ಕರ್ನಾಟಕದ ಹಲವು ಲೇಖಕರು, ಸಾಹಿತಿಗಳಿಗೆ ಜೀವ ಬೆದರಿಕೆ, ಸರ್ಕಾರದ ಮೊರೆ ಹೋದ ಬುದ್ಧಿಜೀವಿಗಳು

| Updated By: ರಮೇಶ್ ಬಿ. ಜವಳಗೇರಾ

Updated on: Aug 17, 2023 | 11:55 AM

ಕರ್ನಾಟಕದ ಲೇಖಕರು ಹಾಗೂ ಸಾಹಿತಿಗಳು ಸೇರಿದಂತೆ ಒಟ್ಟು ಹದಿನೈದಕ್ಕೂ ಹೆಚ್ಚು ಬುದ್ಧಿಜೀವಿಗಳಿಗೆ ಜೀವ ಬೆದರಿಕೆ ಹಾಕಲಾಗಿದ್ದು, ಇದೀಗ ಬುದ್ಧಿಜೀವಿಗಳು ಜೀವ ಬೆದರಿಕೆ ಪತ್ರದ ಬಗ್ಗೆ ಸೂಕ್ತ ಕ್ರಮಕೈಗೊಳ್ಳಯವಂತೆ ಗೃಹ ಸಚಿವರ ಮೊರೆ ಹೋಗಿದ್ದಾರೆ.

ಕರ್ನಾಟಕದ ಹಲವು ಲೇಖಕರು, ಸಾಹಿತಿಗಳಿಗೆ ಜೀವ ಬೆದರಿಕೆ, ಸರ್ಕಾರದ ಮೊರೆ ಹೋದ ಬುದ್ಧಿಜೀವಿಗಳು
ಗೃಹ ಸಚಿವರಿಗೆ ಬರೆದ ಪತ್ರ
Follow us on

ಬೆಂಗಳೂರು, (ಆಗಸ್ಟ್ 17): ಕರ್ನಾಟಕದ ಲೇಖಕರು ಹಾಗೂ ಸಾಹಿತಿಗಳು ಸೇರಿದಂತೆ ಒಟ್ಟು ಹದಿನೈದಕ್ಕೂ ಹೆಚ್ಚು ಬುದ್ಧಿಜೀವಿಗಳಿಗೆ(scholar) ಜೀವ ಬೆದರಿಕೆ(life threatening) ಹಾಕಲಾಗಿದೆ. ಪ್ರೊ ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಬಳಿಕ ಈಗ ಮತ್ತೆ ಕಳೆದೊಂದು ವರ್ಷದಿಂದ ಸಾಹಿತಿ, ಲೇಖಕರಿಗೆ ಜೀವ ಬೆದರಿಕೆ ಬಂದಿರುವುದು ಬುದ್ಧಿಜೀವಿಗಳು ಆತಂಕಗೊಂಡಿದ್ದಾರೆ. ಕೋಮುವಾದ, ಜಾತಿವಾದ, ಮೌಡ್ಯವಿರೋಧಿ ನಿಲುವುಳ್ಳ ಸಾಹಿತಿಗಳು ಹಾಗೂ ಬುದ್ಧಿಜೀವಿಗಳಿಗೆ ಪತ್ರದ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಇದರಿಂದ , ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಮಾನಸಿಕ ಹಿಂಸೆಗೊಳಗಾಗಿದ್ದು, ಯಾವ ಸಂದರ್ಭದಲ್ಲಾದರೂ ತಮ್ಮ ಮೇಲೆ ದಾಳಿಯಾಗಬಹುದು ಎನ್ನುವ ಆತಂಕದಲ್ಲಿದ್ದಾರೆ.ಈ ಹಿನ್ನೆಲೆಯಲ್ಲಿ ಸಾಹಿತಿ, ಲೇಖಕರು ತಮಗೆ ರಕ್ಷಣೆ ನೀಡಬೇಕೆಂದು ಸರ್ಕಾರದ ಮೊರೆ ಹೋಗಿದ್ದಾರೆ.

ಪ್ರೊ ಕೆ ಮರಳಸಿದ್ದಪ್ಪ, ಪ್ರೊ ಎಸ್ ಜಿ ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ, ಕುಂ ವಿರಭದ್ರಪ್ಪ ಸೇರಿದಂತೆ ಒಟ್ಟು 15 ಜನ ಲೇಖಕರು ಹಾಗೂ ಸಾಹಿತಿಗಳಿಗೆ ಬೆದರಿಕೆ ಪತ್ರ ಬಂದಿದೆ. ಈ ಬಗ್ಗೆ ಗೃಹ ಸಚಿವ ಡಾ ಜಿ ಪರಮೇಶ್ವರ್​ ಅವರಿಗೆ ಪತ್ರ ಬರೆದಿದ್ದು, ಸಾಹಿತಿ ಲೇಖರ ಮೇಲಿನ ಜೀವ ಬೆದರಿಕೆ ಗಂಭಿರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಈ ಬಗ್ಗೆ ಚರ್ಚೆಗೆ ಅವಾಕಶ ನೀಡಿ ಎಂದು ಬುದ್ಧಿಜೀವಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Karnataka Breaking Kannada News Live: ಬಸವಮೂರ್ತಿ ಮಾದಾರ ಚನ್ನಯ್ಯಶ್ರೀಗೆ ಮಾತೃ ವಿಯೋಗ

ಕೋಮುವಾದಿಗಳೇ ಪತ್ರ ಬರೆದಿದ್ದಾರೆ ಎಂದ ಮರಳುಸಿದ್ದಪ್ಪ

ಇನ್ನು ಸಾಹಿತಿ ಹಾಗೂ ಬರಹಗಾರ ಕೆ ಮರಳುಸಿದ್ದಪ್ಪ ಮಾತನಾಡಿ, ಕೋಮುವಾದ, ಜಾತಿವಾದ ಹಾಗೂ ಮೌಢ್ಯದ ವಿರುದ್ಧ ಮಾತನಾಡಿದಾಗ ಪತ್ರ ಬರುತ್ತಿದೆ. ಹದಿನೈದಕ್ಕೂ ಹೆಚ್ಚು ಜನರಿಗೆ ಬೆದರಿಕೆ ಪತ್ರ ಬಂದಿವೆ. ಪ್ರೊ ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಬಳಿಕ ನಿಮ್ಮನ್ನ ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಹೀಗಾಗಿ ಸರ್ಕಾರ ಹಾಗೂ ಗೃಹ ಸಚಿವರ ಗಮನಕ್ಕೆ ತಂದಿದ್ದೇವೆ. ಒಂದೇ ಬಗೆಯಲ್ಲಿ ಒಂದೇ ರೀತಿಯಲ್ಲಿ ಎಲ್ಲರಿಗೂ ಪತ್ರ ಬರುತ್ತಿವೆ. ಸರ್ಕಾರದ ಬದಲಾದ ಮೇಲೂ ನಮಗೆ ಎರಡು ಸರಿ ಜೀವ ಬೆದರಿಕೆ ಪತ್ರ ಬಂದಿವೆ. ಈ ಕೃತ್ಯದ ಹಿಂದೆ ಒಂದು ಗುಂಪಿದೆ. ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಹತ್ಯೆಯ ಗುಂಪು ಕೂಡಾ ಈ ಕೃತ್ಯದ ಹಿಂದೆ ಇರಬಹುದು. ಈ ಬಗ್ಗೆ ಸೂಕ್ತವಾದ ತನಿಖೆ ಮಾಡಬೇಕು ಕ್ರಮ ತಗೆದುಕೊಳ್ಳಬೇಕು. ಬರವಣಿಗೆಗೆ ಬೇಕಾದ ಒಂದು ನೆಮ್ಮದಿ ಇಲ್ಲವಾಗಿದೆ. ಕೋಮುವಾದಿಗಳೇ ಈ ಪತ್ರ ಬರೆಯುತ್ತಿದ್ದಾರೆ. ಗೃಹ ಸಚಿವರು ಈ ಶನಿವಾರ ಭೇಟಿಗೆ ಅವಕಾಶ ಕೊಟ್ಟಿದ್ದು,. ಹದಿನೈದಕ್ಕು ಹೆಚ್ಚು ಜನರು ಗೃಹ ಸಚಿವರ ಜೊತೆ ಚರ್ಚಿಸಿ ಮನವಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಬೆದರಿಕೆ ಪತ್ರದಿಂದ ಸಾಹಿತಿ ಎಸ್ ಜಿ ಸಿದ್ದರಾಮಯ್ಯ ಆತಂಕ

ಇನ್ನು ಈ ಬಗ್ಗೆ ಸಾಹಿತಿ ಎಸ್ ಜಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ವಹಿಸಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎರಡು ಸರಿ ಪತ್ರ ಬೆದರಿಕೆ ಬಂದಿದೆ. ಸುಮಾರು ಹದಿನೈದು ಜನರಿಗೆ ಜೀವ ಬೆದರಿಕೆ ಪತ್ರ ಬರೆದಿದ್ದಾರೆ. ಇದರಿಂದ ನಮ್ಮ ಕುಟಂಬದವರಿಗೆ ಆತಂಕ ಎದುರಾಗಿದೆ. ಹೊರಗಡೆ ಬಂದ್ರೆ ಸಾಕು ಮನೆಯಲ್ಲಿ ಭಯ ಆತಂಕ ಪಡುತ್ತಾರೆ. ಎಲ್ಲರಿಗೂ ಒಂದೆ ಕೈಬರಹದ ಅಕ್ಷರದಿಂದ ಪತ್ರ ಬರುತ್ತಿದೆ. ಈ ಕೃತ್ಯದಿಂದ ಒಂದು ಗುಂಪಿದೆ ಎನ್ನುವ ಅನುಮಾನ ಇದೆ. ಇತರದ ಬೆದರಿಕೆ ಗುಂಪಿನ ಮೇಲೆ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಗೃಹ ಸಚಿವ ಪರಮೇಶ್ವರ್​ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಕೆಲ‌ ಸಾಹಿತಿಗಳು ಸಮಯ ಕೇಳಿದ್ದಾರೆ, ಸಮಯ ನೀಡಿ ಭೇಟಿಯಾಗುತ್ತೇನೆ. ಅವರು ಬರೆದ ಪತ್ರವನ್ನ ಡಿಜಿಪಿಗೆ ಕಳುಹಿಸಿಕೊಡುತ್ತೇನೆ. ನಾವು ಎಂಎಂ ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆ ಇನ್ನೂ ಮರೆತಿಲ್ಲ. ಅಂತಹ ಸಂದರ್ಭದಲ್ಲಿ ಜೀವ ಬೆದರಿಕೆ ಬಂದಿದೆ ಅಂದ್ರೆ ಗಂಭಿರವಾಗಿ ತೆಗೆದುಕೊಳ್ಳಬೇಕಾಗುತ್ತೆ. ರಕ್ಷಣೆ ನೀಡುವಂತೆ ಈಗಾಗಲೇ ಕಮಿಷನರ್, ಡಿಜಿಪಿಗೆ ಸೂಚನೆ ಕೊಟ್ಟಿದ್ದೇನೆ. ಈ ಪ್ರಕರಣವನ್ನ ನಾವು ಗಂಭಿರ ತಗೆದುಕೊಳ್ಳುತ್ತೇವೆ. ಯಾರು ಯಾಕೆ ಬೆದರಿಕೆ ಬರೆದರು ಎಂದು ಸಾಹಿತಿಗಳನ್ನ ಭೇಟಿಯಾದ ಮೇಲೆ ಗೊತ್ತಾಗುತ್ತೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 

Published On - 11:37 am, Thu, 17 August 23