ಕೊರೊನಾ ಎಫೆಕ್ಟಾ? ಹದಿನಾರರ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ದೃಷ್ಟಿದೋಷ -ಹಾವೇರಿ ಜಿಲ್ಲೆಯ 8500 ಮಕ್ಕಳಲ್ಲಿ ದೃಷ್ಟಿದೋಷ ಪತ್ತೆ

| Updated By: ಸಾಧು ಶ್ರೀನಾಥ್​

Updated on: Aug 04, 2023 | 11:07 AM

Visual impairment: ಹಾವೇರಿ ಜಿಲ್ಲೆಯ ಶಾಲಾ ಮಕ್ಕಳಲ್ಲಿ ದೃಷ್ಟಿ ದೋಷ ಸಮಸ್ಯೆ ಹೆಚ್ಚಾಗುತ್ತಿದೆ. ಕಾರಣ ಏನೆಂಬುದು ತಿಳಿದುಬಂದಿಲ್ಲ. ಮಹಾಮಾರಿ ಕೊರೊನಾ ಕಾಲದಲ್ಲಿ ಅಂಟಿಕೊಂಡ ಮೊಬೈಲ್ ಗೀಳು ಇದಕ್ಕೆ ಕಾರಣೀಭೂತವಾಗಿರಬಹುದಾ?​

ಕೊರೊನಾ ಎಫೆಕ್ಟಾ? ಹದಿನಾರರ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ದೃಷ್ಟಿದೋಷ -ಹಾವೇರಿ ಜಿಲ್ಲೆಯ 8500 ಮಕ್ಕಳಲ್ಲಿ ದೃಷ್ಟಿದೋಷ ಪತ್ತೆ
ಹದಿನಾರರ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ದೃಷ್ಟಿದೋಷ
Follow us on

ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ದೃಷ್ಟಿದೋಷ (visual impairment) ಕಂಡುಬರುತ್ತಿದೆ. ಈ ಬಗ್ಗೆ ಹಾವೇರಿ ಜಿಲ್ಲಾಡಳಿತದಿಂದ (Haveri district) ಟೆಸ್ಟ್ ಮಾಡಿಸಿದಾಗ 8 ಸಾವಿರಕ್ಕೂ ಅಧಿಕ ಮಕ್ಕಳಲ್ಲಿ ದೃಷ್ಟಿದೋಷ ಇರುವುದು ಕಂಡು ಬಂದಿದೆ. ಆದ್ರೆ ಇದಕ್ಕೆ ನಿಖರ ಕಾರಣ ಏನು ಎಂಬುದು ಇದುವರೆಗೂ ತಿಳಿದು ಬಂದಿಲ್ಲ. ಈ ಕುರಿತಾದ ವರದಿ ಇಲ್ಲಿದೆ ನೋಡಿ. ನನಗೆ ಶಾಲಾ ಬೊರ್ಡ್ ನಲ್ಲಿ ಬರೆದಿರೋದ ಕಾಣಲ್ಲ… ನನಗೆ ಜಾಸ್ತಿ ಬೆಳಕಿಗೆ ಬಂದ್ರೆ ಕಣ್ಣು ಉರಿಯುತ್ತೆ.. ಸ್ವಲ್ಪವೇ ಕಾಲ ಓದಿದರೂ ತಲೆ ನೋವು ಸ್ಟಾರ್ಟ್ ಆಗುತ್ತೆ… ಮೂರು ವರ್ಷದಿಂದ ನಂಗೆ ಈ ಸಮಸ್ಯೆ ಇದೆ.. ಪಕ್ಕದಲ್ಲಿರುವವರು ಬರೆದಿರುವುದನ್ನು ನೋಡಿ ನಾನು ಬರೆದುಕೊಳ್ಳಬೇಕು, ದೂರದಿಂದ ಅಕ್ಷರ ಕಾಣಲ್ಲ.. ಎಸ್ ಹೀಗೆ ವಿದ್ಯಾರ್ಥಿಗಳು (school students) ಹೇಳ್ತಾ ಇರೋದು ಕೇಳಿದ್ರೆ ನಿಜಕ್ಕೂ ಅಚ್ಚರಿ ಜೊತೆಗೆ ಆತಂಕವೂ ಆಗುತ್ತೆ… ಇದು ಕೇವಲ ಯಾವುದೋ ಒಂದು ತರಗತಿಯ ಮಕ್ಕಳ ಸಮಸ್ಯೆಯಲ್ಲ.. ಈ ರೀತಿಯಾಗಿ ಹಾವೇರಿ ಜಿಲ್ಲೆಯಲ್ಲಿ 8,500 ಮಕ್ಕಳು ಈ ಸಮಸ್ಯೆ ಎದುರಿಸುತ್ತಿದ್ದಾರೆ. ರಾಷ್ಟ್ರೀಯ ಅಂಧತ್ವ ನಿವಾರಣೆ ಕಾರ್ಯಕ್ರಮದ ಅಡಿಯಲ್ಲಿ ಶಾಲಾ ಮಕ್ಕಳನ್ನ ತಪಾಸಣೆ ಮಾಡಿದಾಗ ಈ ಕಳವಳಕಾರಿ ಸಂಗತಿ ಬಹಿರಂಗವಾಗಿದೆ.

ಸರ್ಕಾರದ ನಿಯಮನುಸಾರ ಜಿಲ್ಲೆಯ 1796 ಸರ್ಕಾರಿ ಶಾಲೆಯಲ್ಲಿ ತಪಾಸಣೆ ಮಾಡಲಾಗಿದೆ. ಅದರಲ್ಲಿ 8,500 ವಿದ್ಯಾರ್ಥಿಗಳಿಗೆ ದೃಷ್ಟಿದೋಷ ಇರುವುದು ಪತ್ತೆಯಾಗಿದೆ. 2022-23 ರ ಸಾಲಿನಲ್ಲಿ 4,367 ಮಕ್ಕಳು ಹಾಗೂ 2023-24ನೇ ಸಾಲಿನಲ್ಲಿ 4,114 ಮಕ್ಕಳಲ್ಲಿ ದೋಷವಿರುವುರು ಪತ್ತೆಯಾಗಿದೆ. ಅಂದರೆ ಕೇವಲ ಒಂದೇ ವರ್ಷದಲ್ಲಿ ಸುಮಾರು 4 ಸಾವಿರ ವಿದ್ಯಾರ್ಥಿಗಳಲ್ಲಿ ದೃಷ್ಟಿದೋಷ ಜಾಸ್ತಿ ಆಗಿದೆ.

ಕೊರೋನಾ (Corona) ಅವಧಿಯಲ್ಲಿ ಶುರುವಾದ ಆನ್‌ಲೈನ್‌ ತರಗತಿಗಾಗಿ ಮೊಬೈಲ್ ಫೋನ್, ಕಂಪ್ಯೂಟರ್ ಸೇರಿದಂತೆ ಅತಿಯಾದ ಡಿಜಿಟಲ್ ಉಪಕರಣಗಳ ಬಳಕೆಯು ಮಕ್ಕಳ ಕಣ್ಣಿಗೆ ಮಾರಕವಾಗಿದೆ. ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಾಗಿ ಅವರಲ್ಲಿ ದೃಷ್ಟಿದೋಷ ಕಾಣಿಸಿಕೊಂಡಿದೆ ಎನ್ನಲಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ವಿಟಮಿನ್ ಕೊರತೆ, ಪೌಷ್ಟಿಕಾಂಶವುಳ್ಳ ಆಹಾರ, ತರಕಾರಿಯನ್ನ ಮಕ್ಕಳು ಹೆಚ್ಚಾಗಿ ಸೇವಿಸದೆ ಇರುವುದು ಕಾರಣ ಎನ್ನಲಾಗಿದೆ. ಆದ್ರೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ ಅಂತಾರೆ ನೇತ್ರ ತಜ್ಞರು.

Also Read:  ಬಾಳಲ್ಲಿ ಆವರಿಸಿತು ಅಂಧಕಾರ, ಕುಗ್ಗಲಿಲ್ಲ ಆತ್ಮವಿಶ್ವಾಸ: 3 ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವ ಮೂಲಕ ಮಾದರಿಯಾದ ಅಂಧ ಯುವತಿ

ಒಟ್ನಲ್ಲಿ ಹಾವೇರಿ ಜಿಲ್ಲೆಯ ಶಾಲಾ ಮಕ್ಕಳಲ್ಲಿ ವರ್ಷದಿಂದ ವರ್ಷಕ್ಕೆ ದೃಷ್ಟಿ ದೋಷ ಸಮಸ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಮೂಲ ಕಾರಣ ಏನು ಎಂಬುವುದು ಇದುವರೆಗೂ ತಿಳಿದು ಬಂದಿಲ್ಲ. ಆದ್ರೆ , ಮೊಬೈಲ್ ಪೋನ್ ನಿಂದ ದೂರ ಮಾಡೋದರ ಜೊತೆಗೆ ವಿಟಮಿನ್ ಯುಕ್ತ ಆಹಾರ ನೀಡುವುದರ ಮೂಲಕ ಪೋಷಕರು ಮಕ್ಕಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿದೆ.

ಹಾವೇರಿ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ