ಕಲಬುರಗಿ, (ಆಗಸ್ಟ್ 24): ಜೇವರ್ಗಿ ವಿಧಾನಸಭಾ ಕ್ಷೇತ್ರದ ಶಾಸಕ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (KKRDB) ಅಧ್ಯಕ್ಷ ಡಾ.ಅಜಯ್ ಸಿಂಗ್ (Dr Ajay Singh) ಅವರ ನಿವಾಸದ ಆವರಣದಲ್ಲೇ ವಕ್ತಿಯೋರ್ವ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರೆ. ಕಲಬುರಗಿಯ (Kalaburagi) ಶರಣನಗರದಲ್ಲಿರುವ ಡಾ.ಅಜಯ್ ಸಿಂಗ್ ನಿವಾಸದ ಆವರಣದಲ್ಲಿ ಮರಕ್ಕೆ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ವ್ಯಕ್ತಿ ಶವ ಇಂದು (ಆಗಸ್ಟ್ 24) ಪತ್ತೆಯಾಗಿದೆ. ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದ ನಿವಾಸಿ ದೇವಪ್ಪ(35) ಎಂದು ಗುರುತಿಸಲಾಗಿದೆ. ಆದ್ರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಬ್ರಹ್ಮಪುರ ಪೊಲೀಸರು ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.
ಯಾದಗಿರಿ/ಬೆಂಗಳೂರು, (ಆಗಸ್ಟ್ 24): ಯಾದಗಿರಿ ಮೂಲದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಹೃದಯಾಘಾತಕ್ಕೆ ( Heart attack) ಬಲಿಯಾಗಿದ್ದಾರೆ. ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಗೋಗಿ ಠಾಣೆ ಪೊಲೀಸ್ ಕಾನ್ಸ್ಟೇಬಲ್ ದೇವಿಂದ್ರಪ್ಪ(40) ಅವರು ಆರೋಗ್ಯ ತಪಾಸಣೆಗಾಗಿ ಬೆಂಗಳೂರಿಗೆ ಬಂದಾಗ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಕಳೆದ 3 ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದೇವಿಂದ್ರಪ್ಪ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಬಂದಾಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಕಳೆದ 16 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ದೇವಿಂದ್ರಪ್ಪಗೆ ಮೂರು ತಿಂಗಳಿನಿಂದ ಅನಾರೋಗ್ಯ ಕಾಡುತ್ತಿತ್ತಿ. ಇದರಿಂದ ಅವರು ಜೂನ್ ನಿಂದ ರಜೆಯಲ್ಲಿದ್ದರು.
ಇದನ್ನೂ ಓದಿ: ದೊಡ್ಡಬಳ್ಳಾಪುರ: ವರಮಹಾಲಕ್ಷ್ಮೀ ಹಬ್ಬಕ್ಕೆಂದು ತಾವರೆ ಹೂವು ಕೀಳಲು ಹೋಗಿ ತಂದೆ-ಮಗ ದುರಂತ ಸಾವು
Published On - 10:29 am, Thu, 24 August 23