ಕೊಪ್ಪಳ, ಆಗಸ್ಟ್ 17: ಕೊಪ್ಪಳದಲ್ಲಿ (Koppal) ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಂದ (RTO) ವಸೂಲಿ ಎಂಬುದು ಎಗ್ಗು ಸಿಗ್ಗಿಲ್ಲದೇ ಮುಂದುವರಿದಿದೆ. RTO ಅಧಿಕಾರಿಗಳ ದನ ದಾಹ , ವಸೂಲಿಗೆ (RTO Bribe) ಬ್ರೇಕ್ ಹಾಕುವವರೇ ಇಲ್ಲವಾಗಿದೆ! ಆದರೆ ಇದರಿಂದ ಮತ್ತೊಂದು ಅನಾಹುತ ಎದುರಾಗಿದೆ. ಆರ್ ಟಿಓ ಅಧಿಕಾರಿಗಳೇನೋ ಹೆದ್ದಾರಿಯಲ್ಲಿ ವಸೂಲಿ ಬಾಜಿಗೆ ಇಳಿದುಬಿಡುತ್ತಾರೆ. ಆದರೆ ಅದೇ ವೇಳೆ ಸರಿಯಾಗಿ ಅದು ಅಪಘಾತಕ್ಕೆ (Accident) ಕಾರಣವಾಗುತ್ತಿದೆಯಾ ಎಂಬ ಆತಂಕ ಅಲ್ಲಿ ಮನೆ ಮಾಡಿದೆ. ರಾಷ್ಟ್ರೀಯ ಹೆದ್ದಾರಿ 50 ರ ಮೇಲೆ ಹತ್ತಾರು ವಾಹನಗಳನ್ನ ಒಮ್ಮಲೇ ನಿಲ್ಲಿಸೋ RTO ಅಧಿಕಾರಿಗಳು ಬೃಹತ್ ಗಾತ್ರದ ವಾಹನ ನಿಲ್ಲಿಸಿಬಿಟ್ಟು ಟ್ರಾಫಿಕ್ ಜಾಮ್ ಗೆ ಕಾರಣವಾಗುತ್ತಿದ್ದಾರೆ.
ಅಲ್ಲಿ RTO ಅಧಿಕಾರಿಗಳ ದನ ದಾಹಕ್ಕೆ ಕೊನೆ ಮೊದಲೇ ಇರುವುದಿಲ್ಲ. ಎನ್ ಹೆಚ್ ಕುಷ್ಟಗಿ ಬಳಿಯಂತೂ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಕೊಪ್ಪಳ ತಾಲೂಕಿನ ಶಹಪುರ ರಾಷ್ಟ್ರೀಯ ಹೆದ್ದಾರಿ ಬಳಿ ವಾಹನಗಳನ್ನ ಯರ್ರಾಬಿರ್ರಿ ತಡೆದು ಅಧಿಕಾರಿಗಳು ಹಣ ವಸೂಲಿಗಾಗಿ ಇಳಿದುಬಿಡುತ್ತಾರೆ. ಟಿಪ್ಪರ್, ಲೋಡ್ ಲಾರಿ, ಕಂಟೇನರ್ ಹೀಗೆ ಭಾರಿ ಗಾತ್ರದ ವಾಹನಗಳು ಅಲ್ಲಿ ನಿಲುಗಡೆಯಾಗುತ್ತವೆ. ಅದಾದ ಮೇಲೆ RTO ಅಧಿಕಾರಿಗಳಿಗೆ ಹಣ ನೀಡಿ ಒಮ್ಮೆಲೆ ಮುನ್ನುಗ್ಗುವ ವಾಹನಗಳು ಹೆದ್ದಾರಿಯಲ್ಲಿ ಓವರ್ ಸ್ಪೀಡ್ ಹಾವಳಿ ಎಬ್ಬಿಸುತ್ತವೆ.
ವಾಹನಗಳ ಸ್ಪೀಡ್ ಉಪಟಳ ಹಾಗೂ RTO ಅಧಿಕಾರಿಗಳ ಹಣ ವಸೂಲಿಗೆ ಬ್ರೇಕ್ ಇಲ್ಲವಾಗಿದೆ. ಶಹಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ RTO ಅಧಿಕಾರಿ, ಸಿಬ್ಬಂದಿ ಹಾಗೂ ಹೊಮ್ ಗಾರ್ಡ್ ವಾಹನಗಳ ತಡೆದು ಹಣ ವಸೂಲಿ ಮಾಡುತ್ತಾರೆ. ಚಾಲಕರು ಪೈಪೋಟಿಯಲ್ಲಿ ಭಯಾನಕವಾಗಿ ಲಾರಿ, ಟಿಪ್ಪರ್, ಕಂಟೇನರ್ ವಾಹನಗಳನ್ನು ಓಡಿಸುತ್ತಾರೆ. ಕಳೆದ ಎರಡು ತಿಂಗಳಲ್ಲಿ ಹಿಂದೆ ಒಟ್ಟು 9 ಮಂದಿ ಇಲ್ಲಿ ಸಾವಿಗೀಡಾಗಿದ್ದರು.
ಕೊಪ್ಪಳ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ