ಹಾವೇರಿ, ಆಗಸ್ಟ್ 11: ಕೊರೋನಾ ಸಾವು ಸಂಖ್ಯೆಯಲ್ಲಿ ಮಾತ್ರವಲ್ಲದೆ ಹಲವು ಅಪಖ್ಯಾತಿ ಗಳಿಸುವುದರಲ್ಲಿ ಹಾವೇರಿ (Haveri) ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಲಂಪಿ ಸ್ಕಿನ್ ಕಾಯಿಲೆ (Lumpy skin disease) ನಂತರ ಇದೀಗ ಮದ್ರಾಸ್ ಐ (Madras Eye) ಎಂಬ ಕಣ್ಣಿನ ರೋಗ ಜಿಲ್ಲೆಯನ್ನು ಕಾಡುತ್ತಿದೆ. ಹೌದು, ಜಿಲ್ಲೆಯಲ್ಲಿ ಮದ್ರಾಸ್ ಐ ಹಾವಳಿ ಹೆಚ್ಚಾಗುತ್ತಿದ್ದು, ಜನರು ಕಂಗೆಟ್ಟಿದ್ದಾರೆ.
ಕೊರೋನಾ ಸಾವು ಪ್ರಕರಣದಲ್ಲಿ ನಂಬರ್ 1 ಆಗಿದ್ದ ಹಾವೇರಿ ಜಿಲ್ಲೆ, ಲಂಪಿ ಸ್ಕಿನ್ ಕಾಯಿಲೆಯಿಂದ ದನ ಕರುಗಳ ಸಾವಿನಲ್ಲೂ ಅಗ್ರಸ್ಥಾನ ಪಡೆದಿದೆ. ರೈತರ ಆತ್ಮಹತ್ಯೆಯಲ್ಲೂ ಮೊದಲ ಸ್ಥಾನದಲ್ಲಿರುವ ಹಾವೇರಿ ಇದೀಗ ಕಣ್ಣುಬೇನೆ ರೋಗದಲ್ಲೂ ಮುಂದಿದೆ.
ಇದನ್ನೂ ಓದಿ: ಕಳೆದ ಒಂದು ವಾರದಲ್ಲಿ ಕರ್ನಾಟಕದಲ್ಲಿ 40 ಸಾವಿರ ಮದ್ರಾಸ್ ಐ ಪ್ರಕರಣಗಳು ಪತ್ತೆ
ಹೌದು, ಮದ್ರಾಸ್ ಐ ರೋಗದ ಪ್ರಕರಣಗಳು ಇಡೀ ರಾಜ್ಯದಲ್ಲಿ 64,506 ಕೇಸ್ಗಳು ಇವೆ. ಈ ಪೈಕಿ 9,901 ಪ್ರಕರಣಗಳು ಹಾವೇರಿ ಜಿಲ್ಲೆಯಲ್ಲೇ ಪತ್ತೆಯಾಗಿದೆ. ಇದು ಹಾವೇರಿ ಜಿಲ್ಲೆಯ ಜನತೆಯ ನಿದ್ದೆಗೆಡಿಸಿದೆ. ಇನ್ನು, ಮದ್ರಾಸ್ ಐ ರೋಗ ಪತ್ತೆ ಪ್ರಕರಣದಲ್ಲಿ ಬೀದರ್ಗೆ 2ನೇ ಸ್ಥಾನ, ಶಿವಮೊಗ್ಗ ಜಿಲ್ಲೆ 3ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಹೆಚ್ಚಾದ ಮದ್ರಾಸ್ ಐ ರೋಗ: ಮಾರ್ಗಸೂಚಿ ಹೊರಡಿಸಿದ ಆರೋಗ್ಯ ಇಲಾಖೆ
ಮದ್ರಾಸ್ ಐ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಜಿಲ್ಲಾಡಳಿ ವಿಫಲಗೊಂಡಿದೆ. ಆರೋಗ್ಯ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಜನರು ಪರದಾಟ ನಡೆಸುವಂತಾಗಿದೆ. ಸದ್ಯ ಹಾವೇರಿಯಲ್ಲಿ ಮದ್ರಾಸ್ ಐ ರೋಗ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜಿಲ್ಲಾಸ್ಪತ್ರೆಯಲ್ಲಿನ ಒಪಿಡಿ ವಿಭಾಗಕ್ಕೆ ನೂರಾರು ಸಂಖ್ಯೆಯಲ್ಲಿ ರೋಗಿಗಳು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ