಿನವೇ ಪೊಲೀಸರು ‌ಜೂಜಾಟದ ಸ್ಥಳಕ್ಕೆ ಭೇಟಿ ನೀಡಿದ್ರು, ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಅಲ್ಲದೇ ಅಲ್ಲಿ ಸಾಕಷ್ಟು ದೊಣ್ಣೆಗಳನ್ನ ಸಂಗ್ರಹಿಸಿಡಲಾಗಿತ್ತು. ಇದೆಲ್ಲವೂ ನೋಡಿಯೂ ಕಾರಟಗಿ ಠಾಣೆ ಇನ್ಸಪೆಕ್ಟರ್ ಸಿದ್ದರಾಮಯ್ಯ ಮತ್ತು ಸಿಬ್ಬಂದಿ ಹಾಗೇ ವಾಪಸ್ ಬಂದಿದ್ದರು. ಹೀಗಾಗೇ ಕರ್ತವ್ಯಲೋದಡಿಯಲ್ಲಿ ಕಾರಟಗಿ ಇನ್ಸಪೆಕ್ಟರ್ ಮೇಲೆ ಶಿಸ್ತು ಕ್ರಮಕ್ಕೆ ಕೊಪ್ಪಳ ಎಸ್ಪಿ ಯಶೋಧಾ ವಂಟಗೋಡಿ, ಬಳ್ಳಾರಿ ಐಜಿಪಿಗೆ ಶಿಫಾರಸ್ಸು ಮಾಡಿದ್ದಾರೆ. ಅಲ್ಲದೇ ಹೆಡ್ ಕಾನ್ಸಟೇಬಲ್ ಸುರೇಶ್ ಕಾನ್ಸಟೇಬಲ್ ಶ್ರೀಕಾಂತರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಕೊಪ್ಪಳಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:52 pm, Thu, 24 August 23