ಹನುಮ ಜನಿಸಿದ ನಾಡು ಅಂಜನಾದ್ರಿ ಬೆಟ್ಟಕ್ಕೆ ಕಳೆದ 35 ದಿನಗಳಲ್ಲಿ ಹರಿದುಬಂದ ಕಾಣಿಕೆ ಎಷ್ಟು ಗೊತ್ತಾ?

| Updated By: Kiran Hanumant Madar

Updated on: Aug 09, 2023 | 10:32 AM

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಈ ಬೆಟ್ಟವನ್ನು ಹತ್ತಲು ಬರೊಬ್ಬರಿ 550 ಮೆಟ್ಟಿಲುಗಳನ್ನು ಏರಬೇಕು. ಜೊತೆಗೆ ಬೆಟ್ಟದ ಮೇಲಿನ ದೇವಾಲಯವು ನೋಡಲು ಆಕರ್ಷಕವಾಗಿದ್ದು, ಭಕ್ತ ಸಮೂಹವನ್ನು ಸ್ವಾಗತಿಸುತ್ತದೆ. ಅದರಂತೆ ಇದೀಗ ದೇವಸ್ಥಾನದ ಹುಂಡಿ ಎಣಿಕೆ ಮಾಡಿದ್ದು, ಕೇವಲ 35 ದಿನಗಳಲ್ಲಿ ಲಕ್ಷಾಂತರ ರೂಪಾಯಿ ಸಂಗ್ರಹವಾಗಿದೆ.

ಹನುಮ ಜನಿಸಿದ ನಾಡು ಅಂಜನಾದ್ರಿ ಬೆಟ್ಟಕ್ಕೆ ಕಳೆದ 35 ದಿನಗಳಲ್ಲಿ ಹರಿದುಬಂದ ಕಾಣಿಕೆ ಎಷ್ಟು ಗೊತ್ತಾ?
ಅಂಜನಾದ್ರಿ ಹುಂಡಿ ಎಣಿಕೆ
Follow us on

ಕೊಪ್ಪಳ, ಆ.9: ಜಿಲ್ಲೆಯ ಗಂಗಾವತಿ(Gangavati) ತಾಲೂಕಿನಲ್ಲಿರುವ ಅಂಜನಾದ್ರಿ(Anjanadri)ಯನ್ನು ಆಂಜನೇಯ ಜನ್ಮಸ್ಥಳ ಎಂದು ಕರೆಯುತ್ತಾರೆ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಆಗಮಿಸಿ ಆಂಜನೇಯನ ಕೃಪೆಗೆ ಪಾತ್ರರಾಗುತ್ತಾರೆ. ಇನ್ನು ಹನುಮ ಜಯಂತಿಯಂದು ಅದ್ದೂರಿಯಾಗಿ ಜಾತ್ರೆ ಜರುಗುತ್ತದೆ. ಇನ್ನು ಕಳೆದ ಜುಲೈ 4 ರಂದು ಹುಂಡಿ ತೆರೆಯಲಾಗಿತ್ತು. ಅಂದು 26.57 ಲಕ್ಷ ಹಣ ಹುಂಡಿಯಲ್ಲಿ ಸಂಗ್ರಹವಾಗಿತ್ತು. ಇದಾದ 35 ದಿನಗಳ ಬಳಿಕ ಅಂಜನಾದ್ರಿ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗಿದ್ದು, ಬರೊಬ್ಬರಿ 25.27 ಲಕ್ಷ ರೂಪಾಯಿ ಹುಂಡಿಯಲ್ಲಿ ಸಂಗ್ರಹವಾಗಿದೆ.

ಅಂಜನಾದ್ರಿ ಕುರಿತು ಮಾಹಿತಿ

ಅಂಜನಾದ್ರಿ ಬೆಟ್ಟಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಈ ಬೆಟ್ಟವನ್ನು ಹತ್ತಲು ಬರೊಬ್ಬರಿ 550 ಮೆಟ್ಟಿಲುಗಳನ್ನು ಏರಬೇಕು. ಜೊತೆಗೆ ಬೆಟ್ಟದ ಮೇಲಿನ ದೇವಾಲಯವು ನೋಡಲು ಆಕರ್ಷಕವಾಗಿದ್ದು, ಭಕ್ತ ಸಮೂಹವನ್ನು ಸ್ವಾಗತಿಸುತ್ತದೆ. ಈ ದೇವಾಲಯದ ಒಳಗಡೆ ಹನುಮನ ಇಷ್ಟದೇವತೆಗಳಾದ ರಾಮ ಸೀತೆಯರನ್ನು ಪೂಜಿಸಲಾಗುತ್ತದೆ. ಇನ್ನು ವಿಶೇಷವೆಂದರೆ ಈ ದೇವಾಲಯದ ಒಳಗಡೆ ಇರುವ ಅರ್ಚಕರೊಬ್ಬರು ಕನ್ನಡ ಮತ್ತು ಹಿಂದಿ ಎರಡು ಭಾಷೆಗಳಲ್ಲಿ ಈ ಸ್ಥಳದ ಮಹಿಮೆಯನ್ನು ಚೆನ್ನಾಗಿ ತಿಳಿಸಿ ಕೊಡುತ್ತಾರೆ.

ಇದನ್ನೂ ಓದಿ:Temple Hundi | ದೇವಾಲಯದ ಹುಂಡಿ ಎಣಿಕೆ: ಒಂದೇ ತಿಂಗಳಲ್ಲಿ‌ ಕೋಟ್ಯಾಧೀಶ್ವರನಾದ ನಂಜುಂಡೇಶ್ವರ, ಮಲೆ ಮಹದೇಶ್ವರ

ಇನ್ನು ಅಂಜನಾದ್ರಿ ಬೆಟ್ಟದ ವಿಹಂಗಮ ದೃಶ್ಯಗಳು, ಬೆರಗುಗೊಳಿಸುವ ಸೂರ್ಯಾಸ್ತದ ನೋಟಗಳು ಮತ್ತು ಪರ್ವತಗಳು ಹಾಗೂ ಬಂಡೆಗಳ ನಡುವೆ ಹರಿಯುವ ತುಂಗಭದ್ರಾ ನದಿಯ ರಮಣೀಯ ನೋಟಗಳು ಬೆಟ್ಟ ಹತ್ತಿ ಬಂದ ಭಕ್ತರ ಎಲ್ಲಾ ಆಯಾಸವನ್ನು ಮರೆಸುತ್ತದೆ. ಜೊತೆಗೆ ಇಲ್ಲಿಂದ ಹಂಪಿಯ ಅವಶೇಷಗಳು ಮತ್ತು ನೆರೆಹೊರೆಯಲ್ಲಿರುವ ಇತರ ಭವ್ಯವಾದ ಬೆಟ್ಟಗಳನ್ನು ಸಹ ವೀಕ್ಷಿಸಬಹುದಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ