ಜೆಡಿಎಸ್ ಶಾಸಕನಿಗೆ ಕಾಂಗ್ರೆಸ್ ಗಾಳವಾ? ಸಮೃದ್ದಿಯಾಗಿ ಸತ್ಯ ಬಿಚ್ಚಿಟ್ಟ ಜೆಡಿಎಸ್ ಶಾಸಕ ಮಂಜುನಾಥ್!
ಜೆಡಿಎಸ್ ಪಕ್ಷದ 19 ಶಾಸಕರು, ಮಾಜಿ ಶಾಸಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದೇವೆ. 2-3 ದಿನ ಪ್ರವಾಸಕ್ಕೆ ಹೋಗಲಿದ್ದೇವೆ, ಜೆಡಿಎಸ್ ಬಿಟ್ಟು ಯಾರೂ ಹೋಗಲ್ಲ, ನಮ್ಮಲ್ಲಿನ ಒಗ್ಗ ಟ್ಟು ಪ್ರದರ್ಶನ ಮಾಡಲಿದ್ದೇವೆ. ರಿವರ್ಸ್ ಆಪರೇಷನ್ ನಡೀತಿದೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಿ ಪಕ್ಷಕ್ಕೆ ಡ್ಯಾಮೇಜ್ ಅಗುತ್ತದೋ ಅನ್ನೋ ಕಾರಣಕ್ಕೆ ಕಾಂಗ್ರೆಸ್ ಅಪರೇಷನ್ ನಾಟಕ ಮಾಡುತ್ತಿದೆ -ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್
ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದಲ್ಲಿ ಅಪರೇಷನ್ ಕಾಂಗ್ರೆಸ್ಗೆ ( Operation Congress) ಡಿಸಿಎಂ ಡಿ.ಕೆ. ಶಿವಕುಮಾರ್ ಗ್ರೀನ್ ಸಿಗ್ನಲ್ ನೀಡಿದ್ದು, ಕೋಲಾರದಲ್ಲೂ ಸಹ ಕೈ ಅಪರೇಷನ್ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೇ ಜೆಡಿಎಸ್ ಶಾಸಕನಿಗೆ ಸ್ಥಳೀಯ ಕಾಂಗ್ರೆಸ್ ಶಾಸಕರೊಬ್ಬರು ಗಾಳ ಹಾಕಿದ್ದಾರೆ ಅನ್ನೋ ಮಾಹಿತಿ ನಿಜವಾಗಿದ್ದು ಇದನ್ನು ಸ್ವತ: ಜೆಡಿಎಸ್ ಶಾಸಕರೇ ಒಪ್ಪಿಕೊಂಡಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯಬೇರಿ ಗಳಿಸಿ ಅಧಿಕಾರಕ್ಕೆ ಬಂದಿದ್ದು, ಅದೇ ಹುಮ್ಮಸ್ಸಿನಲ್ಲಿ ಲೋಕ ಸಮರವನ್ನು ಎದುರಿಸಲು ಹಲವು ರೀತಿಯ ತಂತ್ರಗಾರಿಕೆಯನ್ನು ಮಾಡುತ್ತಿದೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಟಾಸ್ಕ್ ನೀಡಿದ್ದು ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲೇ ಬೇಕು ಎಂದು ಆದೇಶಿಸಿದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಥಳೀಯ ಶಾಸಕರಿಗೆ ಮತ್ತು ಮುಖಂಡರಿಗೆ ಟಾಸ್ಕ್ ನೀಡಿ ಕಾರ್ಯಕರ್ತರು ಹಾಗೂ ಮುಖಂಡರನ್ನು ಪಕ್ಷಕ್ಕೆ ಸೆಳೆಯುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕ ಎಂಬಂತೆ ಕೋಲಾರ ಜಿಲ್ಲೆಯ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ (Mulbagal JDS MLA Samruddhi Manjunath) ಅವರಿಗೂ ಕಾಂಗ್ರೆಸ್ ಗಾಳ ಹಾಕಿದ್ದ ಬಗ್ಗೆ ಸಮೃದ್ದಿ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ. ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ (Bangarpet Congress MLA) ಅವರ ನೇತೃತ್ವದಲ್ಲಿ ನನ್ನನ್ನು ದೆಹಲಿಗೆ ಬರುವಂತೆ ಸೂಚನೆ ನೀಡಲಾಗಿತ್ತು, ಆದರೆ ನಾನು ಹೋಗಲಿಲ್ಲ. ಕೋಲಾರದ 6 ವಿಧಾನಸಭಾ ಕ್ಷೇತ್ರಗಳ ಪೈಕಿ 4 ರಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯಗಳಿಸಿದೆ. ಉಳಿದ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷ ಗೆದ್ದಿದ್ದು, ಇದರಲ್ಲಿ ಮುಳಬಾಗಲು ಶಾಸಕ ಸಮೃದ್ದಿ ಮಂಜುನಾಥ್ ಅವರನನ್ನು ಪಕ್ಷಕ್ಕೆ ಸೆಳೆಯಲು ( Operation Hasta) ಪ್ಲಾನ್ ಮಾಡಲಾಗಿತ್ತು.
ಸಮೃದ್ದಿ ಮಂಜುನಾಥ್ ಅವರನ್ನು ದೆಹಲಿ ಮಟ್ಟದಲ್ಲಿ ಕರೆದುಕೊಂಡು ಹೋಗಿ ಅಲ್ಲಿನ ಮುಖಂಡರ ಜೊತೆ ಮಾತುಕತೆ ನಡೆಸಿ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಲು ತಯಾರು ನಡೆಸಲಾಗಿತ್ತು. ದಲಿತ ಸಮಾಜದ ಶಾಸಕರನ್ನ ಕಾಂಗ್ರೆಸ್ ಗೆ ಸೆಳೆಯಲು ಕಾಂಗ್ರೆಸ್ ಪ್ಲಾನ್ ಮಾಡುತ್ತಿದೆ, ಕಾಂಗ್ರೆಸ್ ಪಕ್ಷವು ಆಪರೇಷನ್ ಕಾಂಗ್ರೆಸ್ ಮೂಲಕ ಜೆಡಿಎಸ್ ಶಾಸಕರನ್ನ ಸೆಳೆಯುವ ಯತ್ನ ನಡೆಸುತ್ತಿದೆ. ನನಗೆ ದೆಹಲಿಗೆ ಬರುವಂತೆ ಒತ್ತಡ ಹಾಕಿದ್ರು, ನಾನು ಹೋಗಿಲ್ಲ, ಬಂಗಾರಪೇಟೆ ಕೈ ಶಾಸಕ ನಾರಾಯಣಸ್ವಾಮಿ ಮೂಲಕ ಪಕ್ಷ ಸೇರ್ಪಡೆ ಯತ್ನ ನಡೆಸಿದ್ದು, ನಾನೆಂದೂ ಜೆಡಿಎಸ್ ಪಕ್ಷ ಬಿಡುವ ಮಾತಿಲ್ಲ, ನಾನು ಜೆಡಿಎಸ್ ಪಕ್ಷದ ಶಿಸ್ತಿನ ಸಿಪಾಯಿ ಎಂದಿದ್ದಾರೆ.
ಜೆಡಿಎಸ್ ಪಕ್ಷದ 19 ಶಾಸಕರು, ಮಾಜಿ ಶಾಸಕರುಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದೇವೆ. 2-3 ದಿನ ಪ್ರವಾಸಕ್ಕೆ ಹೋಗಲಿದ್ದೇವೆ, ಜೆಡಿಎಸ್ ಬಿಟ್ಟು ಯಾರೂ ಹೋಗಲ್ಲ, ನಮ್ಮಲ್ಲಿನ ಒಗಟ್ಟು ಪ್ರದರ್ಶನ ಮಾಡಲಿದ್ದೇವೆ. ಕಾಂಗ್ರೆಸ್ ಆಪರೇಷನ್ ವರ್ಕೌಟ್ ಆಗಲ್ಲ, ರಿವರ್ಸ್ ಆಪರೇಷನ್ ನಡೀತಿದೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಿ ಪಕ್ಷಕ್ಕೆ ಡ್ಯಾಮೇಜ್ ಅಗುತ್ತದೋ ಅನ್ನೋ ಕಾರಣಕ್ಕೆ ಕಾಂಗ್ರೆಸ್ ಅಪರೇಷನ್ ನಾಟಕ ಮಾಡುತ್ತಿದೆ.
ಇದೇ ಕಾರಣಕ್ಕೆ ನಾವು ಕ್ಷೇತ್ರದ ಅನುದಾನ ಕೇಳಲು ಕೂಡಾ ಸಿಎಂ, ಅಥವಾ ಡಿಸಿಎಂ ಅವರನ್ನು ಬೇಡಿ ಮಾಡುತ್ತಿಲ್ಲ, ಒಂದು ವೇಳೆ ಅವರನ್ನು ಭೇಟಿ ಮಾಡಿ ಕ್ಷೇತ್ರದ ಅಭಿವೃದ್ದಿ ಬಗ್ಗೆ ಚರ್ಚೆ ಮಾಡಿದರೂ ಕೂಡಾ ಪಕ್ಷ ಬಿಡ್ತಾರೆ ಅನ್ನೋ ಸುದ್ದಿ ಹಬ್ಬುತ್ತದೆ ಅನ್ನೋ ಭಯಕ್ಕೆ ನಾವು ಹೋಗುತ್ತಿಲ್ಲ ಎಂದರು. ಅಲ್ಲದೆ ನೀವು ರಾಜ್ಯದಲ್ಲಿ ಯಾರನ್ನು ಕೇಳಿದ್ರು ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ಇರೋದಿಲ್ಲ ಎನ್ನುತ್ತಿದ್ದಾರೆ, ಇದೆಲ್ಲವೂ ಪಾರ್ಲಿಮೆಂಟ್ ಚುನಾವಣೆ ನಂತರ ತಿಳಿಯಲಿದೆ, ರಾಜಕಾರಣ ಒಂದುರೀತಿಯ ಐಪಿಎಲ್ ಮ್ಯಾಚ್ ಇದ್ದಂತೆ, ಯಾರು ಯಾವ ಟೀಂನ ಟೀಶರ್ಟ್ ಹಾಕಿಕೊಂಡು ಮೈದಾನಕ್ಕೆ ಇಳಿಯುತ್ತಾರೋ ಆವಾಗಷ್ಟೇ ಯಾರು ಯಾವ ಟೀಂ ಅಂತ ಗೊತ್ತಾಗೋದು! ಅಲ್ಲಿಯವರೆಗೂ ಗೊತ್ತಾಗೋದಿಲ್ಲ ಎನ್ನುವ ಮೂಲಕ ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ನಡೆಯಬಹುದು ಎಂದೂ ಅವರು ಮಾರ್ಮಿಕವಾಗಿ ಹೇಳಿದ್ದಾರೆ.
ಕೋಲಾರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ