ಕೊಡಗು, (ಆಗಸ್ಟ್ 04): ಸೆಲ್ಫಿ ತೆಗೆದುಕೊಳ್ಳುವಾಗ ಹಾರಂಗಿ ನದಿಗೆ (Harangi River) ಬಿದ್ದಿದ್ದ ಬೆಂಗಳೂರಿನ(Bengaluru) ಟ್ಯಾಟೂ ಕಲಾವಿದ ಸಂದೀಪ್ (46) ಮೃತದೇಹ ಕೊನೆಗೂ ಪತ್ತೆಯಾಗಿದೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಸಂದೀಪ್ ನಿನ್ನೆ(ಆಗಸ್ಟ್ 03) ಹಾರಂಗಿ ಜಲಾಶಯದ ಎದುರಿನ ಸೇತುವೆ ಬಳಿ ಸೆಲ್ಫಿ ತೆಗೆಯುವ ಸಂದರ್ಭದಲ್ಲಿ ಕಾಲು ಜಾರಿ ನದಿಗೆ ಬಿದ್ದಿದ್ದ. ಬಳಿಕ ವಿಷಯ ತಿಳಿದು ಕುಶಾಲನಗರದ ಅಗ್ನಿಶಾಮಕ ಸಿಬ್ಬಂದಿ ದುಬಾರೆ ರಿವರ್ ರಾಪ್ಟಿಂಗ್ ತಂಡ ನಿರಂತರ ಶೋಧ ಕಾರ್ಯ ನಡೆಸಿದ್ದು, ಇಂದು (ಆಗಸ್ಟ್ 04) ಸಂದೀಪ ಮೃತದೇಹವನ್ನು ಪತ್ತೆ ಮಾಡಿದೆ.
ಇದನ್ನೂ ಓದಿ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರವಾಸಿಗ ನೀರುಪಾಲು: ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ
ಹಾರಂಗಿ ಜಲಾಶಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಪ್ರತಿಭಟನೆಗಿಳಿದಿದ್ದು, ಸಂದೀಪ್ ಮೃತದೇಹ ತೆಗೆಯಲು ಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಸೇತುವೆ ಮೇಲೆ ಪ್ರವಾಸಿಗರನ್ನು ನಿಯಂತ್ರಿಸುವವರೆ ಇಲ್ಲ ಎಂದು ಆಕ್ರೋಶ ಹೊರಹಾಕಿದರು.
ಇನ್ನು ಈ ಬಗ್ಗೆ ಸಂದೀಪ್ ಗೆಳೆಯ ರಂಜಿತ್ ಮಾಧ್ಯಮಗಳಿಗೆ ಪ್ರಕ್ರಿಯಿಸಿದ್ದು, ಮೊದಲು ನಾವೆಲ್ಲಾ ಫೋಟೋ ತೆಗೆದುಕೊಂಡ್ವಿ. ಆ ಬಳಿಕ ಸಂದೀಪ್ ಫೋಟೋ ತೆಗೆಯಲು ಮುಂದಾದರು. ಸೇತುವೆ ಬಳಿ ನಿಂತಿದ್ದಾಗ ಕಾಲು ಜಾರಿ ನದಿಗೆ ಬಿದ್ದರು.ಬಳಿಕ ಸಂದೀಪ್‌ನನ್ನ ರಕ್ಷಿಸಲು ಸ್ಥಳೀಯರು ಪ್ರಯತ್ನಿಸಿದ್ದರು. ಆದರೆ ದುರಾದೃಷ್ಟವಶಾತ್ ಸಂದೀಪ್ ಕೊಚ್ಚಿಹೋಗಿದ್ದ ಎಂದರು.
ಇನ್ನು ಸಂದೀಪ್ ನೀರುಪಾಲು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. ಭದ್ರತಾ ಸಿಬ್ಬಂದಿ ನೇಮಿಸದೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಕೊಡಗು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಆರೋಪಿದ್ದಾರೆ. ಪ್ರವಾಸಿಗರನ್ನು ನಿಯಂತ್ರಿಸಲು ನಿನ್ನೆ ಯಾವುದೇ ಸಿಬ್ಬಂದಿ ಇರಲಿಲ್ಲ. ಇಲ್ಲಿ ಓರ್ವ ಸಿಬ್ಬಂದಿಯನ್ನು ನೇಮಿಸಿದ್ದರೆ ಈ ದುರ್ಘಟನೆ ನಡೆಯುತ್ತಿರಲಿಲ್ಲ ಎಂದಿದ್ದಾರೆ.
ಇನ್ನಷ್ಟು ಕೊಡಗು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ