ಪಿಂಕ್ ಟು ಗ್ರೀನ್ ನೋಟು ಬದಲಾವಣೆ ಜಾಲ- ರಾಯಲ್ಪಾಡು ಪೊಲೀಸರಿಂದ 3 ಆರೋಪಿಗಳ ಬಂಧನ, ಉಳಿದ ಮೂವರಿಗಾಗಿ ಶೋಧ
ಆಂಧ್ರ ಪ್ರದೇಶದ ಚಿತ್ತೂರು ಮೂಲದ ರಾಮಾರೆಡ್ಡಿ ಹಾಗೂ ಭಾನು ಪ್ರಸಾದ್ ಎಂಬುವರ ಬಳಿ ವ್ಯವಹಾರ ಕುದುರಿಸಿದ್ದ ವಂಚಕರ ತಂಡ 10 % ಹಣ ಕೊಟ್ಟರೆ ಪಿಂಕ್ ಟು ಗ್ರೀನ್ ಕರೆನ್ಸಿ ಬದಲಾಯಿಸಿ ಕೊಡುವುದಾಗಿ ಹೇಳಿತ್ತು, ಅದರಂತೆ ಮೊದಲ ಕಂತಿನಲ್ಲಿ ಹತ್ತು ಲಕ್ಷ ರೂಪಾಯಿ ಹಣವನ್ನು ಶ್ರೀನಿವಾಸಪುರ ತಾಲ್ಲೂಕು ಲಕ್ಷ್ಮೀಪುರ ಬಳಿ ಬರಲು ಹೇಳಿದ್ದ ಹಣ ಬದಲಾವಣೆ ಜಾಲದ ರಮೇಶ್ ಹಾಗೂ ಆರು ಜನರ ತಂಡ ಹಣ ತರುತ್ತಿದ್ದಂತೆ ವ್ಯವಹಾರ ಕುದುರಿಸುವ ನೆಪದಲ್ಲಿ ಮಾತನಾಡುವ ವೇಳೆ ಪೊಲೀಸರ ಸೋಗಿನಲ್ಲಿ ಬಂದು ಅವರನ್ನು ಹೆದರಿಸಿ ಹಣ ಕಿತ್ತುಕೊಂಡು ಪರಾರಿಯಾಗಿದ್ದರು.
ಕೋಲಾರ, ಆಗಸ್ಟ್ 24: ಕೋಲಾರ ಹಾಗೂ ಆಂಧ್ರ ಗಡಿಯಲ್ಲಿ ಪಿಂಕ್ ಟು ಗ್ರೀನ್ ನೋಟು ಬದಲಾವಣೆ ದಂಧೆ (Pink to Green currency Note Exchange Network) ಜೋರಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದಿರುವ ಹಿನ್ನೆಲೆ, ಈ ನೋಟು ಬದಲಾವಣೆ ಜಾಲ ವ್ಯಾಪಕವಾಗಿದೆ. ಅದರಲ್ಲೂ ಸೆಪ್ಟೆಂಬರ್ ವರೆಗೆ ಮಾತ್ರ ಹಣ ಬದಲಾವಣೆಗೆ ಅವಕಾಶ ಇರುವ ಹಿನ್ನೆಲೆಯಲ್ಲಿ ದಂಧೆ ಜೋರಾಗಿದೆ. ಆಂಧ್ರದ ಆರು ಜನರ ತಂಡ ಹಣ ಬದಲಾವಣೆ ಮಾಡಿಕೊಡುವ ನೆಪದಲ್ಲಿ ಇದೇ ಆಗಸ್ಟ್ 17 ರಂದು ಹತ್ತು ಲಕ್ಷ ವಂಚನೆ ಮಾಡಿದೆ. ಈ ಸಂಬಂಧ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯ (Royalpadu Police) ಲಕ್ಷ್ಮೀಪುರ ಗ್ರಾಮದ ಬಳಿ ಇದೇ ಜಾಲ ಹಣ ವರ್ಗಾವಣೆ ಮಾಡಿಕೊಡಲು ಸ್ಥಳ ನಿಗದಿ ಮಾಡಿತ್ತು. ಈ ವೇಳೆ ಮೊದಲ ಹಂತದಲ್ಲಿ ಹತ್ತು ಲಕ್ಷ ಹಣ ತಂದಿದ್ದ ವೇಳೆ ಹಣ ಲಪಟಾಯಿಸಿ ತಂಡ ಪರಾರಿಯಾಗಿತ್ತು.
ಆಂಧ್ರ ಪ್ರದೇಶದ ಚಿತ್ತೂರು ಮೂಲದ ರಾಮಾರೆಡ್ಡಿ ಹಾಗೂ ಭಾನು ಪ್ರಸಾದ್ ಎಂಬುವರ ಬಳಿ ವ್ಯವಹಾರ ಕುದುರಿಸಿದ್ದ ವಂಚಕರ ತಂಡ 10 % ಹಣ ಕೊಟ್ಟರೆ ಪಿಂಕ್ ಟು ಗ್ರೀನ್ ಕರೆನ್ಸಿ ಬದಲಾಯಿಸಿ ಕೊಡುವುದಾಗಿ ಹೇಳಿತ್ತು, ಅದರಂತೆ ಮೊದಲ ಕಂತಿನಲ್ಲಿ ಹತ್ತು ಲಕ್ಷ ರೂಪಾಯಿ ಹಣವನ್ನು ಶ್ರೀನಿವಾಸಪುರ ತಾಲ್ಲೂಕು ಲಕ್ಷ್ಮೀಪುರ ಬಳಿ ಬರಲು ಹೇಳಿದ್ದ ಹಣ ಬದಲಾವಣೆ ಜಾಲದ ರಮೇಶ್ ಹಾಗೂ ಆರು ಜನರ ತಂಡ ಹಣ ತರುತ್ತಿದ್ದಂತೆ ವ್ಯವಹಾರ ಕುದುರಿಸುವ ನೆಪದಲ್ಲಿ ಮಾತನಾಡುವ ವೇಳೆ ಪೊಲೀಸರ ಸೋಗಿನಲ್ಲಿ ಬಂದು ಅವರನ್ನು ಹೆದರಿಸಿ ಹಣ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಹಣ ಕಳೆದುಕೊಂಡಿದ್ದವರು ಶ್ರೀನಿವಾಸಪುರ ತಾಲ್ಲೂಕು ರಾಯಲ್ಪಾಡು ಪೊಲೀಸರಿಗೆ ನೀಡಿದ ದೂರಿನ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ರಮೇಶ್ ಸೇರಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ, ಉಳಿದ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಕೋಲಾರ ನಗರ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ಬೈಕ್ಗಳ್ಳರ ಅರೆಸ್ಟ್
ಕೋಲಾರ ನಗರ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬೈಕ್ ಗಳನ್ನ ಕದ್ದು ಮಾರಾಟ ಮಾಡುತ್ತಿದ್ದ ಇಬ್ಬರು ಬೈಕ್ ಕಳ್ಳರನ್ನು ಬಂಧಿಸಲಾಗಿದೆ. ಬಂಧಿತರಿಂದ 10.5 ಲಕ್ಷ ಮೌಲ್ಯದ 21 ಬೈಕ್ ಗಳು ವಶಕ್ಕೆ ಪಡೆದಿಕೊಳ್ಳಲಾಗಿದೆ. ಚಿಂತಾಮಣಿ ಮೂಲದ ಮುಜೀದ್ ಪಾಷಾ, ಕೋಲಾರದ ಸಾಧಿಕ್ ಪಾಷಾ ಬಂಧಿತ ಅರೋಪಿಗಳು. ಕಳ್ಳರು ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಹಲವೆಡೆ ಕದ್ದು ಬೈಕ್ ಮಾರಾಟ ಮಾಡುತ್ತಿದ್ದರು. ಕದ್ದ ಸ್ಪ್ಲೆಂಡರ್ ಪ್ಲಸ್ ಬೈಕ್ ಗಳಿಗೆ ಪಂಚಿಂಗ್ ಟೂಲ್ಸ್ ನಿಂದ ಪಂಚ್ ಮಾಡಿ, ಹೊಸ ಕೀ ಸೆಟ್ ಹಾಗೂ ನಂಬರ್ ಪ್ಲೇಟ್ ಅಳವಡಿಸಿ ಮರು ಮಾರಾಟ ಮಾಡುತ್ತಿದ್ದರು. ಈ ಖತರ್ನಾಕ್ ಕಳ್ಳರು ಇಂಜಿನ್ ನಂಬರ್ ಚಾಸ್ಸಿಸ್ ನಂಬರ್ ಬದಲಾಯಿಸಿ ಮಾರಾಟ ಮಾಡುತ್ತಿದ್ದರು. ಈ ಬೈಕ್ ಕಳ್ಳರು ಸ್ಪ್ಲೆಂಡರ್ ಪ್ಲಸ್ ಬೈಕ್ ಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಕೋಲಾರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ