ಮತ್ತೊಂದು ಹೊಸದಾಗಿ ಹುಟ್ಟಿಕೊಂಡ ಕೋವಿಡ್ ರೂಪಾಂತರಿ: ಕರ್ನಾಟಕದಲ್ಲಿ ಅಲರ್ಟ್, ನಿರ್ಲಕ್ಷ್ಯ ಬೇಡ ಎಂದ ಡಾಕ್ಟರ್ಸ್
ಸಾಂಕ್ರಾಮಿಕದಿಂದ ಇಡೀ ಜಗತ್ತು ಸಂಪೂರ್ಣ ಚೇತರಿಸಿಕೊಂಡಿದೆ ಎನ್ನುವಷ್ಟರಲ್ಲೇ ಹೊಸ ಕೋವಿಡ್ ರೂಪಾಂತರಿ ತಳಿಗಳು ಹುಟ್ಟಿಕೊಳ್ಳುತ್ತಿವೆ. ಜಗತ್ತನ್ನೇ ತಲ್ಲಣಗೊಳಿಸಿದ್ದ ಕೊರೊನಾ ಸಾಂಕ್ರಾಮಿಕ ಹೆಮ್ಮಾರಿ ಮತ್ತೆ ಹೆಮ್ಮಾರಿಯಾಗಿ ಒಕ್ಕರಿಸಲು ರೆಡಿಯಾಗಿದೆ. ಕಳೆದ ಒಂದು ವರ್ಷದಿಂದ ಕೋಟ್ಯಾಂತರ ಮಂದಿಯನ್ನು ಬಲಿ ಪಡೆದುಕೊಂಡು ಸೈಲೆಂಟ್ ಆಗಿದ್ದ ಹೆಮ್ಮಾರಿ ಈಗ ಮತ್ತೆ ಹೊಸ ರೂಪದಲ್ಲಿ ಒಕ್ಕರಿಸಲು ಶುರುವಾಗಿದೆ.
ಬೆಂಗಳೂರು, (ಆಗಸ್ಟ್ 21): ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿ ಎನ್ನುವಂತೆ ಕೊರೋನಾ ವೈರಸ್ (Coronavirus Virus) ಮತ್ತೆ ಒಕ್ಕರಿಸಲ ಕಾದು ಕುಳತಿದೆ. ಹೌದು…ಕೊರೊನಾ ರೂಪಾಂತರಿ EG.5 ವೈರಸ್ (COVID variant EG.5 ) ವಿದೇಶಗಳಲ್ಲಿ ಆತಂಕ ಸೃಷ್ಟಿಸಿದ್ದು, ಓಮಿಕ್ರಾನ್ ತಳಿಯ ಉಪ ತಳಿ ಎರಿಸ್ EG.5 ಹೊಸ ಅಲೆಗೆ ಕಾರಣವಾಗುವ ಆತಂಕ ಸೃಷ್ಟಿಮಾಡಿದೆ. ಸದ್ಯ ಎರಿಸ್ EG.5 ಅತಿವೇಗವಾಗಿ ಹರಡುವ ರೂಪಾಂತರವಾಗುವ ಆತಂಕ ಮನೆ ಮಾಡಿದ್ದು, ಅಮೇರಿಕಾ, ಜಪಾನ್ ಹಾಗೂ ಬ್ರಿಟನ್‌ನಲ್ಲಿ ಹೊಸ ಅಲೆ ಸೃಷ್ಟಿಸುವ ಭೀತಿ ಶುರುವಾಗಿದೆ. ಹೀಗಾಗಿ ಇತ್ತ ಕರ್ನಾಟಕದಲ್ಲೂ ಕೋವಿಡ್ ಮತ್ತೆ ಏರಿಕೆಯ ಆತಂಕ ಶುರುವಾಗಿದೆ.
ಜೂನ್ ನಲ್ಲಿ ಪತ್ತೆಯಾಗಿದ್ದ ಓಮಿಕ್ರಾನ್ ತಳಿಯ ಉಪ ತಳಿ ಎರಿಸ್ EG.5 ಈಗ ವಿದೇಶಗಳಲ್ಲಿ ಅರ್ಭಟಿಸಲು ಮುಂದಾಗಿದೆ. ಹೀಗಾಗಿ ರಾಜ್ಯದಲ್ಲಿಯೂ ಸಹ ಕೋವಿಡ್ ಮತ್ತೆ ಭಯ ಶುರುವಾಗಿದೆ. ಹೀಗಾಗಿ ಜ್ವರ, ಕೆಮ್ಮು, ಶೀತ, ಉಸಿರಾಟದ ತೊಂದರೆ, ಆಯಾಸ, ಸ್ನಾಯಿ ಸೆಳೆತ, ತಲೆನೋವು , ಗಂಟಲು ನೋವು, ಮೂಗಿನಲ್ಲಿ ಸೊರುವಿಕೆ, ವಾಕರಿಕೆ, ವಾಂತಿ ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ ಎಂದಿದ್ದಾರೆ.
ಇದನ್ನೂ ಓದಿ: ತುಳಸಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ತಿಳಿಯಿರಿ
ಸದ್ಯ ಎರಿಸ್ EG.5 ಅಮೆರಿಕಾ, ಜಾಪಾನ್ ಹಾಗೂ ಬ್ರಿಟನ್ ನಲ್ಲಿ ಹೊಸ ತಳಿ ಪತ್ತೆಯಾಗಿದ್ದು, ಅಲ್ಲಿ ಈ ರೂಪಾಂತರಿ ವೇಗವಾಗಿ ಹರಡುತ್ತಿದೆ. ಹೊಸ ವೇರಿಯೆಂಟ್‌ನ ರೋಗಲಕ್ಷಣಗಳಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಹೀಗಾಗಿ, ಆರೋಗ್ಯ ತಜ್ಞರು ಎಚ್ಚರಿಕೆಯಿಂದ ಇರಿ ಎಂದು ಎಚ್ಚರಿಕೆ ನೀಡಿದ್ದಾರೆ.
ಚಿಕ್ಕ ಪುಟ್ಟ ಲಕ್ಷಣ ಕಂಡು ಬಂದರೂ ನಿರ್ಲಕ್ಷ್ಯ ಮಾಡಬೇಡಿ ಎಂದು ಸೂಚಿಸಿದ್ದಾರೆ. ವಿದೇಶದಲ್ಲಿ ಶುರುವಾದ ಆತಂಕದಿಂದ ಇತ್ತ ಕರ್ನಾಟಕದಲ್ಲೂ ಆರೋಗ್ಯ ಇಲಾಖೆಯೂ ಮತ್ತೆ ಅಲರ್ಟ್ ಆಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:32 am, Mon, 21 August 23