ಕೊಪ್ಪಳ, ಆ.13: ಹಂಪಿ(Hampi) ಸುತ್ತಮುತ್ತ ಅಕ್ರಮವಾಗಿ ರೆಸಾರ್ಟ್ ನಡೆಸುತ್ತಿದ್ದ 11 ರೆಸಾರ್ಟ್ ಮಾಲೀಕರು ಹಾಗೂ ಭೂಮಾಲೀಕರ ವಿರುದ್ದ ಕೊಪ್ಪಳ ಜಿಲ್ಲೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಂಪಿ ಪ್ರದೇಶ ನಿರ್ವಹಣಾ ಪ್ರಾಧಿಕಾರದಿಂದ ಅನುಮತಿ ಪಡೆಯದೆ ರೆಸಾರ್ಟ್ ನಡೆಸ್ತಿದ್ದ ಹಿನ್ನೆಲೆ ದೂರು ಸಲ್ಲಿಸಲಾಗಿದೆ. ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆಯದೇ ರೇಸಾರ್ಟ್ ನಡೆಸುತ್ತಿದ್ದರು. ಈ ಹಿನ್ನಲೆ ಅಧಿಕಾರಿಗಳು ನಿನ್ನೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ ದಾಖಲಾತಿ ಪರೀಶಿಲನೆ ಮಾಡಿದ್ದರು. ಈ ವೇಳೆ ಅನುಮತಿ ಪಡೆಯದೆ ಅಕ್ರಮವಾಗಿ ರೆಸಾರ್ಟ್ ನಡೆಸುತ್ತಿರುವುದು ಸಾಬೀತು ಹಿನ್ನೆಲೆ ದೂರು ದಾಖಲಿಸಿದ್ದಾರೆ.
ಹಂಪಿ ವಿಶ್ವಪರಂಪರೆ ಪ್ರಾಧಿಕಾರ ವ್ಯಾಪ್ತಿಯ ಅನಧಿಕೃತ ರೇಸಾರ್ಟ್ಗಳು ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಗಂಗಾವತಿ ತಾಲೂಕಿನ ಆನೆಗುಂದಿ ಸುತ್ತಮುತ್ತಲಿನ ಪೀಪಲ್ ಟ್ರಿ ರೇಸಾರ್ಟ್, ನೇಚರ್ ಕಾಟೇಜ್, ವೈಲ್ಡ್ ಸ್ಟೋನ್ ಸಾಣಾಪುರ, ದಿ ಕಿಂಗ್, ಲೇಜಿ ಪಾಂಡಾ, ಕೊಕೊನೆಟ್ ಟ್ರಿ ಸೇರಿದಂತೆ 11 ರೇಸಾರ್ಟ್ ಮಾಲೀಕರ ವಿರುದ್ಧ ಹಾಗೂ ರೆಸಾರ್ಟ್ನ ಭೂ ಮಾಲೀಕರ ವಿರುದ್ಧವೂ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ: Hampi: ಕಣ್ಣಿಗೆ ಕಟ್ಟುವಂತಿದೆ ಹಂಪಿಯ ಗತಕಾಲದ ವೈಭವದ AI ಚಿತ್ರಗಳು
ವಿಶ್ವ ಪಾರಂಪರಿಕ ಸ್ಥಳವಾದ ಹಂಪಿಗೆ ಸಾವಿರಾರು ಪ್ರವಾಸಿಗರು ಪ್ರತಿ ದಿನ ಭೇಟಿ ನೀಡುತ್ತಾರೆ. ಅದರಲ್ಲೂ ಹಂಪಿಗೆ ಹೆಚ್ಚಾಗಿ ಫಾರಿನರ್ಸ್ಗಳು ಭೇಟಿ ನೀಡುತ್ತಾರೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ರೆಸಾರ್ಟ್ಗಳಲ್ಲಿ ಅಕ್ರಮವಾಗಿ ಗಾಂಜಾದಂತಹ ಮಾದಕ ದ್ರವಗಳ ಸೇವನೆಯಾಗುತ್ತಿದೆ ಎಂಬ ಮಾತು ಕೇಳಿ ಬಂದಿತ್ತು. ಇನ್ನು ಅಂಜನಾದ್ರಿ ಬೆಟ್ಟದ ಬಳಿ ಕೂಡ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಧ್ವನಿ ಎತ್ತಿದ್ದರು. ಈ ಬೆನ್ನಲ್ಲೆ ನಿನ್ನೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಅಕ್ರಮವಾಗಿ ರೆಸಾರ್ಟ್ ನಡೆಸುತ್ತಿದ್ದ 11 ರೆಸಾರ್ಟ್ ಮಾಲೀಕರು ಹಾಗೂ ಭೂಮಾಲೀಕರ ವಿರುದ್ದ ದೂರು ದಾಖಲಿಸಿದ್ದಾರೆ.
ಇನ್ನು ಈ ರೀತಿ ಅಕ್ರಮವಾಗಿ ತೆರೆಯಲಾದ ರೆಸಾರ್ಟ್ಗಳ ವಿರುದ್ಧ ದೂರು ದಾಖಲಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಅಂದರೆ ಫೆಬ್ರವರಿ ತಿಂಗಳಲ್ಲಿ ಸಾಣಾಪುರದಲ್ಲಿ ಅಕ್ರಮ ರೆಸಾರ್ಟ್ ಗಳಿಗೆ ಕೊಪ್ಪಳ ಜಿಲ್ಲಾಡಳಿತ ಬೀಗ ಜಡಿದಿತ್ತು. ಹಂಪಿ, ಅಂಜನಾದ್ರಿ, ಆನೆಗೊಂದಿಗೆ ಬರುವ ವಿದೇಶಿ ಹಾಗೂ ದೇಶೀಯ ಪ್ರವಾಸಿಗರ ವಾಸ್ತವ್ಯ, ಊಟ ತಿಂಡಿಗಾಗಿ ಸಾಣಾಪುರ ಬಳಿಯಲ್ಲಿ ನಿರ್ಮಿಸಲಾಗಿದ್ದ ರೆಸಾರ್ಟ್ ಗಳು ಹಾಗೂ ಹೋಂ ಸ್ಟೇಗಳನ್ನು ಮುಚ್ಚಿಸಲಾಗಿತ್ತು.
ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:34 pm, Sun, 13 August 23